ವಿವೇಕಾನಂದ ಸಂಸ್ಥೆಯಿಂದ ವಿವೇಕ ಜಯಂತಿ । ಹನ್ನೆರಡು ಸಾವಿರಕ್ಕೂ ಹೆಚ್ಚಿನ ಜನ ಭಾಗಿ

ಪುತ್ತೂರು : ” ಶತಮಾನಗಳಷ್ಟು ಹಿಂದೆಯೇ ಭಾರತದ ಬೌದ್ಧಿಕ ಸಾಮರ್ಥ್ಯವನ್ನು ಜಗತ್ತಿನ ಮೂಲೆ-ಮೂಲೆಗೆ ಪರಿಚಯಿಸಿದವರು ಶ್ರೀ ಸ್ವಾಮಿ ವಿವೇಕಾನಂದರು. ಅಮೇರಿಕಾದ ಸರ್ವಧರ್ಮ ಸಮ್ಮೇಳನಕ್ಕೆ ಅವರು ತೆರಳಿದ್ದಾಗ, ಅಲ್ಲಿ ಅವರನ್ನು ಮೊದಲಿಗೆ ಭೇಟಿಯಾದ ಆಕ್‌ಫರ್ಡ್ ಪ್ರೊಫೆಸರ್ ಜಾನ್ ಎಚ್. ರೈಟ್ ಅವರು ಪಾಶ್ಚಾತ್ಯ ಎಲ್ಲ ವಿದ್ವಾಂಸರ ಜ್ಞಾನವನ್ನು ಒಂದೇ ಕಡೆ ಸೇರಿಸಿದರೂ ಅದು ವಿವೇಕಾನಂದರ ಜ್ಞಾನಕ್ಕೆ ಸಮವಲ್ಲಎಂದು ಬರೆದ ಪತ್ರದ ದಾಖಲೆ ಈಗಲೂ ಅಲ್ಲಿ ಇದೆ ”ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ನಯ ಬಿದಿರೆ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಇಂದು ನೆಹರುನಗರದ ವಿವೇಕಾನಂದ ಕ್ಯಾಂಪಸ್‌ನಲ್ಲಿ ನಡೆದ ‘ ನೆಲ ನೆಲೆ ಮತ್ತು ಶಿಕ್ಷಣ ‘ಎಂಬ ಆಶಯದ ಮೇಲೆ ಆಯೋಜಿಸಲಾಗಿದ್ದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ರಾಷ್ಟ್ರೋತ್ಥಾನ ಸಂತ :

”ಸರ್ವಸಮಾನತೆಯ ಭಾವವನ್ನು ಎಲೆ ವಯಸ್ಸಿನಿಂದಲೇ ರೂಢಿಸಿಕೊಂಡವರು ಸ್ವಾಮಿ ವಿವೇಕಾನಂದರು. ಹಾಗಾಗಿಯೇ ತನ್ನ ಯೌವನದ ದಿನಗಳಲ್ಲಿ ದೇಶದ ಬಗೆಗೆ, ರಾಷ್ಟ್ರ ಜಾಗೃತಿಯ ಬಗೆಗೆ ಚಿಂತನೆ ನಡೆಸುವುದಕ್ಕೆ, ಮಾನವ ಜನಾಂಗದ ಉನ್ನತಿ ಕಾರ್ಯದಲ್ಲಿ ತನ್ನನ್ನು ತಾನು ಅರ್ಪಿಸಿಕೊಳ್ಳಲು ಸಾಧ್ಯವಾಯಿತು. ಹಾಗೆಯೇ ವಿವೇಕಾನಂದರ ವ್ಯಕ್ತಿತ್ವ ರೂಪುಗೊಳ್ಳುವಿಕೆಯಲ್ಲಿ ರಾಮಕೃಷ್ಣಪರಮಹಂಸರ ಪಾತ್ರವೂ ಮಹತ್ವವಾದದ್ದು. ಅವರಿಬ್ಬರೂ ಅತ್ಯುತ್ತಮ ಗುರು-ಶಿಷ್ಯ ಪರಂಪರೆಗೆ ಮುನ್ನುಡಿ ಬರೆದವರು ” ಎಂದು ನುಡಿದರು.

“ಭಾರತ ಹಾವಾಡಿಗರ-ಮೂಢ ಆಚರಣೆಯಲ್ಲಿ ತೊಡಗಿರುವವರ ದೇಶ ಎಂಬ ಪ್ರಪಂಚದಾದ್ಯಂತ ಹಬ್ಬಿದ್ದ ಸುಳ್ಳು ಕಲ್ಪನೆಯ ಸಂದರ್ಭದಲ್ಲಿ ಭಾರತ ಏನು ಎಂಬುದನ್ನು ಜಾಗತಿಕ ವೇದಿಕೆಯಲ್ಲಿ ಸರ್ವರೂ ತಲೆದೂಗುವಂತೆ ತಿಳಿಹೇಳಿದವರು ಸ್ವಾಮಿ ವಿವೇಕಾನಂದರು. ಅವರು ಬದುಕಿದ್ದು 39 ವರ್ಷ ; ಅದೂ ವಿವೇಕಾನಂದ ಎಂಬ ಹೆಸರಿನಲ್ಲಿ ಕೇವಲ 5 ವರ್ಷಗಳು ಮಾತ್ರ. ಆದರೆ ಆ ಕಿರು ಅವಧಿಯಲ್ಲಿ ಏರಿದ ಎತ್ತರ ವಿಸ್ಮಯಕಾರಿ” ಎಂದು ಅಭಿಪ್ರಾಯಪಟ್ಟರು.

ಹಿಂದೂಗಳು ಎಂದೂ ಕೋಮುವಾದಿಗಳಲ್ಲ:

ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ ನೆಲ-ನೆಲೆ-ಶಿಕ್ಷಣದ ಬಗೆಗೆ ಮತ್ತೆ ಮತ್ತೆ ನೆನಪಿಸಿದವರು ಸ್ವಾಮಿ ವಿವೇಕಾನಂದವರು. ಭಾರತೀಯ ಮಣ್ಣಿನ ಶ್ರೇಷ್ಟತೆಯನ್ನು ಸ್ವತಃ ಆಚರಣೆಯ ಮೂಲಕ ಸಾರಿದವರು ಅವರು. ಇಂತಹ ದೇಶದಲ್ಲಿ ನಾವು ಹುಟ್ಟಿದವರೆಂಬುದು ನಮ್ಮ ಪುಣ್ಯ ಎಂದು ನುಡಿದರು.

“ರಪಂಚಕ್ಕೆ ಒಳಿತನ್ನು ಬಯಸಿದ ಹಿಂದೂ ಧರ್ಮವನ್ನು ಕೋಮುವಾದವೆಂದು ಜರೆಯುವ ಮಂದಿ ಹುಟ್ಟಿಕೊಂಡಿರುವುದು ಇಂತಹ ದುರ್ದೈವದ ಸಂಗತಿ.
ನಾವು ಮತ್ತೊಬ್ಬರಿಗೆ ಕೊಡುವುದಕ್ಕೆ ಹೊರಟಾಗಲೂ ಆಕ್ಷೇಪಿಸುವ ಮಂದಿ ಇಲ್ಲಿದ್ದಾರೆ. ಇದಕ್ಕೆ ಉದಾಹರಣೆ ಪೌರತ್ವ ತಿದ್ದುಪಡಿ ಕಾಯಿದೆ. ಭಾರತೀಯ ಮಣ್ಣಿನ ಗುಣ, ಯೋಗ್ಯತೆ, ನೆಲೆ, ಬೆಲೆಗಳನ್ನು ಅರ್ಥ ಮಾಡಿಕೊಳ್ಳುವುದು ಇಂದಿನ ಅಗತ್ಯ”

” ಎಲ್ಲರಿಗೂ ಆಶ್ರಯ ಕೊಟ್ಟವರು. ಆದರೆ ಜಗತ್ತಿನಲ್ಲಿ ನಮಗೆ ಆಶ್ರಯ ಕೊಡುವ ಯಾರಾದರೂ ಇದ್ದಾರೆಯೇ ?”ಎಂದು ಅವರು .
ಭಾರತವನ್ನು ಹೊರತುಪಡಿಸಿದರೆ ನಮಗೆ ಯಾರಿಗೂ ನೆಲೆ ಇಲ್ಲ. ಹಾಗಾಗಿ ನಮ್ಮ ಭೂಮಿಯನ್ನು ರಕ್ಷಿಸುವ ಹೊಣೆ ನಮ್ಮ ಮೇಲಿದೆ. ಕಾಶ್ಮೀರದಲ್ಲಿ ಹಿಂದೆ ನಡೆಯುತ್ತಿದ್ದ ಕಲ್ಲು ಹೊಡೆಯುವ ದುಷ್ಟ ಪ್ರವೃತ್ತಿ ಮಂಗಳೂರಿನವರೆಗೆ ಇವತ್ತು ಹಬ್ಬಿದೆ. ದೇಶ ವಿಭಜನೆಯಾದಾಗ ಪಾಕಿಸ್ಥಾನದಂತಹ ರಾಷ್ಟ್ರದಲ್ಲಿ ಉಳಿದು ನಂತರ ಶೋಷಣೆಗೊಳಗಾದವರಿಗೆ ನಾವು ನೆಲೆ ಕಲ್ಪಿಸುವುದು ಅಗತ್ಯ. ಯಾಕೆಂದರು ಅವರೆಲ್ಲರೂ ಮೂಲತಃ ನಮ್ಮವರೇ ಎಂದು ಅಭಿಪ್ರಾಯಪಟ್ಟರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾದ ಡಾ.ಕೆ.ಎಂ.ಕೃಷ್ಣ ಭಟ್ ಸ್ವಾಗತ ಮತ್ತು ಪ್ರಸ್ತಾವನೆಗೈದು ಸುಮಾರು ಸಂಘವು ಅರವತ್ತೇಳು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಮಾತೃಭಾಷಾ ಶಿಕ್ಷಣಕ್ಕೆ ವಿವೇಕಾನಂದ ವಿದ್ಯಾವರ್ಧಕ ಸಂಘ ಅಪಾರ ಆದ್ಯತೆ ನೀಡುತ್ತಿದೆಯೆಂದರು.
ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರು ವಂದೇ ಮಾತರಂ ಗೀತೆ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಿಂದ ಆಶಯಗೀತೆ ಹಾಡಿದರು

ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರು, ಆಡಳಿತ ಮಂಡಳಿ ಮುಖ್ಯಸ್ಥರು , ಉಪನ್ಯಾಸಕ-ಉಪನ್ಯಾಸಕೇತರ ವೃಂದ, ಆಹ್ವಾನಿತರು- ಸಾರ್ವಜನಿಕರು, ವಿವೇಕಾನಂದ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಲನ್ನೊಳಗೊಂಡಂತೆ ಸುಮಾರು ಹನ್ನೆರಡು ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವಿದ್ಯಾವರ್ಧಕ ಸಂಘದ ಜತೆ ಕಾರ್ಯದರ್ಶಿ ಶ್ರೀ ಕೃಷ್ಣ ಕುಮಾರ್ ಶೆಟ್ಟಿ ವಂದಿಸಿದರು. ವಿವೇಕಾನಂದ ಪದವಿ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಎಸ್. ಕಾರ್ಯಕ್ರಮ ನಿರ್ವಹಿಸಿದರು.

Leave A Reply

Your email address will not be published.