ಹಲೋ ಕನ್ನಡ ವರ್ಲ್ಡ್!

ನಿಮ್ಮ ಕೈಗೆ ಹೊಸಕನ್ನಡದ ಹೊಚ್ಚ ಹೊಸ ಆನ್ ಲೈನ್ ಪ್ರತಿಗಳನ್ನಿಡಲು ಆಗುತ್ತಿರುವ ಸಂತೋಷವೇ ಬೇರೆ.
ಜಗತ್ತಿನ ಚಿತ್ರ ವಿಚಿತ್ರ ಸುದ್ದಿ ಸಮಾಚಾರಗಳನ್ನು ನಿಮ್ಮ ಕೈಗಿಡುವ ತವಕ. ಬ್ಲಾಕ್ ಹೋಲ್ ನಿಂದ ಬ್ರಹ್ಮಾಂಡದ ಹುಟ್ಟಿನಿಂದ ಹಿಡಿದು, ಸಾವಿನಾಚೆಯ ಪ್ರಪಂಚದವರೆಗೆ ಇಣುಕಿ ನೋಡಿ ಬಂದು ನಿಮಗೆ ಹೇಳುವ ಉತ್ಸಾಹ ನಮ್ಮಲ್ಲಿದೆ.
ಆ ದಿನದ ಆದಿ ಮಾನವನಿಂದ ಹಿಡಿದು,ಈ ದಿನದ ಟ್ರಂಪ್ ನ ಆಧುನಿಕತೆಯವರೆಗೆ. ಪ್ರೇಮ, ಪ್ರೀತಿ, ನಿಗಿನಿಗಿ ವಯಸ್ಸಲ್ಲಿನ ಹಸಿ ಹಸಿ ಪ್ರಣಯ, ಇರೋವಷ್ಟು ದಿನ ಒಳ್ಳೆಯ ಓದು, ಉತ್ಕೃಷ್ಟ ಊಟ, ಅದ್ಭುತ ಅರೋಗ್ಯ, ಅಪ್ಡೇಟ್ ಆಗಲು ಸದಾ ನವ ನವೀನ ತಂತ್ರಜ್ಞಾನ-ವಾಟ್ ನಾಟ್? ಆಡು ಮುಟ್ಟದ ಸೊಪ್ಪೇ ಇಲ್ಲವೆಂಬಂತೆ ಬದುಕಿನ ಸಮಗ್ರ ಆಗು ಹೋಗುಗಳನ್ನು, ನಿಮ್ಮಷ್ಟೇ ಕುತೂಹಲಗೊಂಡು, ನಿಮ್ಮಷ್ಟೇ ಉನ್ಮಾದದಿಂದ ತಿಳಿದುಕೊಂಡು, ಓದಿಕೊಂಡು,ನಮ್ಮಮಾತೃಭಾಷೆ ಕನ್ನಡದಲ್ಲಿ ನಿಮ್ಮ ಕೈಗಿಡಲು ಒಂದು ಪ್ರಯತ್ನ ಜಾರಿಯಲ್ಲಿದೆ. 

ನಿಮ್ಮ ಫೀಡ್ ಬ್ಯಾಕ್ ಗಿಂತ ಬೇರೆ ಸಹಾಯ ಬೇರೇನಿದೆ?

ಸುದರ್ಶನ್ ಬಿ. ಪ್ರವೀಣ್

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

 

0 thoughts on “ಹಲೋ ಕನ್ನಡ ವರ್ಲ್ಡ್!”

Leave a Reply

error: Content is protected !!
Scroll to Top
%d bloggers like this: