ಅಮೇರಿಕ ವಾಯು ನೆಲೆ ಮೇಲೆ ಇರಾನ್ ಮತ್ತೆ ದಾಳಿ । ಟ್ರ೦ಪ್ ನ ಅಸಹ್ಯ ಮೌನದ ಹಿಂದಿನ ಮರ್ಮವೇನು ?
ಇಂದು ಮುಂಜಾನೆ ಅಮೇರಿಕಾದ ವಾಯು ನೆಲೆಯ ಮೇಲೆ ಇರಾನ್ ದಾಳಿ ನಡೆಸಿದೆ. ಈ ದಾಳಿಯಲ್ಲಿ 4 ಜನರು ಗಾಯಗೊಂಡಿದ್ದಾರೆ.
ನಿಮಗೆ ಗೊತ್ತಿರಲಿ : ಇಬ್ಬರು ವಿರೋಧಿಗಳು ಪರಸ್ಪರ ವಾಗ್ದಾಳಿ ನಡೆಸುತ್ತ ಬಂದರೆ, ಆಗ ಅವರು ಯಾವುದೇ ಕಾರ್ಯಾಚರಣೆಗೆ ಇಳಿಯುವುದಿಲ್ಲ. ಒಂದು ವೇಳೆ, ವಿರೋಧಿಗಳಲ್ಲಿ ಒಬ್ಬಾತ ಸಡನ್ ಆಗಿ ಮೌನವಾಗಿ ಬಿಟ್ಟರೆ, ಅದು ವಿನಾಶಕ್ಕೆ ಮುಂಚಿನ ಮೌನದ ಸಂಕೇತ!
ಈಗ ಆಗಿರೋದೇ ಅದು. ಯಾವತ್ತೂ ವ್ಯಗ್ರವಾಗಿರುವ ಡೊನಾಲ್ಡ್ ಟ್ರ೦ಪ್ ಸೈಲೆಂಟಾಗಿದ್ದಾರೆ : ಅಸಹ್ಯ ಮೌನಕ್ಕೆ ಶರಣಾಗಿದ್ದಾರೆ. ಶಾಂತಿ ಮಂತ್ರ ಪಠಿಸುತ್ತಿದ್ದಾರೆ.
ಇದು ತೆರೆಮರೆಯಲ್ಲಿ ಬೃಹತ್ ಕಾರ್ಯಾಚರೆಣೆಗೆ ಮುಂಚಿನ ನಿಶ್ಯಬ್ದ ಎಂದೇ ಯುದ್ಧ ಪಂಡಿತರು ವ್ಯಾಖ್ಯಾನಿಸುತ್ತಿದ್ದಾರೆ.
ದೂರದಿಂದ ಕೂತು ಯುದ್ಧದ ಬಗ್ಗೆ ಕೇಳುವುದು, ಓದುವುದು ಒಂದು ತರಹದ ಉತ್ಸಾಹದ, ಉನ್ಮಾದದ ವಿಷಯ. ಆದರೆ ಯುದ್ಧ, ಆಯಾ ಪ್ರದೇಶದ ಮೇಲೆ ಬೀರುವ ಪರಿಣಾಮಗಳನ್ನು ಬರಿಯ ಶಬ್ದಗಳಲ್ಲಿ ವಿವರಿಸಿ ಹೇಳಲಾಗುವುದಿಲ್ಲ. ನೋವಿನ ತೀವ್ರತೆ ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು.