Home Interesting ಮಿಸ್ ಕಾಲ್ ಮೂಲಕ ಆರಂಭಗೊಂಡ ‘ಕುರುಡು ಪ್ರೀತಿ’|ಲವರ್ ಬಾಯ್ ಕುರುಡ ಎಂದು ತಿಳಿದಾಕ್ಷಣ ಪ್ರೇಯಸಿ ಮಾಡಿದ...

ಮಿಸ್ ಕಾಲ್ ಮೂಲಕ ಆರಂಭಗೊಂಡ ‘ಕುರುಡು ಪ್ರೀತಿ’|ಲವರ್ ಬಾಯ್ ಕುರುಡ ಎಂದು ತಿಳಿದಾಕ್ಷಣ ಪ್ರೇಯಸಿ ಮಾಡಿದ ಕೆಲಸ ಏನು ಗೊತ್ತೇ!?ಅಚ್ಚರಿ ಪಡುವಂತಿದೆ ಈ ಜೋಡಿಯ ಲವ್ ಸ್ಟೋರಿ

Hindu neighbor gifts plot of land

Hindu neighbour gifts land to Muslim journalist

‘ಪ್ರೀತಿ ಕುರುಡು’ಎಂಬ ಮಾತಿದೆ.ಯಾಕಂದ್ರೆ ಪ್ರೀತಿಲಿ ಕೇವಲ ಪ್ರೇಮಿಗಳ ನಡುವಿನ ಬಾಂಧವ್ಯ ಮಾತ್ರ ಮುಖ್ಯ ಆಗೋದು ಹೊರತು ಬಣ್ಣ,ಆಸ್ತಿ,ರೂಪವಲ್ಲ.ಕೆಲವು ಪ್ರೇಮಿಗಳು ಬದುಕಿನುದ್ದಕ್ಕೂ ಜೊತೆಯಾದರೆ, ಇನ್ನೂ ಕೆಲವರು ಅರ್ಧ ದಾರೀಲೆ ಅಂತ್ಯ ಹಾಡುವವರು ಅದೆಷ್ಟೋ ಮಂದಿ.ಆದರೆ ಪರಿಶುದ್ಧವಾದ ಪ್ರೇಮಕ್ಕೆ ಅರ್ಥ ಎಂಬಂತಿದೆ ಈ ಜೋಡಿ.

ಹೌದು. ಇವರಿಬ್ಬರ ಪ್ರೇಮ ಅಂತಿಂತ ಪ್ರೀತಿ ಅಲ್ಲ. ಇದು ಮಿಸ್ ಕಾಲ್ ಮೂಲಕ ಆರಂಭಗೊಂಡ ಕುರುಡು ಪ್ರೇಮ.ಈ ಜೋಡಿ ಒಡಿಶಾದ ಬಲಗಿರ್​ ಜಿಲ್ಲೆಯ ಮಂದಮಹುಲ್​ ಗ್ರಾಮದ ದಿಲೀಪ್​ ತಂಡಿ ಮತ್ತು ಅದೇ ಜಿಲ್ಲೆಯ ಬುರುಡಾ ಗ್ರಾಮದ ಚಾಂದಿನಿ ಬಾಘ್​.

ಇವರಿಬ್ಬರ ನಡುವೆ ಮಿಸ್​ ಕಾಲ್​ ಮೂಲಕ ಲವ್​ ಶುರುವಾಗಿತ್ತು. ಆದರೆ, ದಿಲೀಪ್​ ಅಂಧನಾಗಿದ್ದರೂ ಕೂಡ ಚಾಂದಿನಿ ಆತನನ್ನು ಮದುವೆ ಆಗಲು ನಿರ್ಧರಿಸುವ ಮೂಲಕ ನಿಜವಾದ ಪ್ರೀತಿ ಏನೆಂಬುದನ್ನು ನಿರೂಪಿಸಿದ್ದಾರೆ.ಇಂದಿನ ಕಾಲದಲ್ಲಿ ಶ್ರೀಮಂತಿಕೆ ನೋಡಿ ಪ್ರೀತಿ ಮಾಡುವವರ ನಡುವೆ ಚಾಂದಿನಿ ತಾನು ಪ್ರೀತಿ ಮಾಡುತ್ತಿರುವ ಯುವಕ, ಅಂಧ ಅಂತಾ ಗೊತ್ತಿದ್ದರೂ ಆತನ ಜತೆಗೆ ಮದುವೆಗೆ ಒಪ್ಪಿಕೊಂಡಿರುವುದು ನಿಜವಾದ ಪ್ರೀತಿಗೆ ತಾಜಾ ಉದಾಹರಣೆಯಾಗಿದೆ.

ಚಾಂದಿನಿ ಮತ್ತು ದಿಲೀಪ್ ಅವರ ಪ್ರೀತಿಯನ್ನು ಕಂಡು ಮೂಕವಿಸ್ಮಿತರಾಗಿರುವ​ ಎರಡು ಕುಟುಂಬದವರು ಇಬ್ಬರ ಮದುವೆಗೆ ಹಸಿರು ನಿಶಾನೆ ಸಹ ತೋರಿದ್ದಾರೆ. ಇದೀಗ ಮದುವೆ ಮೂಲಕ ಇಬ್ಬರ ಪ್ರೀತಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಇಬ್ಬರು ನಿರ್ಧರಿಸಿದ್ದು, ಅಂಧ ಅಂತಾ ಗೊತ್ತಿದ್ದರೂ ಆತನನ್ನು ಒಪ್ಪಿಕೊಂಡಿರುವ ಚಾಂದಿನಿ ನಿರ್ಧಾರಕ್ಕೆ ಗ್ರಾಮದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.ಒಟ್ಟಾರೆ ಈ ಜೋಡಿ ಜೀವನದಲ್ಲಾದರೂ ಬೆಳಕು ಕಾಣಲಿ ಎಂಬುದೇ ಆಶಯ..