ವಸಂತ ಬಂಗೇರ । ಹುಟ್ಟು ಹೋರಾಟಗಾರನಿಗೆ ಹುಟ್ಟು ಹಬ್ಬದ ಸಂಭ್ರಮ @ 75

ಬೆಳ್ತಂಗಡಿಯ ಐದು ಬಾರಿಯ ಶಾಸಕ, ಸರಿಸುಮಾರು ಅರ್ಧ ಶತಮಾನಗಳಷ್ಟು ಕಾಲ ಸಾರ್ವಜನಿಕ ಜೀವನಾಡಿಲ್ಲಿ ಜನರೊಂದಿಗೆ ಕಳೆದ ಜನರ ‘ ಮಾಸ್ ‘ ನಾಯಕ ವಸಂತ ಬಂಗೇರರಿಗಿಂದು 75 ವರ್ಷಗಳ ಸಂತೋಷದ, ಸಂಭ್ರಮದ, ಸಾಧನೆಯ ಹುಟ್ಟುಹಬ್ಬ.

ಆ ನಿಟ್ಟಿನಲ್ಲಿ, ವಸಂತ ಬಂಗೇರ ಅವರ ಅಭಿನಂದನಾ ಸಮಿತಿ ಮತ್ತು ಸಂಘ ಸಂಸ್ಥೆಗಳು, ಮುಖ್ಯಸ್ಥರುಗಳು ಇವತ್ತು ಬೆಳ್ತಂಗಡಿಯ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾ ಭವನದಲ್ಲಿಸಂಭ್ರಮ ಸಡಗರದಿಂದ ನಡೆದಿದೆ.

ಕಾರ್ಯಕ್ರಮವನ್ನು ಸುಬ್ರಮಣ್ಯ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಆಶೀರ್ವಚನ ನೀಡಿ ಮಾತನಾಡಿದ ಅವರು, ಬಂಗೇರರು ಅಜಾತಶತ್ರುವಾಗಿ ಜೀವನ ಸಾಗಿಸಿದವರು. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಸಾಮಾನ್ಯ ಜನರ ಬದುಕಿಗೆ ಶ್ರಮ ವಹಿಸಿದವರು ಎಂದರು.

ಅಭಿನಂದನಾ ಸಮಿತಿಯ ಅಧ್ಯಕ್ಷರಾದ ಎಸ್ ಜಯರಾಮ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಬೊಕ್ಕಪಟ್ನಮಸೀದಿಯ ಧರ್ಮಗುರುವಾದ ಹಾಜಿ ಅಬ್ದುಲ್ ಅಜೀಜ್, ಸ್ವಾತಂತ್ರ್ಯ ಹೋರಾಟಗಾರ ಭೋಜರಾಜ್ ಹೆಗ್ದೆ, ವಿಮುಕ್ತಿ ಕೆನರಾದ ವಿನೋದ್ ಮಸ್ಕರೇನ್ಹಸ್, ವಸಂತ ಬಂಗೇರ ಅವರಿಗೆ ಶುಭ ಆಶಿಸಿದರು.

ಖ್ಯಾತ ಸಾಹಿತಿ ಅರವಿಂದ ಚೊಕ್ಕಾಡಿಯವರು ಅಭಿನಂದನೆ ಸಲ್ಲಿಸಿ ಮಾತನಾಡಿ ನಾಡಿನ ಹಲವು ಗಣ್ಯರು, ಅಭಿಮಾನಿಗಳು ಬಂಗೇರರಿಗೆ ಕೈ ಕುಲುಕಿ ಆಶೀರ್ವಾದ ನೀಡಿದರು.

ವೇದಿಕೆಯಲ್ಲಿ ಸಂಚಾಲಕರಾದ ದೇವಿಪ್ರಸಾರವರು, ಕಾರ್ಯದರ್ಶಿ ಮನೋಹರ್ ಇಳಂತಿಲ, ಶಿಬಿ ಧರ್ಮಸ್ಥಳ, ಶ್ರೀನಿವಾಸ್ ಕಿಣಿ, ಜಿ. ವೇಗಸ್ , ಅಶ್ರಫ್ ನೆರಿಯ ಉಪಸ್ಥಿತರಿದ್ದರು.

Leave A Reply

Your email address will not be published.