ಸವಣೂರು ಗ್ರಾ.ಪಂನ ಘನ ತ್ಯಾಜ್ಯ ಘಟಕಕ್ಕೆ ಜಿ.ಪಂ.ಸಿಇಓ ಭೇಟಿ, ಶ್ಲಾಘನೆ

ಸವಣೂರು : ಪಾಲ್ತಾಡಿ ಗ್ರಾಮದ ನಾಡೋಳಿಯಲ್ಲಿರುವ ಸವಣೂರು ಗ್ರಾ.ಪಂ.ನ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಗುರುವಾರ ಸಂಜೆ ದ.ಕ.ಜಿ.ಪಂ.ಸಿಇಓ ಡಾ.ಆರ್ ಸೆಲ್ವಮಣಿ ಬೇಟಿ ನೀಡಿ ಘಟಕದ ಕಾರ್ಯವನ್ನು ವೀಕ್ಷಿಸಿದರು.

ಈ ಸಂದರ್ಭ ಮಾತನಾಡಿದ ಡಾ.ಸೆಲ್ವಮಣಿ ಅವರು, ತ್ಯಾಜ್ಯ ವಿಲೇವಾರಿ ಘಟಕದ ವ್ಯವಸ್ಥೆ ಅಚ್ಚುಕಟ್ಟಾಗಿದ್ದು, ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಮಾಡಬೇಕು.ತ್ಯಾಜ್ಯ ವಿಲೇವಾರಿ ತಗಲುವ ವೆಚ್ಚವನ್ನು ತ್ಯಾಜ್ಯಸಂಗ್ರಹಿಸಿ ನೀಡುತ್ತಿರುವವರಿಂದಲೇ ಪಡೆಯಬೇಕು. ಶುಲ್ಕ ಹೆಚ್ಚಳಕ್ಕೆ ಅವಕಾಶವಿದೆ. ಈ ಕುರಿತು ಆಡಳಿತ ಮಂಡಳಿ ಸಭೆಯಲ್ಲಿ ಕ್ರಮಕೈಗೊಳ್ಳಬಹುದು. ಘಟಕಕ್ಕೆ ಆವಶ್ಯಕವಾಗಿರುವ ಮೂಲಭೂತ ವ್ಯವಸ್ಥೆಗಾಗಿ 2 ಲಕ್ಷ ಅನುದಾನ ಮಂಜೂರು ಮಾಡಲಾಗುವುದು ಎಂದರು.


Ad Widget

Ad Widget

Ad Widget

ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಅವರು, ಘಟಕಕ್ಕೆ ಆವಶ್ಯವಿರುವ ವಿದ್ಯುತ್ ಸಂಪರ್ಕ,ಕೊಳವೆ ಬಾವಿ ಕೊರೆಯಲು ಗ್ರಾ.ಪಂ.ನಿಂದ ಅನುದಾನ ಮೀಸಲಿಡಲಾಗಿದೆ ಎಂದರು.

ಪಿಡಿಓ ನಾರಾಯಣ ಬಟ್ಟೋಡಿ ಅವರು ಘಟಕದ ಕಾರ್ಯ ನಿರ್ವಹಣೆಯ ಕುರಿತು ಸಿಇಓ ಅವರಿಗೆ ವಿವರಿಸಿದರು.

ಈ ಸಂದರ್ಭ ತಾ.ಪಂ.ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ನವೀನ್ ಭಂಡಾರಿ, ಸವಣೂರು ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ, ಗ್ರಾ.ಪಂ.ಲೆಕ್ಕಸಹಾಯಕ ಎ.ಮನ್ಮಥ,ಸಿಬಂದಿ ಪ್ರಮೋದ್ ಕುಮಾರ್ ರೈ, ಪಾಲ್ತಾಡಿ ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್ ಚೆನ್ನಾವರ, ಸ್ವಚ್ಚತಾ ನಿರ್ವಾಹಕ ಬಾಬು ಉಪಸ್ಥಿತರಿದ್ದರು.

Leave a Reply

error: Content is protected !!
Scroll to Top
%d bloggers like this: