ಪುತ್ತೂರಿನ ಪ್ರತಿಷ್ಠಿತ ವಿವೇಕಾನಂದ ಕಾಲೇಜಿಗೆ ಎರಡೆರಡು ರಾಂಕ್

0 12

ವಿವೇಕಾನಂದ ಕಾಲೇಜಿನ ಅಂತಿಮ ವರ್ಷದ ಬಿಎಸ್ಸಿಯಲ್ಲಿ ಇಬ್ಬರಿಗೆ ರಾಂಕ್ ಪ್ರಾಪ್ತವಾಗಿದೆ. ಮಂಗಳೂರು ವಿಶ್ವವಿದ್ಯಾಲಯದ 2019 ನೇ ಸಾಲಿನ ಅಂತಿಮ ಬಿಎಸ್ಸಿ ಪರೀಕ್ಷೆಯಲ್ಲಿ ಪುತ್ತೂರಿನ ಆರ್ಯಾಪು ಗ್ರಾಮದ ದೇರಣ್ಣ ರೈ ಮತ್ತು ಪ್ರೇಮಲತಾ ಪುತ್ರಿ ರೂಪಶ್ರೀ ಯವರು ಬಿಎಸ್ಸಿ (ಪಿ ಸಿ ಎಂ) ನಲ್ಲಿ ದ್ವಿತೀಯ ರಾಂಕ್ ಪಡೆದಿದ್ದಾರೆ. ತೆಂಕಿಲ ವಿಷ್ಣು ಭಟ್ ಮತ್ತು ಉಮಾ ದಂಪತಿಯ ಪುತ್ರಿ ಮನ್ವಿತಾ ಕೆ ಅವರು ಬಿಎಸ್ಸಿ (ಬಿಝೆಡ್ ಸಿ) ನಲ್ಲಿ 7 ನೆಯ ರಾಂಕ್ ಗಳಿಸಿದ್ದಾರೆ.

ರೂಪಶ್ರೀ
ಮನ್ವಿತಾ ಕೆ
ಡಾ। ಪೀಟರ್ ವಿಲ್ಸನ್ ಪ್ರಭಾಕರ್

ಈ ಬಗ್ಗೆ ತೀವ್ರ ಖುಷಿಯನ್ನು ವ್ಯಕ್ತಪಡಿಸಿದ ಪ್ರಾಂಶುಪಾಲರಾದ ಡಾ। ಪೀಟರ್ ವಿಲ್ಸನ್ ಪ್ರಭಾಕರ್ ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರು, ಇದು ನಮ್ಮವಿದ್ಯಾರ್ಥಿಗಳ ಶ್ರಮ ಮತ್ತು ಬುದ್ದಿವಂತಿಕೆ ; ಮತ್ತು ಸಂಸ್ಥೆಯ ನಿರಂತರ ಎಕ್ಸಲೆನ್ಸಿಗೆ ತೊಡಗಿಗೊಳ್ಳುವ ಪ್ರಯತ್ನಕ್ಕೆ ಸಾಕ್ಷಿ ಅಂದಿದ್ದಾರೆ. ಉತ್ತಮ ಅಂಕಗಳ ಜತೆ ಜತೆಗೇ ಉತ್ತಮ ವ್ಯಕ್ತಿತ್ವಕ್ಕೆ ಪೂರಕ ವಾತಾವರಣವನ್ನು ವಿವೇಕಾನಂದ ಶಿಕ್ಷಣ ಸಂಸ್ಥೆ ಪೂರೈಸುತ್ತಿದೆ ಅಂದಿದ್ದಾರೆ.

Leave A Reply