ಆಟೋ- ಟ್ಯಾಕ್ಸಿ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ತಪಾಸಣೆ,ಕಣ್ಣಿನ ಪರೀಕ್ಷೆ

ರಸ್ತೆ ಸುರಕ್ಷತಾ ಸಪ್ತಾಹದ ಪ್ರಯುಕ್ತ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ ವತಿಯಿಂದ ಈ ದಿನ ಉಜಿರೆ ಶಾರದಾ ಮಂಟಪದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ಆಟೋ ಚಾಲಕರು ಹಾಗೂ ಟ್ಯಾಕ್ಸಿ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ತಪಾಸಣೆ ಮತ್ತು ಕಣ್ಣಿನ ಪರೀಕ್ಷೆ ತಪಾಸಣಾ ಕಾರ್ಯಕ್ರಮವನ್ನುಈ ದಿನ ಯಶಸ್ವಿಯಾಗಿ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಸುಮಾರು 150 ಜನ ಪಾಲ್ಗೊಂಡಿದ್ದು ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 01.00 ಗಂಟೆಯ ತನಕ ನಡೆಸಲಾಯಿತು.

ಕಾರ್ಯಕ್ರಮಕ್ಕೆ ಔಷಧೀಯ ವ್ಯವಸ್ಥೆಯನ್ನು ತಾಲ್ಲೂಕು ಔಷಧೀಯ ವರ್ತಕರ ಸಂಘ ಇವರು ಮತ್ತು ತಾಲ್ಲೂಕು ಆಸ್ಪತ್ರೆ ಬೆಳ್ತಂಗಡಿ ವತಿಯಿಂದ ಪೂರೈಸಲಾಗಿತ್ತು.

ಔಷಧ ಪೂರೈಸಿ ಸಹಕರಿಸಿದ ದಾನಿಗಳ ವಿವರ :
ಜಗಧೀಶ್ ಅಧ್ಯಕ್ಷರು ಔಷದ ವ್ಯಾಪಾರಸ್ಥರ ಸಂಘ ಬೆಳ್ತಂಗಡಿ
ಕೇಶವ ಭಟ್ ಗೌರವ ಅಧ್ಯಕ್ಷರು ಅವುರ್ ಡ್ರಗ್ ಹೌಸ್ ಉಜಿರೆ
ಶ್ರೀಧರ ಕೆ.ವಿ. ಸುರಕ್ಷಾ ಮೆಡಿಕಲ್ ಉಜಿರೆ
ಮಾಧವ ಗೌಡ ಗಣೇಶ್ ಮೆಡಿಕಲ್‌ ಬೆಳ್ತಂಗಡಿ
ಭರತ್ ಅಧ್ಯಕ್ಷರು ಶಾರಾದ ಸೇವಾ ಸಮಿತಿ ಉಜಿರೆ
ಶರತ್ ಕೃಷ್ಣ ಪಡ್ವೆಟ್ನಾಯ ಉದ್ಯಮಿ ಉಜಿರೆ
ಮೋಹನ್ ಲಕ್ಷ್ಮೀ ಗ್ರೂಪ್ ಉಜಿರೆ
ರವಿಚಂದ್ರ ಚಕ್ಕಿತ್ತಾಯ

Leave A Reply

Your email address will not be published.