ಪುತ್ತೂರಿನಲ್ಲಿ ಹಚ್ಚಹಗಲೇ ಲ್ಯಾಪ್ ಟಾಪ್ ಕಳ್ಳತನ | ಆಫೀಸು ತೆರಿದಿಟ್ಟು ಹೋದಿರೋ ಹುಷಾರ್ !

Share the Article

ಪುತ್ತೂರು : ಇಲ್ಲಿನ ನೆಲ್ಲಿಕಟ್ಟೆ ರೈಲ್ವೆ ಸ್ಟೇಷನ್ ನ ರಸ್ತೆಯಲ್ಲಿರುವ ಪುನ್ಮಯಾ ಕನ್ಸಲ್ಟೆನ್ಸಿಯ ಆಫೀಸಿನಲ್ಲಿ ನಡೆದಿದೆ.

ಕಚೇರಿಯ ಮಾಲಕರಾದ ಪ್ರಮೋದ್ ರೈ ಯವರು ಮಧ್ಯಾಹ್ನದ ಊಟಕ್ಕೆಂದು ಹೊರಗೆ ತೆರಳಿದ್ದರು. ಕಚೇರಿಯಲ್ಲಿರುವ ಇತರ ಸಿಬ್ಬಂದಿಯವರೂ ಹೊರ ಹೋಗಿದ್ದರು.

ಈ ಸಮಯದಲ್ಲಿ ಕೆಂಪು ಷರಟಿನ ವ್ಯಕ್ತಿಯೊಬ್ಬ ಸರಸರ ಬಂದು ಲ್ಯಾಪ್ ಟಾಪ್ ಅನ್ನು ಕದ್ದೊಯ್ದಿರುವುದು ಅಂಗಡಿಯ ಸಿ ಸಿ ಟಿವಿ ಯಲ್ಲಿ ಕಂಡುಬಂದಿದೆ.

ಹಲವು ವರ್ಷಗಳಿಂದ ಆಫೀಸನ್ನು ಹೀಗೆ ತೆರೆದಿಟ್ಟು ಹೋಗಿದ್ದರೂ, ಯಾವುದೇ ಘಟನೆ ನಡೆದಿರಲಿಲ್ಲಎಂದು ಅಲ್ಲಿನ ಸಿಬ್ಬಂದಿ ತಿಳಿಸಿರುತ್ತಾರೆ.
ಪುತ್ತೂರು ಪೊಲೀಸ್ ಠಾಣೆಯಲ್ಲಿ ಕಳ್ಳತನದ ಕೇಸು ದಾಖಲಾಗಿದೆ.

Leave A Reply

Your email address will not be published.