ಸಿಕ್ಸ್ ಪ್ಯಾಕ್ ನ ಮೈಯ ಕೋಣಗಳು ಪ್ರದರ್ಶನ ತೋರಲು ಹೂ೦ಕರಿಸುತ್ತಿವೆ | ಪುತ್ತೂರಿನಲ್ಲಿ ಕಂಬಳಕ್ಕೆ ವಿದ್ಯುಕ್ತ ಚಾಲನೆ

ಪುತ್ತೂರಿನಲ್ಲಿ ನಡೆಯುತ್ತಿರುವ ಜೋಡಿಕೆರೆ ಕಂಬಳಕ್ಕೆ ತುಳುನಾಡು ಸಂಪ್ರದಾಯದ ಆಶಯದಲ್ಲಿ ವಿದ್ಯುಕ್ತ ಚಾಲನೆ ದೊರೆತಿದೆ.

ಇಂದು ಮತ್ತು ನಾಳೆ- ಎರಡು ದಿನ ಅಹೋ ರಾತ್ರಿ ನಡೆಯಲಿರುವ ಕಂಬಳದ ಉದ್ಘಾಟನೆಯನ್ನು ಪುತ್ತೂರು ಮಹಾಲಿಂಗೇಶ್ವರ ದೇವಳದ ಆಡಳಿತಾಧಿಕಾರಿಯಾಗಿರುವ ನವೀನ ಕುಮಾರ್ ಭಂಡಾರಿಯವರು ನೆರವೇರಿಸಿದರು.

ಜಯಕರ್ನಾಟಕದ ಸ್ಥಾಪಕಾಧ್ಯಕ್ಷ ಮುತ್ತಪ್ಪರೈ ಯವರ ಸಾರಥ್ಯದ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರ ಗೌರವಾಧ್ಯಕ್ಷತೆಯಲ್ಲಿ, ಶಕುಂತಲ ಶೆಟ್ಟಿಯವರ ಗೌರವ ಉಪಸ್ಥಿತಿಯಲ್ಲಿ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದಗಳೊಂದಿಗೆ ನಡೆಯುವ ಇಂದಿನ ಕಂಬಳವು, ತುಳುನಾಡಿನ ಒಕ್ಕಲು ಜನರ ಜಾನಪದ ಕ್ರೀಡೆಯಾಗಿದೆ.

ಪುತ್ತೂರು ಮತ್ತು ಸುತ್ತಮುತ್ತಲಿನ ಗಣ್ಯರಾದ ಮಾಜಿ ಶಾಸಕಿಯಾದ ಶಕುಂತಳಾ ಶೆಟ್ಟಿ, ಸೀತಾರಾಮ್ ರೈ ಸವಣೂರು, ನಿತ್ಯಾನಂದ ಮುಂಡೋಡಿ, ಸುದಾನ ಸಂಸ್ಥೆಯ ಮುಖ್ಯಸ್ಥ ರೇ । ವಿಜಯ ಹಾರ್ವಿನ್ , ಜುಮ್ಮಾ ಮಸ್ಜಿದ್ ಅಧ್ಯಕ್ಷ ಎಲ್. ಟಿ ಅಬ್ದುಲ್ ರಝಕ್, ಮತ್ತಿತರ ಘಟಾನುಘಟಿ ನಾಯಕರುಗಳು, ಜಾನಪದ ಕ್ಷೇತ್ರದಲ್ಲಿ ಹೆಸರು ಗಳಿಸಿದವರು ಮತ್ತು ಕಂಬಳ ಪ್ರಿಯರು ಹಾಜರಿದ್ದರು.

ಈಗಾಗಲೇ ಜಾನಪದ ಕ್ರೀಡೆಯಾದ ಕಂಬಳದ ಉದ್ಘಾಟನೆಯು ಮುಗಿದಿದ್ದು, ಮಿರಿಮಿರಿ ಮಿಂಚುವ ಜೋಡಿ ಕೋಣಗಳು ತಮ್ಮ ಕಟ್ಟ್ಟುಮಸ್ತಾದ ಸಿಕ್ಸ್ ಪ್ಯಾಕ್ ತೋರಿಸುತ್ತಾ ಕಂಬಳಗದ್ದೆಯ ನೀರಿಗಿಳಿದು ತಮ್ಮ ಬಿರುಸು ಬೆನ್ನನ್ನು ಒಂದಿಷ್ಟು ತಂಪು ಮಾಡಿಕೊಂಡಿವೆ.

ಹೊಸಕನ್ನಡದ ನೋಟಿಫಿಕೇಶನ್ ಬಂದಾಗ ‘ allow ‘ ಬಟನ್ ಒತ್ತಿ. ತಕ್ಷಣದ ನಮ್ಮ ಸುದ್ದಿ-ಅಂಕಣಗಳನ್ನು ಓದಿರಿ.

Leave A Reply

Your email address will not be published.