ನಿಮಗೆ ನಿಮ್ಮ ವೃತ್ತಿ ಹಿಡಿಸದೆ ಹೋದರೆ ರಾಜೀನಾಮೆ ನೀಡಿ ಹೊರಬರಲೂ ಹಕ್ಕಿಲ್ವಾ ಸಂತೋಷ್ ಹೆಗ್ಡೆ ?
ಉಪಚುನಾವಣೆ ನಂತರದ ಫಲಿತಾಂಶ ಪೂರ್ತಿ ಹೊರಬಿದ್ದಿದ್ದು, ಬಿಜೆಪಿಯು ಚುನಾವಣಾ ನಡೆದಿದ್ದ ಹದಿನೈದು ಕ್ಷೇತ್ರಗಳಲ್ಲಿ ಹನ್ನೆರಡು ಕ್ಷೇತ್ರಗಳನ್ನು ಬಾಚಿಕೊಂಡಿದೆ. ಕಾಂಗ್ರೆಸ್ ಎರಡು ಕ್ಷೇತ್ರಕ್ಕಷ್ಟೇ ಸೀಮಿತಗೊಂಡಿದ್ದರೆ, ಜೆಡಿಎಸ್ ವೈಟ್ ವಾಶ್ ಮಾಡಿಸಿಕೊಂಡಿದೆ. ಇದೆಲ್ಲ ಇವತ್ತಿಗೆ ಇತಿಹಾಸ.
ಈಗ ಬಿಜೆಪಿಗರಲ್ಲಿ, ಗೆಲುವಿನ ಸಂಭ್ರಮ ಮತ್ತು ಖಾತೆ ಹಂಚುವ ಕಸರತ್ತು. ಸೋತ ಮೂರು ಕಡೆ ಸೋಲಿನ ಪರಾಮರ್ಶೆ ಮತ್ತದಕ್ಕೆ ಭವಿಷ್ಯದ ಆಕ್ಷನ್ ಪ್ಲಾನ್ ಮಾಡುವ ಕೆಲಸ. ಬಿಜೆಪಿಯು ಬಹು ಮುಖ್ಯವಾಗಿದ್ದ ಎರಡು ಕ್ಷೇತ್ರಗಳನ್ನು ಕಳಕೊಂಡಿದೆ. ಒಂದು ಸಹಸ್ರ ಕೋಟಿಗಳ ಒಡೆಯ ಹೊಸಕೋಟೆಯ ಎಂ ಟಿ ಬಿ ನಾಗರಾಜ್ ಅವರದ್ದು. ಮತ್ತೊಂದು ಹುಣಸೂರಿನ ಹುಲಿ ಹೆಚ್ ವಿಶ್ವನಾಥ್ ಅವರದ್ದು. ನೆನಪಿಡಿ: ಇದು ಬಿಜೆಪಿ. ಆದ್ದರಿಂದ ಸೋಲಿನ ಪಿನ್ ಪರಾಮರ್ಶೆಮಾಡಿ ಇವತ್ತಿನಿಂದಲೇ ಆಕ್ಷನ್ ಪ್ಲಾನ್ ಮಾಡುವುದಂತೂ ಖಚಿತ !
ಅತ್ತ ಕಾಂಗ್ರೆಸ್ ಗೆ ಕರ್ನಾಟಕದಲ್ಲಿ ಪಾಪ, ಏಟಿನ ಮೇಲೆ ಏಟು. ಎಷ್ಟು ಅಂತ ಅದು ತಡಕೋಬಹುದು ? ಕಾಂಗ್ರೆಸ್ನ ತೂತು ಕಿಸೆಯಲ್ಲೀಗ ಎರಡೇ ಎರಡು ನಾಣ್ಯಗಳು ಹೇಗೋ ಉಳಿದುಕೊಂಡಿವೆ. ಅಂತಹಾ ಹೀನಾಯ ಸೋಲಿನಿಂದಾಗಿ ಶಾಶಕಾಂಗ ಪಕ್ಷದ ನಾಯಕತ್ವಕ್ಕೆ ಮತ್ತು ಸಿ ಡಬ್ಲ್ಯೂ ಸಿ ಗೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ. ಅತ್ತ ಸಿದ್ದರಾಮಯ್ಯನವರ ಬಕೆಟ್ ಆಗಿರುವ ದಿನೇಶ್ ಗುಂಡೂರಾವ್ ಅವರೂ ರಾಜ್ಯಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆ ಮೂಲಕ, ನಮ್ಮಜನಾರ್ಧನ ಪೂಜಾರಿಯವರು ಹೇಳಿದಂತೆ ” ಪಕ್ಷವನ್ನು ಗುಡಿಸಿ ಗುಂಡಾಂತರ ಮಾಡಿಯೇ ಸಿದ್ದರಾಮಯ್ಯ ಹೋಗುವುದು” ಅನ್ನುವುದು ನಿಜವಾಗಿದೆ.
ಜೆಡಿಎಸ್ ಬಿಡಿ, ಅಲ್ಲಿ ಯಾರು ಸೋತರೂ ತಲೆದಂಡ ಮಾಡಲು ಯಾರಿದ್ದಾರೆ. ಅಪ್ಪ ಮಗ ಸೊಸೆ ಮೊಮ್ಮಗ ಹೀಗೆ ಹರಡಿಕೊಂಡಿರುವ ಅವರುಗಳೇ ಹೊರಬಂದರೆ ಪಾರ್ಟಿಯಲ್ಲಿ ಉಳಿಯುವವರಾದರೂ ಯಾರು? ಅಲ್ಲಿ ಸರ್ವ ಕುಟುಂಬಮಯಂ !
ನಿನ್ನೆಯ ಫಲಿತಾಂಶದ ನಂತರ ನಮ್ಮ ನಿವೃತ್ತ ನ್ಯಾಯಮೂರ್ತಿ ಮತ್ತು ಮಾಜೀ ಲೋಕಾಯುಕ್ತ ಅವರು ” ದೇಶದಲ್ಲಿ ಸಿದ್ಧಾಂತದ ಮೇಲೆ ಚುನಾವಣಾ ನಡೆಯುವ ಕಾಲ ಈಗ ಉಳಿದಿಲ್ಲ, ಅನರ್ಹರನ್ನು ಈಗ ಮತದಾರರು ಅರ್ಹರನ್ನಾಗಿ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅದನ್ನು ಒಪ್ಪಿಕೊಳ್ಳದೆ ವಿಧಿಯಿಲ್ಲ” ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇದೇ, ಸಂತೋಷ್ ಹೆಗ್ಗಡೆಯವರು, ” ಅನರ್ಹರಲ್ಲಿ ಒಬ್ಬನೇ ಒಬ್ಬ ಗೆದ್ದರೂ, ಅದು ಪ್ರಜಾಪ್ರಭುತ್ವದ ಸೋಲಾಗಲಿದೆ ” ಎಂದು ಹೇಳಿದ್ದರು.
ನನಗೆ ಒಂದಂತೂ ಅರ್ಥವೇ ಆಗುತ್ತಿಲ್ಲ : ಓರ್ವ ಶಾಶಕ, ಸಂಸದ ಅಥವಾ ಓವ್ರ ಅಧಿಕಾರಿಯು, ಪಕ್ಷದಲ್ಲಿ ಅಥವಾ ಒಂದು ಸಂಸ್ಥೆಯಲ್ಲಿ ತನಗೆ ಒಗ್ಗಿ ಬರದೇ ಹೋದರೆ ಏನು ಮಾಡಬೇಕು? ರಾಜೀನಾಮೆ ಕೊಟ್ಟು ಬಂದದ್ದು ತಪ್ಪು ಯಾಕಾಗುತ್ತದೆ?
ರಾಜೀನಾಮೆಯ ವಿನಾ ಆತನಿಗೆ ಇನ್ನುಳಿದ ಆಪ್ಷನ್ ಗಳನ್ನೂ ನೋಡೋಣ.
ಆಪ್ಷನ್- 1 : ತನಗೆ ನೋವಾಗಿದ್ದರೆ ನೋವನ್ನು ಸಹಿಸಿಕೊಂಡು, ತನ್ನ ವರ್ಚಸ್ಸಿಗೆ ಧಕ್ಕೆ ಆಗುತ್ತಿದ್ದರೂ ಏನೂ ಮಾಡದೆ ಇರುವುದು ; ಅಥವಾ ತನ್ನ ಕ್ಷೇತ್ರ ಅಭಿವೃದ್ಧಿ ಆಗದೆ ಇದ್ದರೂ ಹಾಗೆ ಇದ್ದುಬಿಡುವುದು ( ಇದು passive ಬಿಹೇವಿಯರ್ )
ಆಪ್ಷನ್- 2 : ತನ್ನ ಮತ್ತು ಕ್ಷೇತ್ರದ ಜನತೆಗೆ ಅನ್ಯಾಯ ಆಗುತ್ತದೆ ಎಂದಾದಾಗ, ಒಳಗಡೆ ತನ್ನ ಮನವಿಗೆ ಸ್ಪಂದನೆ ಅಸಾಧ್ಯ ಎಂದಾದಾಗ ರಾಜೀನಾಮೆ ಕೊಟ್ಟು ಹೊರಬರುವುದು ( ಇದು assertive ಬಿಹೇವಿಯರ್ )
ಆಪ್ಷನ್- 3 : ತನಗೆ ನೋವಾಗಿದ್ದರೆ ಅದನ್ನು ಪಕ್ಷದ ವಲಯದಲ್ಲಿ, ಆಂತರಿಕ ಮಟ್ಟದಲ್ಲಿ ಪ್ರತಿಭಟಿಸುವುದು, ಮನವಿ ಮಾಡುವುದು ( ಇದು ಕೂಡಾ assertive ಬಿಹೇವಿಯರ್ ). ಇದಕ್ಕೂ ಕೂಡ ಸ್ಪಂದನೆ ಸಿಗದ ಪಕ್ಷದಲ್ಲಿ, ಆಗ ಸುಮ್ಮನಿದ್ದರೆ ಅದು passive ಬಿಹೇವಿಯರ್ ಆಗುತ್ತದೆ. ರಾಜೀನಾಮೆ ನೀಡಿ ಹೊರಬಂದರೆ ಅದು assertive ಬಿಹೇವಿಯರ್ ಆಗುತ್ತದೆ.
ಆಪ್ಷನ್- 4 : ಇದು aggressive ಬಿಹೇವಿಯರ್. ಇಲ್ಲಿ, ತನ್ನ ವಯಕ್ತಿಕ ಅಥವಾ ತನ್ನ ಕ್ಷೇತ್ರದ ಜನರ ನಿರೀಕ್ಷೆಗಳಿಗೆ ಸೂಕ್ತ ಸ್ಪಂದನೆ ಸಿಗದೇ ಹೋದಾಗ, ಪಬ್ಲಿಕ್ ಆಗಿ ಹೇಳಿಕೊಳ್ಳುವುದು, ಸ್ಪಂದನೆ ಸಿಗದಿದ್ದರೆ ಕೂಗಾಡುವುದು, ಸಿ ಡಿ ಬಿಡುಗಡೆ, ಪರ್ಸನಲ್ ಅಟ್ಯಾಕ್ ಮುಂತಾದುವುಗಳು ಅಗ್ಗ್ರೆಸ್ಸಿವ್ ನ ಅಡಿಯಲ್ಲಿ ಬರುತ್ತವೆ.
ಮ್ಯಾನೇಜ್ಮೆಂಟ್ ಥಿಯರಿಯ ಪ್ರಕಾರ, assertive ಬಿಹೇವಿಯರ್ ಅತ್ಯಂತ ಸೂಕ್ತ ಮತ್ತು ಸಮ್ಮತ. ಈಗ ಈ 17 ಜನ ಶಾಶಕರುಗಳು, ಅಂದು ರಾಜೀನಾಮೆ ನೀಡಿದ್ದು assertive ಬಿಹೇವಿಯರ್. ರಾಜೀನಾಮೆಗಿಂತ ಮೊದಲಲ್ಲಿ ನಡೆಯಬೇಕಿದ್ದ ಪಕ್ಷದ ಆಂತರಿಕ ಮಟ್ಟದಲ್ಲಿ, ಸರಕಾರದ ಒಳಗೆ ತಮ್ಮನೋವನ್ನು ಮೊದಲು ತೋಡಿಕೊಳ್ಳಬೇಕಿತ್ತು. ಅದು ಕೂಡಾ assertive ಬಿಹೇವಿಯರ್ ನೇ ! assertive ಬಿಹೇವಿಯರ್ ನೇ ತಪ್ಪು ಅನ್ನಲು ಹೇಗಾಗುತ್ತದೆ?
ಇಲ್ಲಿ, ಆಂತರಿಕ ಮಟ್ಟದಲ್ಲಿ ತಮ್ಮ ನೋವನ್ನು ಇವರು ತೋಡಿಕೊಂಡಿದ್ದಾರೆಯಾ, ಇಲ್ಲವಾ ಎಂದು ಇಲ್ಲಿ ಕೂತು ಅನಲೈಸ್ ಮಾಡುವ ನನಗಾಗಲೀ ನಮ್ಮ ಬುದ್ಧಿ ಜೀವಿ ದೇವನೂರರಾಗಲೀ, ಸಂತೋಷ ಹೆಗ್ಡೆಯರಾಗಲೀ ಅಥವಾ ಇನ್ನಾರೇ ಆಗಲಿ ಗೊತ್ತಿಲ್ಲ. ನಮ್ಮಊಹೆ ಏನೆಂದರೆ, ಓವ್ರ ಶಾಸಕ ಗೆದ್ದು ಬರುವುದು ಎಷ್ಟು ಕಷ್ಟ ಎಂಬ ಅರಿವು ನಮಗಿದೆ. ಅಂತಹ ಕಷ್ಟ ಪಟ್ಟು, ಲಕ್ಷಾಂತರ ಸುರಿದು ದಿನಕ್ಕೆ 18 ಗಂಟೆ ಓಡಾಡಿ ಗೆದ್ದು ಬಂದ ಕ್ಷೇತ್ರವನ್ನು ಕೇವಲ ಒಂದೂವರೆ ವರ್ಷದಲ್ಲಿ ಕಳಕೊಳ್ಳಲು ಯಾರಾದರೂ ರೆಡಿ ಇರುತ್ತಾರಾ? ಎಲ್ಲ ಕಡೆಯೂ ದುಡ್ಡಿಗಾಗಿಯೇ ರಾಜೀನಾಮೆ ನೀಡುವುದು ಎಂಬ ಭ್ರಮೆ ಸಮ್ಮತವೇ?
ಎಂ ಟಿ ಬಿ ನಾಗರಾಜರದು 1165 ಕೋಟಿಗಳ ಸಾಮ್ರಾಜ್ಯ. ಆನಂದಸಿಂಗ್, ರಮೇಶ್ ಜಾರಕಿಹೊಳಿ, ಗೋಪಾಲಯ್ಯ, ಎಸ್ ಟಿ ಸೋಮಶೇಖರ್, ಡಾ ಸುಧಾಕರ್, ನಾರಾಯಣ ಗೌಡರು – ಹೆಚ್ಚಿನವರೆಲ್ಲರೂ ಬಹು ಕೋಟಿ ಶ್ರೀಮಂತರು. ಎಂ ಟಿ ಬಿ ಗೆ ಇಪ್ಪತ್ತು ಮೂವತ್ತು ಕೋಟಿಯೆಲ್ಲ ಯಾವ ಮೂಲೆಗೆ ? ದುಡ್ಡೇ ಎಲ್ಲ ಕಡೆಯೂ ನಡೆಯುತ್ತಿದ್ದರೆ, ಇವತ್ತು ಎಂ ಟಿ ಬಿ ನಾಗರಾಜರು ಸೋಲಲೇ ಬಾರದಿತ್ತು. ದುಡ್ಡು ಮಾತ್ರ ಎಲ್ಲ ಕಡೆಯೂ ನಡೆಯಲ್ಲ ಅಂತ ಆಯ್ತಲ್ವಾ ?
Assertive ಬಿಹೇವಿಯರ್ ಜಗತ್ತು ಒಪ್ಪಿದ ಮ್ಯಾನೇಜ್ಮೆಂಟ್ ಸಿದ್ಧಾಂತ ! ಬುದ್ಧಿಯಿಲ್ಲದವರು ಮಾತ್ರ ಅದನ್ನು ತಪ್ಪು ಅನ್ನಬಹುದು. ಇವತ್ತಿನ ನಮ್ಮ ಈ ಡಿಸ್ಕಷನ್ ನ ಸಾರಾಂಶ ಇಷ್ಟೇ : ನಾವು, ಪತ್ರಕರ್ತರು, ಬುದ್ಧಿಜೀವಿಗಳು ಮತ್ತು ಸಂತೋಷ್ ಹೆಗ್ಡೆ ತರದ ನಿಜಕ್ಕೂ ಒಳ್ಳೆಯ ಮನಸ್ಸಿನ ವ್ಯಕ್ತಿಗಳು- ಎಲ್ಲರೂ ಬ್ಯಾಲೆನ್ಸ್ಡ್ಆಗಿ ಯೋಚಿಸಿ ನಿರ್ಧರಿಸುವುದನ್ನು ಕಲಿಯಬೇಕಾಗಿದೆ. ಅವತ್ತು ಅವರೆಲ್ಲ ರಾಜೀನಾಮೆ ಕೊಡದೆ ಬೇರೇನೂ ಮಾಡಬೇಕಿತ್ತು, ಅವರು ನೋವನ್ನು ಅನುಭವಿಸಿದ್ದರ ಇಲ್ಲವಾ, ಅವರು ರಾಜೀನಾಮೆಗೆ ಮುನ್ನ ತನ್ನ ಕ್ಷೇತ್ರದ ಜನರನ್ನು ಸಂಪರ್ಕಿಸಿದ್ದರ ಇಲ್ಲವಾ – ಇದೆಲ್ಲ ನಮಗೆ ನಿಮಗೆ ಹೇಗೆ ತಿಳಿಯುತ್ತದೆ ಸೊ ಕಾಲ್ಡ್ ಬುದ್ದಿವಂತರೇ ? ನಾವಿಲ್ಲಿ ಕೂತು ನಿರ್ಧರಿಸಲಿಕ್ಕೆ ಹೇಗಾಗುತ್ತದೆ ?
ದುಡ್ಡು ತೆಗೆದುಕೊಂಡಿದ್ದರೆ ತಪ್ಪೆನ್ನಬಹುದೇ ವಿನಃ, ರಾಜೀನಾಮೆ ನೀಡಿದ್ದೇ ತಪ್ಪೆನ್ನುವುದು ಯಾವ ಸಹಜ ನ್ಯಾಯ ?
ನಾವು ಸಹಜ ಕಣ್ಣಿನಿಂದ ಜಗತ್ತನ್ನು ನೋಡೋಣ : ಹಳದಿ ಕಣ್ಣು ಮಾಡಿಕೊಂಡು ನಮ್ಮನ್ನು ನಾವು ನೋಡಿಕೊಂಡರೂ ನಾವು ಕೂಡ ಹಳದೀನೇ ! ರಾಜೀನಾಮೆಗಿಂತ ಬ್ರಿಲಿಯಂಟ್ ಆದ ಬೇರೆ ಯಾವುದಾದರೂ ‘ ಐಡೀರಿಯ’ ನಿಮ್ಮಬಳಿ ಇದ್ದರೆ ತಿಳಿಸಿ. ಯಥಾವತ್ ಪ್ರಕಟಿಸುತ್ತೇವೆ.
ಸುಧಾಶ್ರೀ, ಧರ್ಮಸ್ಥಳ