ಸ್ಪೋಟಕ ಚಿತ್ರಗಳಿವೆ !| ಸಾಂದೀಪನಿಯಲ್ಲಿ ಕ್ರೀಡೋತ್ಸವ-ವಾರ್ಷಿಕೊತ್ಸವ-ಸಾಹಸಕ್ರೀಡೆಗಳ ವೈಭವ !

0 15

ನರಿಮೊಗರು : ಶಾಲಾ ವಾರ್ಷಿಕೋತ್ಸವ ಎಂದರೆ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಕ್ಕಷ್ಟೆ ಸೀಮಿತಗೊಳ್ಳುವುದು ಸಾಮಾನ್ಯ. ಆದರೆ ಪುತ್ತೂರು ತಾಲೂಕಿನ ನರಿಮೊಗರಿನ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ನಡೆದ ವಾರ್ಷಿಕೊತ್ಸವದಂದು ಪುಟ್ಟ ಪುಟ್ಟ ಮಕ್ಕಳಿಂದ ಮೈನವಿರೇಳಿಸುವ ಸಾಹಸ ಕ್ರೀಡೆಗಳು ನಡೆಯಿತು.

ವಿದ್ಯುತ್ ದೀಪಗಳ ಬೆಳಕಿನಿಂದ ನಳನಳಿಸುತ್ತಿದ್ದವಿಶಾಲವಾದ ಮೈದಾನ, ಸುತ್ತಲೂ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರ ಕರತಾಡನ. ಬೆಂಕಿಯೊಂದಿಗೆ ಸರಸ ನೋಡುಗರ ಎದೆ ಝಲ್ಲೆನಿಸುವ ಸಾಹಸಮಯ ಕ್ರೀಡೆ. ವರ್ಷದಿಂದ ವರ್ಷಕ್ಕೆ ಈ ಸಂಸ್ಥೆಯ ಕ್ರೀಡೋತ್ಸವ ಹೆಚ್ಚು ಜನಪ್ರಿಯವಾಗುತ್ತಲೇ ಬರುತ್ತಿದೆ. ಕ್ರೀಡೆಯನ್ನು ನೋಡುವಾಗ ಮಕ್ಕಳು ಏಕಾಗ್ರತೆಯಿಂದ ಯಾವುದನ್ನೂ ಕೂಡ ಕರಗತಮಾಡಿಕೊಳ್ಳಬಹುದು ಎಂದು ಜಾಹಿರಾಯಿತು.

ಶನಿವಾರ (ಜ.4) ಸಂಜೆ ಸಂಸ್ಥೆಯ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ನಂತರ ಸಾಂಸ್ಕೃತಿಕ ಹಾಗೂ ಸಾಹಸಿ ಕ್ರೀಡೆಗಳ ಸಮ್ಮಿಶ್ರನ ನೋಡುಗರ ಮನಸೂರೆ ಮಾಡಿತು.ಶಿಶುಮಂದಿರದ ಮಕ್ಕಳ ನೃತ್ಯವೈವಿದ್ಯದೊಂದಿಗೆ ಆರಂಭಗೊಂಡ ಪ್ರದರ್ಶನದಲ್ಲಿ ಸಂಸ್ಥೆಯ ಶಿಶುಮಂದಿರದಿಂದ ಪ್ರೌಢಶಾಲಾ ವಿಭಾಗದವರೆಗಿನ ವಿದ್ಯಾರ್ಥಿಗಳ ಸಾಹಸ ಕ್ರೀಡೆಗಳು.

ಸಾಹಸ ಕ್ರೀಡೆಯಲ್ಲಿ ಅನಾವರಣಗೊಂಡಿದ್ದು ಪಿರಮಿಡ್ ನಿರ್ಮಾಣ,ತಾಲೀಮು ಪ್ರದರ್ಶನ ,ಬೆಂಕಿಯ ಬಳೆಗಳ ನಡುವೆ ಚಿಲ್ಲಾಟ, ಸೈಕಲ್ ಸಾಹಸ, ಕೂಪಿಕಾ ಸಮತೋಲನ, ಮಲ್ಲಕಂಬ ಪ್ರದರ್ಶನ,ಮಲ್ಲಕಂಬದಲ್ಲಿ ಯೋಗ ಪ್ರದರ್ಶನ, ದೊಂದಿ ವಿದ್ಯೆ, ಸಮೂಹ ನೃತ್ಯ ರೂಪಕ, ಕೋಲಾಟ,ಕರಾಟೆ,ದೀಪಾರತಿ ಮೊದಲಾದವುಗಳ ಜತೆ ಶಾಲಾ‌ ಶಿಕ್ಷಕರ ಸಾಂಸ್ಕೃತಿಕ ಕಾರ್ಯಕ್ರಮಗಳೂ ಕ್ರೀಡೋತ್ಸವದ ಮೆರುಗು ಹೆಚ್ಚಿಸಿದವು.ಕೊನೆಯಲ್ಲಿ ಐಕ್ಯಮಂತ್ರದೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.

ವಿದ್ಯಾರ್ಥಿಗಳ ಈ ಸಾಹಸದ ಹಿಂದೆ ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಜಯರಾಮ ಕೆದಿಲಾಯ,ಸಂಚಾಲಕ ಬಾಸ್ಕರ್ ಆಚಾರ್ ಹಿಂದಾರು,ಮುಖ್ಯ ಶಿಕ್ಷಕಿ ಜಯಮಾಲ ವಿ.ಎನ್ ಹಾಗೂ ಶಿಕ್ಷಕ ತಂಡದ ಶ್ರಮ ಅಭಿನಂದನಾರ್ಹ.

ಪ್ರವೀಣ್, ಚೆನ್ನಾವರ

Leave A Reply