Home Health Hair Care: ಮನೆ ಎದುರಲ್ಲೇ ಸಿಗೋ ಈ ಎಲೆಗಳನ್ನು ಅರೆದು ಕೂದಲಿಗೆ ಹಚ್ಚಿ- ಬಿಳಿ ಕೂದಲು...

Hair Care: ಮನೆ ಎದುರಲ್ಲೇ ಸಿಗೋ ಈ ಎಲೆಗಳನ್ನು ಅರೆದು ಕೂದಲಿಗೆ ಹಚ್ಚಿ- ಬಿಳಿ ಕೂದಲು ಎರಡೇ ದಿನಕ್ಕೆ ಕಪ್ಪಾಗೋ ಚಮತ್ಕಾರ ನೋಡಿ

Hair Care
Image source: Millice

Hindu neighbor gifts plot of land

Hindu neighbour gifts land to Muslim journalist

Hair Care: ನಾವು ಏನು ತಿನ್ನುತ್ತೇವೆ ಎನ್ನುವುದು ನಮ್ಮ ಕೂದಲಿನ ಮೇಲೆ ಕೂಡಾ ಬಹಳವಾಗಿ ಪರಿಣಾಮ ಬೀರುತ್ತದೆ. ಕೆಟ್ಟ ಆಹಾರ ಪದ್ದತಿಯಿಂದಾಗಿ ಕೂದಲು ಉದುರುವುದು, ಕಿರಿ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದು, ಶುಷ್ಕ ಕೂದಲು, ತಲೆ ಹೊಟ್ಟು ಮುಂತಾದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ (Hair Care) ಶಾಂಪೂ, ಕಂಡಿಷನರ್, ಎಣ್ಣೆ, ಬಣ್ಣ ಇತ್ಯಾದಿಗಳನ್ನು ಬಳಸಲು ಆರಂಭಿಸುತ್ತೇವೆ. ಪರಿಣಾಮವಾಗಿ ಒಂದು ಸಮಸ್ಯೆಯ ಪರಿಹಾರದ ಬದಲಿಗೆ ಮತ್ತೊಂದು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ನಿಮ್ಮ ಕೂದಲ ರಕ್ಷಣೆಯ ದಿನಚರಿಯಲ್ಲಿ ಕರಿಬೇವಿನ ಎಲೆಗಳನ್ನು ಸೇರಿಸುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಹೌದು, ಡ್ಯಾಂಡ್ರಫ್ ಆಗಿರಲಿ, ನೆತ್ತಿಯ ತುರಿಕೆಯಾಗಿರಲಿ ಅಥವಾ ಇತರ ಸೋಂಕಾಗಿರಲಿ, ಕರಿಬೇವಿನ ಎಲೆಗಳು ಎಲ್ಲವನ್ನೂ ಗುಣಪಡಿಸಬಹುದು.

ಅದಕ್ಕಾಗಿ ಕರಿಬೇವಿನ ಎಲೆಗಳ ಮಾಸ್ಕ್ ನ್ನು ಈ ರೀತಿ ತಯಾರಿಸಿ:
ಕರಿಬೇವಿನ ಎಲೆಗಳು, ತೆಂಗಿನ ಎಣ್ಣೆ, ಬೇವಿನ ಎಲೆಗಳು, ವಿಟಮಿನ್ ಇ ಕ್ಯಾಪ್ಸುಲ್ ಗಳು ಮತ್ತು ಮೊಸರು ಬೇಕಾಗುತ್ತದೆ. ಮಾಸ್ಕ್ ಮಾಡಲು ಕರಿಬೇವಿನ ಸೊಪ್ಪು ಮತ್ತು ಬೇವಿನ ಸೊಪ್ಪನ್ನು ಮಿಕ್ಸಿಯಲ್ಲಿ ರುಬ್ಬಿ ಇಟ್ಟುಕೊಳ್ಳಿ. ನಂತರ ಇನ್ನೊಂದು ಪಾತ್ರೆಯಲ್ಲಿ ತೆಂಗಿನೆಣ್ಣೆ, ವಿಟಮಿನ್ ಇ ಕ್ಯಾಪ್ಸುಲ್ ಮತ್ತು ಮೊಸರು ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ಅದರ ನಂತರ ಈ ಮಿಶ್ರಣವನ್ನು ಸ್ವಲ್ಪ ಬಿಸಿ ಮಾಡಿ. ಅದು ತಣ್ಣಗಾದ ನಂತರ ಕರಿಬೇವಿನ ಸೊಪ್ಪು ಮತ್ತು ಬೇವಿನ ಸೊಪ್ಪಿನ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಸಿ. ನಿಮ್ಮ ಹೇರ್ ಮಾಸ್ಕ್ ರೆಡಿಯಾಗುತ್ತದೆ.

ಆದರೆ ಕೂದಲಿಗೆ ಹೇರ್ ಮಾಸ್ಕ್ ಅನ್ನು ಹಚ್ಚುವ ಮೊದಲು, ಕೂದಲನ್ನು ಸರಿಯಾಗಿ ತೊಳೆದು ಒಣಗಿಸಿ. ನಂತರ ಕೂದಲು ಮತ್ತು ನೆತ್ತಿಯ ಮೇಲೆ ಹೇರ್ ಮಾಸ್ಕ್ ಅನ್ನು ಹಚ್ಚಿ. ಒಂದು ಗಂಟೆಯ ನಂತರ ಮತ್ತೆ ಕೂದಲನ್ನು ತೊಳೆಯಿರಿ. ವಾರದಲ್ಲಿ ಎರಡು ಬಾರಿ ಈ ಮನೆಮದ್ದನ್ನು ಅನುಸರಿಸುತ್ತಾ ಬಂದರೆ ಬಿಳಿ ಕೂದಲಿನ ಸಮಸ್ಯೆ ಪರಿಹಾರವಾಗುತ್ತದೆ.

ಇದನ್ನೂ ಓದಿ: Interesting Fact: ಲಕ್ಷ ಲಕ್ಷ ಸಂಬಳ ಸಿಗೋ ಲಾಯರ್ ಕೆಲಸ ಬಿಟ್ಟ ಮಹಿಳೆ- ನಂತರ ಈಕೆ ಮಾಡೋ ಕೆಲಸ ಕೇಳಿದ್ರೆ ನೀವೇ ಹುಬ್ಬೇರುಸ್ತೀರಾ!!