Day: October 10, 2019

ಮನೆಯಲ್ಲೇ ಮಾಡಿ ಅದ್ಭುತ ಮಟನ್ ಬಿರಿಯಾನಿ

ವಾರದ ಕೊನೆ ಬಂತೆಂದರೆ ಅಥವಾ ಪ್ರೀತಿಯ ನೆಂಟರು ಮನೆಗೆ ಬಂದರೆಂದರೆ ಸಾಕು, ನಾನ್ ವೆಜ್ ಪ್ರಿಯರಿಗೆ ಬಾಯಲ್ಲಿ ಒಂಥರಾ ಆಗಲು ಶುರುವಾಗುತ್ತದೆ. ಆಗ ನೆನಪಾಗುವುದೇ ಮಟನ್ ಬಿರಿಯಾನಿ ! ಮಟನ್ ಪ್ರಿಯರಿಗೆ, ನಾನ್ ವೆಜಿಟೇರಿಯನ್ನರಿಗೆ ಮತ್ತು ಬಿರಿಯಾನಿ ಇಷ್ಟಪಡುವವರಿಗೆ ಹೇಳಿ ಮಾಡಿಸಿದ ಅಡುಗೆ ಮಟನ್ ಬಿರಿಯಾನಿ. ಹಿತವಾದ ಉರಿಯಲ್ಲಿ ಬೆಂದ,ಮನೆಯಿಡೀ ಘಮಘಮಿಸುವ ಬಿರಿಯಾನಿ ಪಕ್ಕದ ಮನೆಯವರ Envy. ಅವತ್ತು ನಮ್ಮ ಮನೆಯಲ್ಲಿ NV (Non Veg) ! ಹದವಾಗಿ ಬೆಂದ, ಸಕಲ ಮಸಾಲ ಮಿಶ್ರಣಗಳು ಬೆರೆತ, ಹಬೆಯಾಡುವ ತಿಳಿ …

ಮನೆಯಲ್ಲೇ ಮಾಡಿ ಅದ್ಭುತ ಮಟನ್ ಬಿರಿಯಾನಿ Read More »

ಇಂಟೆರೆಸ್ಟಿಂಗ್ ಇತಿಹಾಸ

ಇತಿಹಾಸ ಯಾವತ್ತಿಗೂ ಕೌತುಕ. ಇತಿಹಾಸವೆಂದರೆ ಬಾರ್ಬೇರಿಯನ್,ಅಂದರೆ ಅನಾಗರಿಕ ಸಮಾಜದ ವರ್ತಮಾನದ ನಡಿಗೆ. ಕ್ಯಾರವಾನ್ ದಾರಿಯುದ್ದಕ್ಕೂ ಬಿಟ್ಟುಹೋದ ಬೀಡಿನ ಕುರುಹು. ಇಲ್ಲಿನ ಪ್ರತಿ ಮೈಲಿಗಲ್ಲಿಗೂ ಒಂದೊಂದು ಕಥೆಯಿದೆ. ರಾಜರುಗಳ ಪರಾಕ್ರಮಶಾಲಿ ಘಟನೆಗಳಿವೆ. ರಕ್ತ ಹೆಪ್ಪುಗಟ್ಟಿಸುವ ಕ್ರೌರ್ಯವಿದೆ. ಮೈ ನಡುಗಿಸುವ ಭೀಭತ್ಸಕತೆಯಿದೆ. ಮಹತ್ವಾಕಾಂಕ್ಷಿ ಮನುಷ್ಯನ ರಕ್ತದಾಹ ಆತನನ್ನು ಖಂಡಖಂಡಾಂತರ ಕ್ರಮಿಸುವಂತೆ ಮಾಡಿದೆ. ಸುಖದ ಸುಪ್ಪತಿಗೆಯಲ್ಲಿರಬೇಕಾದ ರಾಜರುಗಳು ಕಾಡುಮೇಡು ಅಲೆದಿದ್ದಾರೆ. ರಕ್ತ ರುಂಡಗಳನ್ನ ಚೆಂಡಾಡಿದ್ದಾರೆ. ಇಂತಹ ಭಯಾನಕತೆಯ ನಡುವೆಯೇ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯ ಕಾಲದಿಂದ ಕಾಲಕ್ಕೆ ನಡೆದುಬಂದಿದೆ. ಹಿಂಸೆಗೆ ಅಹಿಂಸೆಯ …

ಇಂಟೆರೆಸ್ಟಿಂಗ್ ಇತಿಹಾಸ Read More »

ಬಿಜೆಪಿ | ಸಾಧನೆ to ಅಹಂಕಾರ to ಸರ್ವನಾಶ

ಇವತ್ತು ಕರ್ನಾಟಕ ಬಿಜೆಪಿ ಯಲ್ಲಿನ ಘಟನಾವಳಿಗಳನ್ನು ಜನರು ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇದು ಯಾವೊಂದು ಕೋನದಿಂದಲೂ ಒಳ್ಳೆಯ ಬೆಳವಣಿಗೆಯಂತೂ ಅಲ್ಲವೇ ಅಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಒಟ್ಟಾರೆ ಬಿಜೆಪಿ ಕಳೆದ ಸಲ ತಮ್ಮ ಇದು ವರ್ಷಗಳ ಆಡಳಿತಾವಧಿಯಲ್ಲಿ ತೆಗೆದುಕೊಂಡ ಕ್ರಾಂತಿಕಾರಕ ಮತ್ತು ಪರಿಶುದ್ಧ ಆಡಳಿತದಿಂದಾಗಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಿಂದೆಂದೂ ಕಂಡಿರದ ರೀತಿಯಲ್ಲಿ ಪ್ರಭಾವಿಗಳಾಗಿ ಬೆಳೆದು ಬಿಟ್ಟಿದ್ದಾರೆ. ನರೇಂದ್ರ ಮೋದಿ ಮಾಡಿದ demonetization (ನೋಟು ಬ್ಯಾನ್), ಕಲ್ಲಿದ್ದಲು ಮತ್ತು 3 ಜಿ ಸ್ಪೆಕ್ಟ್ರಮ್ ಮರು ಏಲಂ, ಜನಧನ್, …

ಬಿಜೆಪಿ | ಸಾಧನೆ to ಅಹಂಕಾರ to ಸರ್ವನಾಶ Read More »

ವಿಸ್ಮಯ ವಿಶ್ವ | ಪೆರೆಗ್ರೆಯ್ನ್ ಫಾಲ್ಕನ್ ಹಕ್ಕಿ | ಇವುಗಳ ವೇಗಕ್ಕೆ ಡೊಮೆಸ್ಟಿಕ್ ವಿಮಾನಗಳು ಬೆಚ್ಚಿ ಬೀಳುತ್ತವೆ !

ಇವನು ಪ್ರಪಂಚದ ಅತ್ಯಂತ ವೇಗದ ಓಟಗಾರ. ಅಲ್ಲಲ್ಲ, ಹಾರಾಟಗಾರ. ಭೂಮಿಯ ಮೇಲೆ ಆಗಲಿ, ಆಕಾಶದಲ್ಲಾಗಲಿ, ನೀರಲ್ಲಾಗಲಿ-ಯಾವುದೇ ಮಾಧ್ಯಮದ ಮೂಲಕ ವೇಗವಾಗಿ ಸಾಗಬಲ್ಲ ಜೀವಿಗಳಲ್ಲಿ ಈ ಪೆರೆಗ್ರೆಯ್ನ್ ಹಕ್ಕಿಗಳು ಮೊದಲ ಸ್ಥಾನದಲ್ಲಿ ನಿಲ್ಲುತ್ತವೆ. ಅವುಗಳ ಹಾರಾಟ ವೇಗ ನೋಡಿದರೆ ನಮ್ಮ ಡೊಮೆಸ್ಟಿಕ್ ವಿಮಾನಗಳು ಬೆಚ್ಚಿ ಬೀಳುತ್ತವೆ. ! ಅವುಗಳ ವೇಗ ಗಂಟೆಗೆ ಬರೋಬ್ಬರಿ 242 ಮೈಲಿಗಳು, ಅಂದರೆ 389 ಕಿಲೋಮೀಟರುಗಳು ! ಅಮೇರಿಕ ಮೂಲದ ಪೆರೆಗ್ರೆಯ್ನ್ ಫಾಲ್ಕನ್ ಹಕ್ಕಿಗಳು ಈಗೀಗ ಪ್ರಪಂಚದೆಲ್ಲೆಡೆ ಕಂಡು ಬರುತ್ತವೆ. ಸಾಮಾನ್ಯವಾಗಿ ಸಮುದ್ರ ತೀರದ …

ವಿಸ್ಮಯ ವಿಶ್ವ | ಪೆರೆಗ್ರೆಯ್ನ್ ಫಾಲ್ಕನ್ ಹಕ್ಕಿ | ಇವುಗಳ ವೇಗಕ್ಕೆ ಡೊಮೆಸ್ಟಿಕ್ ವಿಮಾನಗಳು ಬೆಚ್ಚಿ ಬೀಳುತ್ತವೆ ! Read More »

error: Content is protected !!
Scroll to Top