ವಿಸ್ಮಯ ವಿಶ್ವ| ಹಂದಿಗಳು,ಪ್ರಾಣಿ ಲೋಕದ ಗೃಹಿಣಿಯರು !

0 19

ಹಂದಿಗಳು ಅತ್ಯಂತ ಗಲೀಜು ಪ್ರಾಣಿಗಳು ಯಾವಾಗಲೂ ದೇಹಕ್ಕೆ ಹೇಸಿಗೆ ಮೆತ್ತಿಕೊಂಡಿರುತ್ತವೆ.ಮಲ ಮತ್ತಿತರ ಕೊಳಚೆಯನ್ನು ತಿನ್ನುತ್ತವೆ.ಮನುಷ್ಯರು ಹಂದಿಯನ್ನು ಸಾಕಿ ಅದನ್ನು ಮಾಂಸಕ್ಕಾಗಿ ಬಳಸುತ್ತಾರೆ. ಕಾಡುಹಂದಿಗಳನ್ನು ವೈಲ್ಡ್ ಬೋರ್ ಬೋರ್ ಎಂದು ಕರೆಯುತ್ತೇವೆ. ಅವನ್ನು ಕೂಡ ಮನುಷ್ಯ ತಿನ್ನುತ್ತಾನೆ. ಅವುಗಳು ತೋಟಕ್ಕೆ ನುಗ್ಗಿ ಬೆಳೆಗಳನ್ನು ಹಾಳುಮಾಡುತ್ತವೆ. ಇವಿಷ್ಟೇ ತಾನೆ ನಮ್ಮ ಸಾಮಾನ್ಯ ತಿಳುವಳಿಕೆ?

ಆದರೆ ಹಂದಿಗಳು ಅತ್ಯಂತ ಬುದ್ಧಿವಂತ ಸಾಮಾಜಿಕ ಪ್ರಾಣಿಗಳು. ಅವುಗಳಿಗೆ 2 ವರ್ಷದ ಮಗುವಿಗೆ ಇರುವಷ್ಟು ಬುದ್ಧಿವಂತಿಕೆ ಇರುತ್ತದೆ. ಹಂದಿಗಳನ್ನು ಮನೆಯಲ್ಲಿ ಸಾಕು ಪ್ರಾಣಿಗಳ೦ತೆ ಕೂಡ ಸಾಕುತ್ತಾರೆ : ಅವುಗಳು ಅಷ್ಟು playful ಜೀವಿಗಳು!

ಇವುಗಳ ಅರಿವಿನ ಶಕ್ತಿ ಬುದ್ಧಿವಂತ ಪ್ರಾಣಿ ನಾಯಿಗಳಷ್ಟೇ ತೀಕ್ಷ್ಣವಾಗಿರುತ್ತವೆ. ಹಂದಿಗಳೆಷ್ಟು ಸಾಮಾಜಿಕ ಪ್ರಾಣಿಗಳೆಂದರೆ ಅವು ಅತ್ಯಂತ ನಿಕಟ ಸಂಬಂಧಗಳನ್ನು ಇಟ್ಟುಕೊಂಡು ಬದುಕುತ್ತವೆ. ಅವು ಒಟ್ಟಿಗೇ ಗುಂಪುಗುಂಪಾಗಿ ನಡೆಯುತ್ತವೆ, ಮೈಗೆ ಮೈತಾಗಿಸಿಕೊಂಡು. ಒಟ್ಟಿಗೇ ಆಟವಾಡುತ್ತವೆ. ಒಟ್ಟಿಗೇ ಒಂದರ ಪಕ್ಕ ಇನ್ನೊಂದು ಮೈಗೆ ಅಂಟಿಕೊಂಡೇ ಮಲಗುತ್ತವೆ. ಒಂದನ್ನೊಂದು ಯಾವತ್ತೂ ಬಿಟ್ಟು ಬಿಟ್ಟುಕೊಡುವುದಿಲ್ಲ!ನೈಸರ್ಗಿಕ ವಾತಾವರಣದಲ್ಲಿ (ಫಾರ್ಮ್ ನಲ್ಲಿ ಅಲ್ಲ) ಪರಸ್ಪರ ನಿಕಟ ಬಾಂಡಿಂಗ್ ಅನ್ನು ಬೆಳೆಸಿಕೊಳ್ಳುತ್ತವೆ. ತಮ್ಮಗೂಡು ತಾವೇ ಕಟ್ಟಿಕೊಳ್ಳುತ್ತವೆ. ಬಿಸಿಲಿಗೆ ಮೈಯೊಡ್ಡಿ ಹಾಯಾಗಿ ಮಲಗಿ ರೆಸ್ಟ್ ತೆಗೆದುಕೊಳ್ಳುತ್ತವೆ. ಕೆಲವೊಮ್ಮೆ ಕನಸು ಕೂಡ ಕಾಣುತ್ತವೆ. ನಂಬಿ ಇದರಲ್ಲಿ ಏನೂ ಅತಿಶಯೋಕ್ತಿ ಇಲ್ಲ !


ಹಂದಿಗಳು ಎಷ್ಟು ಶುದ್ಧತ್ವದ ಪರಿಕಲ್ಪನೆ ಇರುವ ಪ್ರಾಣಿಗಳೆಂದರೆ ಅವು ಮೈಯನ್ನು ಶುಚಿಯಾಗಿಡಲು ಸ್ನಾನ ಮಾಡುತ್ತವೆ. ನಾವದಕ್ಕೆ ಎಲ್ಲಿ ಶುದ್ಧ ನೀರು ಉಳಿಸಿದ್ದೇವೆ? ಆ ಕಾರಣಕ್ಕೇ ಅವು ಚರಂಡಿಯಲ್ಲಿ ಬಿದ್ದು ಮೇಲೆದ್ದು ಸ್ನಾನ ಮುಗಿಸುತ್ತಿರುವುದು. ನಾವು ಅಂದುಕೊಂಡದ್ದು ಅವುಗಳು ಗಲೀಜು ಮಾಡುತ್ತಿದೆಯೆಂದು. ನಿಜಕ್ಕೂ ಶುದ್ಧವಾಗಿಟ್ಟುಕೊಳ್ಳಲೊಂದು ಪ್ರಯತ್ನ ಅವುಗಳದು. ಹಂದಿ ಮರಿಗಳಿಗೆ ( piglets ) ಕೂಡ By instinct ಶುದ್ಧವಾಗಿರಬೇಕೆಂಬ ನೆನಪಿದೆ. ಮನೆಯಿಂದ ದೂರ ಹೋಗಿ ‘ಚಿಚಿ’ ಮಾಡಿ ಬರುತ್ತವೆ.

ಹಂದಿಗಳು ತಮ್ಮ 20 ವಿವಿಧ ವಿಧಾನಗಳಿಂದ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಬಲ್ಲವು. ದೊಡ್ಡ ಗುಂಪಿನಲ್ಲಿದ್ದ ತನ್ನ ಅಮ್ಮನನ್ನು ಗುರುತಿಸಿ ಓಡಿ ಬಂದು ಅಮ್ಮನ ಮೊಲೆಗೆ ಬಾಯಿಹಾಕಿ ಜೋತು ಬೀಳಬಲ್ಲವು ಚಿಕ್ಕ ಮರಿಗಳು. ಪದೇ ಪದೇ ಹಾಗೆ ಜೋತುಬಿದ್ದು ಬಾಯಿ ಸಿಹಿ ಮಾಡಿಕೊಳ್ಳದೆ ಹೋದರೆ ಅವಕ್ಕೆ ಸಮಾಧಾನವಿಲ್ಲ. ತಾಯಿ ಅಮ್ಮ ಮಕ್ಕಳಿಗಾಗಿ ಜೋಗುಳ ಕೂಡ ಹಾಡಬಲ್ಲಳು!! ಹಂದಿಗಳು ಮನುಷ್ಯರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಸಾಮ್ಯತೆಯನ್ನುಹೊಂದಿವೆ.

ಹಂದಿಯ ಚರ್ಮ ಮನುಷ್ಯನ ಚರ್ಮದಂತೆಯೇ ! ಆದ್ದರಿಂದ ಸರ್ಜರಿಯಲ್ಲಿ ಅವುಗಳ ಚರ್ಮದ ಬಳಕೆಯ ಸಾಧ್ಯತೆಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಮನುಷ್ಯನಂತೆ ಸಂಗೀತಕ್ಕೆ ಕಿವಿ ಕೊಡಬಲ್ಲವು.ಹಂದಿಗಳು ಮನುಷ್ಯರ ಜತೆ ಆಟವಾಡಬಲ್ಲವು. ನಿಮ್ಮ ಮಡಿಲಿಗೆ ಮೂತಿ ತೂರಿಸಿ ಮಕ್ಕಳಂತೆ ನಿದ್ದೆ ಹೊಡೆಯಬಲ್ಲವು.ತನ್ನ ಹೆಸರು ಕೂಗಿ ಕರೆದರೆ ಓಡಿ ಬರಬಲ್ಲ, ಕಲಿಸಿದರೆ ಕಲಿತು ಚೆಂಡಿನ ಜೊತೆ ಆಟವಾಡಬಲ್ಲ,ಈ ಹಂದಿಗಳು ಪ್ರಾಣಿ ಲೋಕದ ಮನುಷ್ಯರೇ ಸರಿ!

ಹಂದಿಗಳನ್ನು ಮನುಷ್ಯರಿಗೆ ಹೋಲಿಸಿದ್ದಕ್ಕೆ ನೀವು ನನಗೆ ನನ್ನನ್ನು ತರಾಟೆಗೆ ತೆಗೆದುಕೊಳ್ಳಬೇಡಿ. ಯಾಕೆಂದರೆ ಮನುಷ್ಯರಂತೆ ಹಂದಿಗಳು ತಮ್ಮ ಕುಟುಂಬದಲ್ಲಿ ಪರಸ್ಪರ ಜಗಳವಾಡುವುದಿಲ್ಲವಲ್ಲ. ಒಬ್ಬನ ಕಂಡರೆ ಮತ್ತೊಬ್ಬರಿಗೆ ಕುಟುಂಬದಲ್ಲಿ ಆಗದೆ ಇರುವುದಿಲ್ಲವಲ್ಲ. ಗಂಡ ಹಂದಿ ಹೆಂಡತಿಗೆ ಹೊಡೆಯುವುದಿಲ್ಲ; ಹೆಣ್ಣು ಹಂದಿ ಗಂಡನನ್ನು ಹೀಯಾಳಿಸುವುದಿಲ್ಲ; ಅದು ತಾ, ಇದು ತಾ ಅಂತ ದುರಾಸೆ ಹುಟ್ಟಿಸುವುದಿಲ್ಲ. ಹಂದಿಗಳಿಗೆ ತನ್ನ ಮಕ್ಕಳನ್ನು ಪ್ರೀತಿ ಮಾಡಲು ಯಥೇಚ್ಛ ಸಮಯವಿದೆ. ಮಕ್ಕಳ ಲಾಲನೆ ಪಾಲನೆ; ಅವು ಕೇಳಿದಾಗಲೆಲ್ಲ ಮೊಲೆ ಹಾಲು-ಎಲ್ಲವನ್ನೂ ಹಂದಿಗಳು ಕೊಡುತ್ತವೆ. ಪಾಪ, ಮನುಷ್ಯನಿಗೆ ಅದಕ್ಕೆಲ್ಲಿ ಸಮಯವಿದೆ?

ಸುದರ್ಶನ್ ಬಿ. ಪ್ರವೀಣ್, ಬೆಳಾಲು 

Leave A Reply