ನವರಸ ನಾಯಕ ಜಗ್ಗೇಶ್ ಜತೆ ಸರಸಕೆ 21 ನಟಿಯರು!

ದೇವರು ಕೊಟ್ಟ ಅಂತ ಅಂದ್ರೆ ಬಾಚಿ ಬಾಚಿ ಕೊಡುತ್ತಾನೆ ಅನ್ನುವುದಕ್ಕೆ ಜಗ್ಗೇಶ್ ಅವರು ನಟಿಸುತ್ತಿರುವೆ ಈ ಸಿನಿಮಾವೇ ಸಾಕ್ಷಿ!
ಹಿಂದೊಮ್ಮೆ ಜಗ್ಗೇಶ್ ಜತೆಗೆ ನಟಿಸಲು, ನಾಯಕಿ ನಟಿಮಣಿಯೊಬ್ಬಳು ಹಿಂದೇಟುಹಾಕಿದ್ದಳು. ಅದು ದೊಡ್ಡದಾಗಿ ಸುದ್ದಿಯಾಗಿತ್ತು. ಆದರೆ ಈ ಬಾರಿ ಜತೆಗೆ 21 ನಟಿಯರು ಜಗ್ಗೇಶ್ ಜತೆಯಲ್ಲಿ ನಟಿಸಲಿದ್ದಾರೆ, ಅದೂ ಕೂಡ ಒಂದೇ ಚಿತ್ರದಲ್ಲಿ. ಚಿತ್ರ ‘ಕಾಳಿದಾಸ ಕನ್ನಡ ಮೇಸ್ಟ್ರು’.
ಚಿತ್ರದ ಮುಖ್ಯ ಭೂಮಿಕೆಯಲ್ಲಿ ಜಗ್ಗೇಶ್, ಮೇಘನಾ, ಅಂಬಿಕಾ,ತಬಲಾ ನಾನಿ ಮುಂತಾದವರಿದ್ದಾರೆ. ಚಿತ್ರದ ಪ್ರೊಮೊ ಸಾಂಗ್ ಒಂದರಲ್ಲಿ ಈ 21 ಕಲರ್ಸ್ ಕನ್ಯೆಯರು ಸೊಂಟ ಬಳುಕಿಸಿ ರಸದೌತಣ ನೀಡಲಿದ್ದಾರೆ. ಕನ್ನಡ ನಟಿಯರಾದ ,ಹರಿಪ್ರಿಯಾ, ಅದಿತಿ ರಾವ್,ಅದಿತಿ ಪ್ರಭುದೇವ್,ಕಾರುಣ್ಯ,ರೂಪಿಕಾ,ಸಂಯುಕ್ತ,ಸೋನು ಗೌಡ,ದಿಶಾ ಪೂವಯ್ಯ,ಶುಭಾ ಪೂಂಜಾ,ನಿಶ್ವಿಕ ನಾಯ್ಡು ಹೀಗೆ ಒಟ್ಟು 21 ರಸಾಂಗಿನಿಯರು! ಜಗ್ಗೇಶ್ ಅವರಿಗೆ ಈ ಚಿತ್ರದಲ್ಲಿ ಕನ್ನಡ ಮೇಸ್ಟ್ರ ಪಾತ್ರ. ಶಾಕುಂತಲೆಯ ಮತ್ತು ಮೇಘದೂತದ ಕಾಳಿದಾಸ ಸಾಥ್ ಇರುವಾಗ ಮತ್ತೆ ಕೇಳಬೇಕೆ?
ಹೇಳಿ ಕೇಳಿ, ಕವಿ ಕಾಳಿದಾಸ ರಸಚಕ್ರವರ್ತಿ. ನಮ್ಮ ಜಗ್ಗೇಶೋ ನವರಸ ನಾಯಕ. ಕಾಳಿದಾಸನ ರಸ, ಜಗ್ಗೇಶ್ ರ ನವರಸ- ಸೇರಿಕೊಂಡು ಸರಸ !
ಅಂದ ಹಾಗೆ ‘ಕಾಳಿದಾಸ ಕನ್ನಡ ಮೇಸ್ಟ್ರು’ ಚಿತ್ರದ ನಿರ್ದೇಶಕ, ಅಗೈನ್ ಕವಿ, ಕವಿರಾಜ್ ! ಚಿತ್ರ ರಸದೌತಣ ನೀಡುವುದರಲ್ಲಿ ನೋ ಡೌಟ್!  ಚಿತ್ರ ಬಿಡುಗಡೆಗೆ ನವೆಂಬರ್ 15 ರವರೆಗೆ ಕಾಯುವುದು ಅನಿವಾರ್ಯ.


Ad Widget

Ad Widget

Ad Widget

ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave a Reply

error: Content is protected !!
Scroll to Top
%d bloggers like this: