ಹಾರಾಡಿ ಅಬ್ದುಲ್ ರಝಾಕ್- ಡಿವಿ ಸದಾನಂದ ಗೌಡರ ಸ್ನೇಹಕ್ಕೆ ಒಂದು ಹೊಸ ಸಿನಿಮಾ । ಟ್ವಿನ್ ಬ್ರದರ್ಸ್ !

ದಕ್ಷಿಣ ಕನ್ನಡದ ಪುತ್ತೂರಿನವರಾದ ಹಾರಾಡಿ ಅಬ್ದುಲ್ ರಝಾಕ್ ಇವರ ನಟನೆಯ ಹೊಸ ಟೆಲಿ ಫಿಲಂ ಶೀಘ್ರದಲ್ಲೇ ಸೆಟ್ಟೇರಲಿದೆ !

ಇವರನ್ನು ಸಡನ್ ಆಗಿ ಯಾವುದಾದರೂ ಆಫೀಸಿನಲ್ಲಿ, ವಿಧಾನಸೌಧದ ಮೊಗಸಾಲೆಯಲ್ಲಿ ನೀವು ಕಂಡರೆ, ನೀವು ನಿಮಗರಿವಿಲ್ಲದಂತೆಯೇ ಅವರಿಗೆ ನಮಸ್ಕಾರ ಮಾಡುತ್ತೀರಿ. ಹೇಳಿ ಕೇಳಿ ಅವರು ಕೇಂದ್ರ ಮಂತ್ರಿ. ಮೋದಿ ಸರ್ಕಾರದ್ಲಲ್ಲಿ ದೇಶದ ನಾಲ್ಕನೆಯ ಮುಖ್ಯ ಖಾತೆಯನ್ನು ಹೊಂದಿದವರು. ಅವರು ಬೇರೆ ಯಾರೂ ಅಲ್ಲ. ಅವರು ಡಿ ವಿ. ಸದಾನಂದ ಗೌಡರು !

ಹೋಲ್ಡ್ ಆನ್… ಅವರು ಸದಾನಂದ ಗೌಡರಲ್ಲವೇ ಅಲ್ಲ !

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

ಅವರೇ, ಸದಾನಂದ ಗೌಡರನ್ನು ಪೂರ್ತಿಯಾಗಿ ಹೋಲುವ ನಮ್ಮ ಪುತ್ತೂರಿನ ಸಮಾಜ ಸೇವಕ, ವ್ಯವಹಾರಸ್ಥ, ಡಿ. ವಿ. ಸದಾನಂದಗೌಡರ ಅತ್ಯಾಪ್ತ ವಲಯದಲ್ಲಿರುವ ಹಾರಾಡಿ ಅಬ್ದುಲ್ ರಝಾಕ್.
ನೋಡಲು ಹಾರಾಡಿ ಅಬ್ದುಲ್ ರಝಾಕ್ ಅವರು ಥೇಟು ಸದಾನಂದ ಗೌಡರೇ ! ಅದೇ ಹೈಟು, ಅದೇ ದೇಹಗಾತ್ರ !! ಅದೇ ವೇಷ ಭೂಷಣ !!!

ಡಿ ವಿ ಸದಾನಂದ ಗೌಡರ ಬಗ್ಗೆ ಗೊತ್ತಿರುವವರಿಗೆ ಇವರ ಬಗ್ಗೆ ತಿಳಿಯದೆ ಇರುವ ಸನ್ನಿವೇಶವೇ ಇಲ್ಲ. ಮೂಲತಃ ಸುಳ್ಯದವರಾದ ಡಿವಿ ಸದಾನಂದ ಗೌಡರು ಪುತ್ತೂರಿಗೆ ಬಂದು ನೆಲೆಸಿದ ಮೇಲೆ ಹಾರಾಡಿ ಅಬ್ದುಲ್ ರಝಾಕ್ ಮತ್ತು ಸದಾನಂದ ಗೌಡರು ಅಕ್ಕಪಕ್ಕದ ಮನೆಯವರಾದರು. ಅಂದಿನಿಂದ ಶುರುವಾದ ಅವರ ಸ್ನೇಹಕ್ಕೆ ಈಗ ನಲ್ವತ್ತು ವರ್ಷಗಳಾಗುತ್ತಾ ಬಂತು.

ಇವತ್ತು ಈ ಟ್ವಿನ್ ಬ್ರದರ್ಸ್ ನ ಗಾಢ ಗೆಳೆತನದ ನೆನಪಿನಲ್ಲಿ ಹೊಸ ಟೆಲಿ ಫಿಲಂ ಒಂದನ್ನುಹಾರಾಡಿ ರಝಾಕ್ ರು ಶೀಘ್ರದಲ್ಲೇ ಪ್ಲಾನ್ ಮಾಡುತ್ತಿದ್ದಾರೆ. ಅದರಲ್ಲಿಸ್ವತಃ ಒಂದು ಮುಖ್ಯಪಾತ್ರವನ್ನು ತಾವೇ ನಿರ್ವಹಿಸಲಿದ್ದಾರೆ. ಡಿವಿ ಸದಾನಂದರ ಪಾತ್ರಕ್ಕೆ ತಲಾಶೆ ನಡೆದಿದೆ. ಪುತ್ತೂರಿನ ಮತ್ತು ಸುತ್ತಮುತ್ತಲಿನ ಆಸುಪಾಸಿನ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಲಿದೆ.

ಚಿತ್ರದ ನಿರ್ದೇಶನವನ್ನು ಕಡೂರಿನ ಕುoಞ ಕಣ್ಣನ್ ಪಿಳ್ಳೈ ಎಂಬ ನಿರ್ದೇಶಕ ಮಾಡಲಿದ್ದಾರೆ.

ಬೆಸ್ಟ್ ವಿಷಸ್ ಅಬ್ದುಲ್ ರಝಾಕ್ !

0 thoughts on “ಹಾರಾಡಿ ಅಬ್ದುಲ್ ರಝಾಕ್- ಡಿವಿ ಸದಾನಂದ ಗೌಡರ ಸ್ನೇಹಕ್ಕೆ ಒಂದು ಹೊಸ ಸಿನಿಮಾ । ಟ್ವಿನ್ ಬ್ರದರ್ಸ್ !”

Leave a Reply

error: Content is protected !!
Scroll to Top
%d bloggers like this: