Home latest DeepFake Helpline: ಮಹಿಳೆಯರೇ ಗಮನಿಸಿ, ಡೀಪ್ ಫೇಕ್ ಬಗ್ಗೆ ಚಿಂತೆ ಬಿಡಿ!! ನಗರ ಪೊಲೀಸ್ ಇಲಾಖೆಯಿಂದ...

DeepFake Helpline: ಮಹಿಳೆಯರೇ ಗಮನಿಸಿ, ಡೀಪ್ ಫೇಕ್ ಬಗ್ಗೆ ಚಿಂತೆ ಬಿಡಿ!! ನಗರ ಪೊಲೀಸ್ ಇಲಾಖೆಯಿಂದ ಸಹಾಯವಾಣಿಗೆ ಕರೆ ಮಾಡಲು ಮನವಿ!

Hindu neighbor gifts plot of land

Hindu neighbour gifts land to Muslim journalist

Deepfake Help Line: ನಟಿ ರಶ್ಮಿಕಾ ಮಂದಣ್ಣ(Actress Rashmika Mandanna)ಅವರ ಡೀಪ್ ಫೇಕ್ ವೀಡಿಯೋ ವೈರಲ್ ಆಗಿ ಸಂಚಲನ ಸೃಷ್ಟಿ ಮಾಡಿತ್ತು. ಈ ಸಂದರ್ಭ ಚಿತ್ರರಂಗದ ಅಮಿತಾ ಬಚ್ಚನ್ ಸೇರಿದಂತೆ ಇನ್ನುಳಿದ ನಟರು ಈ ಕುರಿತು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಬಳಿಕ, ಕತ್ರಿನಾ ಕೈಫ್ ಬಳಿಕ ಕಾಜೋಲ್ ಅವರ ಡೀಪ್ ಫೇಕ್ ವೀಡಿಯೊ(Kajols Deepfake Video) ವೈರಲ್ ಆಗಿತ್ತು. ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದರು. ಇದೀಗ, ನಗರ ಪೊಲೀಸರು ಡೀಪ್‌ಫೇಕ್‌ ಸಂಬಂಧಿಸಿದಂತೆ ಸಹಾಯವಾಣಿ (Deepfake Help Line)ಪ್ರಾರಂಭಿಸಿದ್ದಾರೆ.

ನಟಿಯರಾದ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್, ಕಾಜೋಲ್ ಸೇರಿ ಅನೇಕ ಕಲಾವಿದರ ಮತ್ತು ಸಾಮಾನ್ಯ ಮಹಿಳೆಯರ ಡೀಪ್‌ಫೇಕ್‌ ವಿಡಿಯೋ ವೈರಲ್ ಆಗುತ್ತಿದ್ದ ಹಿನ್ನೆಲೆ ಸಾರ್ವಜನಿಕರು ಈ ರೀತಿಯ ಕೃತ್ಯ ಎಸಗುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ. ಈ ನಿಟ್ಟಿನಲ್ಲಿ ನಗರ ಪೊಲೀಸರು ಒಂದು ವೇಳೆ ತಮ್ಮ ಡೀಪ್‌ಫೇಕ್‌ ವಿಡಿಯೋ ಕಂಡುಬಂದಲ್ಲಿ ಕೂಡಲೇ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸಹಾಯವಾಣಿ 1930(ರಾಷ್ಟ್ರೀಯ ಸೈಬರ್‌ ಕ್ರೈಂ ರಿಪೋರ್ಟಿಂಗ್‌ ಪೋರ್ಟಲ್‌)ಗೆ ಕರೆ ಮಾಡಿ ದೂರು ನೀಡಲು ನಗರ ಪೊಲೀಸರು ಎಕ್ಸ್‌ನಲ್ಲಿ ಮನವಿ ಸಲ್ಲಿಸಿದ್ದಾರೆ. ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಡೀಪ್‌ ಫೇಕ್‌ಗೆ ಒಳಗಾದರೆ ಕೂಡಲೇ 1930 ಗೆ ಕರೆ ಮಾಡಿ ಬೆಂಗಳೂರು ನಗರ ಪೊಲೀಸರನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಇದನ್ನೂ ಓದಿ: ಮುರುಘಾ ಶ್ರೀಗಳಿಗೆ ಮತ್ತೊಂದು ಸಂಕಷ್ಟ: ಶ್ರೀಗಳ ವಿರುದ್ಧ ಮತ್ತೊಂದು ಪ್ರಕರಣ ದಾಖಲು!!