ಮಾಣಿ ಬಳಿ ಭೀಕರ ಅಪಘಾತ । ವಿವೇಕಾನಂದ ಡಿಪ್ಲೋಮ ವಿದ್ಯಾರ್ಥಿ ಪರೀಕ್ಷಿತ್ ಮತ್ತು ಕಲ್ಲಡ್ಕ ನಿವಾಸಿ ಅಜ್ಮಾನ್ ಮೃತ
ಮಾಣಿ ಬಳಿಯಲ್ಲಿ ನಡೆದ ಹೋಂಡಾ ಆಕ್ಟಿವಾ ಮತ್ತು ಬೈಕುಗಳ ಪರಸ್ಪರ ಮುಖಾಮುಖಿ ಡಿಕ್ಕಿಯಲ್ಲಿ ಸವಾರರಿಬ್ಬರೂ ಮರಣವನ್ನಪ್ಪಿದ್ದಾರೆ. ವಿವೇಕಾನಂದ ಡಿಪ್ಲೋಮ ವಿದ್ಯಾರ್ಥಿ ಪರೀಕ್ಷಿತ್ ಮತ್ತು ಕಲ್ಲಡ್ಕ ನಿವಾಸಿ ಅಜ್ಮಾನ್ ಎಂದು ಗುರುತಿಸಲಾಗಿದೆ. ಕೊಡಾಜೆ ಕಡೆಯಿಂದ ಪರೀಕ್ಷಿತ್ ಬರುತ್ತಿದ್ದು, ಅಜ್ಮಾನ್ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ. ಅತೀ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.