ದೆಹಲಿಯಲ್ಲಿ ಪೌರತ್ವ ಮಸೂದೆ ವಿರೋಧಿ ಗದ್ದಲದ ಹಿಂದಿರುವ ಶಕ್ತಿ ಯಾರು? | ಕಾಂಗ್ರೆಸ್ ಅಥವಾ ಆಮ್ ಆದ್ಮಿ?

0 14

ಕ್ಯಾಬ್ ಮುಸ್ಲಿಂ ವಿರೋಧಿಯಲ್ಲ ಯಾಕೆ ?

  • ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನ್ ನಲ್ಲಿ ಮತೀಯವಾದಿಗಳ ಅಟ್ಟಹಾಸಕ್ಕೆ ವಲಸೆ ಬಂದ ವಲಸಿಗರಿಗೆ ಕಾಯ್ದೆ ಅನ್ವಯ. ಆದ್ದರಿಂದ ಇದು ಮಾನವ ಹಕ್ಕುಗಳ ಎತ್ತಿ ಹಿಡಿಯುವ ಕೆಲಸ.
  • ಮುಸ್ಲಿಮರಿಗೆ ಆಯಾ ಮುಸ್ಲಿಂ ದೇಶಗಳಲ್ಲಿ ಮುಸ್ಲಿಮರಿಗೆ ಧಾರ್ಮಿಕ ಶೋಷಣೆ ಆಗುವುದಿಲ್ಲ
    ಈಗಿರುವ ಜಾತ್ಯಾತೀತ, ಧರ್ಮಾತೀತವಾಗಿ ಮುಂದುವರಿಯಲಿದೆ.
  • ಭಾರತದ ಪ್ರಜೆಗಳಿಗೆ ಇದರಿಂದ ಏನೇನೂ ತೊಂದರೆಯಿಲ್ಲ. ವಲಸಿಗರಿಗೆ ಮಾತ್ರ ಕಾಯ್ದೆ ಅನ್ವಯ
  • ಹಿಂದೂ ಪರ ಅನ್ನಲಾಗದು. ಯಾಕೆಂದರೆ, ಶ್ರೀಲಂಕಾ ಮತ್ತು ನೇಪಾಳದ ಹಿಂದೂ ವಲಸಿಗರಿಗೂ ಪೌರತ್ವವಿಲ್ಲ.

ಇವತ್ತು ದಿನವಿಡೀ ದೆಹಲಿ ಮತ್ತಿತರ ಕಡೆ ದೇಶ ಹೊತ್ತಿ ಉರಿದುದನ್ನು ನೀವೆಲ್ಲ ನೋಡಿದ್ದೀರಿ. ಇವತ್ತು ದೆಹಲಿಯ ಜಾಮಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಜನಸಾಗರವೇ ಇತ್ತು. ಗದ್ದಲ, ಗಲಾಟೆ, ಸ್ಲೋಗನ್ ಮತ್ತು ಕೊನೆಗೆ ಪೋಲೀಸರ ಲಾಠಿ ಪ್ರಹಾರ ಎಲ್ಲ ನಡೆಯಿತು.

ವಿಶ್ವದ ದೊಡ್ಡ ಮತ್ತು ಗ್ರೇಟ್ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಪ್ರತಿಭಟನೆಗೆ ಎಲ್ಲ ಅವಕಾಶಗಳಿವೆ. ವಿಶ್ವದ ಶ್ರೇಷ್ಠ ಪತ್ರಿಕಾ ಸ್ವಾತಂತ್ರವಿದೆ. ಹಾಗಾಗಿ ಯಾರು ಬೇಕಾದರೂ ಕಾನೂನಿನ ಚೌಕಟ್ಟಿನಲ್ಲಿ ಅವಕಾಶವಿದೆ. ಆದರೆ ಇವತ್ತು ನಡೆದ ಪ್ರತಿಭಟನೆಯು, ಮಾಮೂಲಿ ಪ್ರತಿಭಟನೆಯಂತೆ ಕಾಣಲಿಲ್ಲ. ವಿದ್ಯಾರ್ಥಿಗಳ ಮಧ್ಯೆ ಮತ್ತು ಅವರ ಹಿಂದೆ ಯಾವುದೊ ಕೈ ಕೆಲಸ ಮಾಡಿದ್ದು ಸ್ಪಷ್ಟವಿತ್ತು.

ಇವತ್ತು ವಿದ್ಯಾರ್ಥಿಗಳಿಗೆ ಬಂಡಲ್ ಗಟ್ಟಲೆ ಪ್ಯಾಕೇಜ್ಡ್ ಕೂಲಿಂಗ್ ಡ್ರಿಂಕ್ಸ್, ಸ್ನಾಕ್ಸ್ ಇತ್ಯಾದಿಗಳನ್ನು ಹಂಚುತ್ತಿದ್ದರು. ಅವನ್ನೆಲ್ಲ ಸಪ್ಲೈ ಮಾಡಿದ್ದು ಯಾರು? ಅಲ್ಲಿ ಊಟದ ವ್ಯವಸ್ಥೆ ಮಾಡಿದವರು ಯಾರು? ವಿದ್ಯಾರ್ಥಿಗಳಿಗೆ ಅಷ್ಟು ದುಡ್ದು ಎಲ್ಲಿಂದ ಬಂತು?
ಖಂಡಿತವಾಗಿಯೂ, ಮುಸ್ಲಿಂ ಓಲೈಕೆಯನ್ನೇ ಏಕೈಕ ಉದ್ದೇಶವಾಗಿ ಬದುಕುತ್ತಿರುವ ಕಾಂಗೆಸ್ಸ್ ಅಥವಾ ಆಮ್ ಆದ್ಮಿಯ ಆಪ್ ಇದರ ಹಿಂದೆ ಇರುವುದು ಖಚಿತ.

ಇವತ್ತು ಪ್ರತಿಭಟನೆ ಮಾಡಿದ ಉದ್ದೇಶವಾದರೂ ಏನು? ಪೌರತ್ವದ ಒಟ್ಟಾರೆ ಮಸೂದೆಯೇ ಬೇಡ ಎಂದೇ? ಅಥವಾ ಮಸೂದೆಯಲ್ಲಿ ಮುಸ್ಲಿಂ ಅನ್ನು ಕೂಡಾ ಸೇರಿಸಬೇಕೆಂದೇ? ಯಾರೊಬ್ಬರೂ ಹೇಳುತ್ತಿಲ್ಲ. ಬದಲಾಗಿ ಗದ್ದಲ ಗಲಾಟೆಗಳಷ್ಟೇ ನಡೆಯುತ್ತಿವೆ.

ಈ ಮಸೂದೆಯ ಪ್ರಕಾರ, ಹಿಂದೂ, ಪಾರ್ಸಿ, ಸಿಖ್, ಬುದ್ಧಿಸ್ಟ್ಸ್, ಜೈನ್ಸ್ ಮತ್ತು ಕ್ರಿಶ್ಚಿಯನ್ಸ್ ರು, ಯಾರೆಲ್ಲ 2014 ರ ಡಿಸೆಂಬರ್ 31 ಒಳಗೆ, ಪಾಕಿಸ್ತಾನ, ಬಾಂಗ್ಲಾ ದೇಶ್ ಮತ್ತು ಆಫ್ಘಾನಿಸ್ತಾನ್ ನಿಂದ ಬಂದಿದ್ದಾರೋ, ಅವರಿಗೆ ಭಾರತದ ಪೌರತ್ವ ಕೊಡುವ ಮಸೂದೆಯಿದು. ಮುಸ್ಲಿಮರನ್ನು ಹೊರತುಪಡಿಸಿ, ಶ್ರೀಲಂಕಾ, ನೇಪಾಳ, ಭೂತಾನ್ ಮತ್ತು ಟಿಬೆಟಿಯನ್ ನಿರಾಶ್ರಿತರನ್ನು ಕೂಡ ಸೇರಿಸಲಾಗಿಲ್ಲ.

ಹಳೆಯ 1955 ರ ಪೌರತ್ವ ಮಸೂದೆಯ ಪ್ರಕಾರ ಭಾರತದಲ್ಲಿ ಕನಿಷ್ಠ 11 ವರ್ಷ ವಾಸವಾಗಿದ್ದರೆ, ಆಗ ಭಾರತದ ಪೌರತ್ವಕ್ಕೆ ಆತ/ಆಕೆ ಅರ್ಹಳಾಗುತ್ತಿದ್ದಳು. ಈಗ ಅದೇ ಮಸೂದೆಗೆ ತಿದ್ದುಪಡಿ ತರಲಾಗಿ, ಅದನ್ನು ಸಂಸತ್ತು ಅಂಗೀಕರಿಸಿದೆ. ಹಾಗೆ ಕಾನೂನಿನ ಮಾನ್ಯತೆ ಪಡೆದುಕೊಂಡಿದೆ.
ಪ್ರತಿಭಟನೆ ಅಸ್ಸಾಮ್ ರಾಜ್ಯವನ್ನು ಜಾಸ್ತಿಯಾಗಿ ಕಾಡಿದೆ. ಅಸ್ಸಾಂ ಒಂದರಲ್ಲೇ 19 ಲಕ್ಷಕ್ಕಿಂತಲೂ ಅಧಿಕ ‘ ಪರಕೀಯ’ ರಿದ್ದಾರೆ. ಅವರಲ್ಲಿ ಹಿಂದೂಗಳೂ ಸೇರಿದ್ದಾರೆ.

ಒಟ್ಟಾರೆ ಪ್ರತಿಭಟನೆಯ ಉದ್ದೇಶ ಮತ್ತು ಡಿಮಾಂಡುಗಳು ಅರ್ಥವಾಗುತ್ತಿಲ್ಲ. ನಮಗೆ ಇದು ಬೇಕು ; ಇದು ಬೇಡ ಎಂದು ಸ್ಪಷ್ಟವಾಗಿ ಹೇಳುವವರ್ಯಾರೂ ಇಲ್ಲ. ಅದೇ ಕಾರಣಕ್ಕೆ ಇದು ರಾಜಕೀಯ ಪ್ರೇರಿತ ಪ್ರತಿಭಟನೆ ಅಂತ ಅನ್ನಿಸುವುದು. ಕೇಂದ್ರದ ನರೇಂದ್ರ ಮೋದಿಯವರ ಸರಕಾರದ ಮೇಲೆ ಕೆಟ್ಟ ಹೆಸರು ತರುವ ಹುನ್ನಾರ ಮತ್ತು ಮುಂಬರುವ ಫೆಬ್ರವರಿಯಲ್ಲಿ ನಡೆಯುಲ್ಲಿರುವ ದೆಹಲಿ ವಿಧಾನಸಭೆಯ ಚುನಾವಣೆಯಲ್ಲಿ ಅದರ ಲಾಭವನ್ನು ಉಣ್ಣಲು ಹೊರಟಿರುವುದು ಗೋಚರಿಸುತ್ತದೆ.

ಕಾಂಗ್ರೆಸ್ ಏನಾದರೂ ಇದನ್ನು ರಾಜಕೀಯ ಉದ್ದೇಶಕ್ಕೆ ಬಳಸಿದರೆ, ಅದರ ಲಾಭ ಮಾತ್ರ ಆಗುವುದು ಬಿಜೆಪಿಗೆ. ಮೊದಲೇ ಹಿಂದುತ್ವ ಮತ್ತು ರಾಷ್ಟ್ರೀಯತೆಯ ಪೊಲರೈಸ್ ಆತ ಮತ ಬಂಡವಾಳಗಳು ಮತ್ತಷ್ಟು ದೃವೀಕರಣಗೊಳ್ಳುವುದರಲ್ಲಿ ಅನುಮಾನವಿಲ್ಲ.

ವಿನೂತನ್ ಬಿ.ಪ್ರವೀಣ್ ( ನವೀನ್, ಬೆಳಾಲು )

Leave A Reply