Home Crime Bengaluru: ಮರಕ್ಕೆ ಆಸಿಡ್‌ ಸುರಿದ ಅಂಗಡಿಯವ; ಕಾರಣವೇನು?

Bengaluru: ಮರಕ್ಕೆ ಆಸಿಡ್‌ ಸುರಿದ ಅಂಗಡಿಯವ; ಕಾರಣವೇನು?

Bengaluru

Hindu neighbor gifts plot of land

Hindu neighbour gifts land to Muslim journalist

Bengaluru: ಸದಾಶಿವನಗರದ ಸ್ಯಾಂಕಿ ರಸ್ತೆಯಲ್ಲಿರುವ ಅಂಗಡಿಯವರು ತನ್ನ ಅಂಗಡಿ ಹೊರಗಿನವರಿಗೆ ಸರಿಯಾಗಿ ಕಾಣಿಸಬೇಕೆಂಬ ಉದ್ದೇಶದಿಂದ ಮರವೊಂದಕ್ಕೆ ಆಸಿಡ್‌ ಸುರಿದಿರುವ ಘಟನೆಯೊಂದು ನಡೆದಿದೆ. ಸ್ಯಾಂಕಿ ರಸ್ತೆಯಲ್ಲಿರುವ ಅಮ್ಮನ ಪೇಸ್ಟ್ರೀಸ್‌ ಮತ್ತು ಅಂಗಡಿ ಗ್ಯಾಲೇರಿಯಾ ಮುಂಭಾಗದಲ್ಲಿ ಈ ಮರವಿದ್ದು, ಈ ಮರಕ್ಕೆ ಅಂಗಡಿಯವರ ಕಳೆದ ವಾರ ಆಸಿಡ್‌ ಸುರಿದಿರುವುದಾಗಿ ಸ್ಥಳಿಯರು ಹೇಳಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: Acid Attack Kadaba: ಕಡಬ ಆಸಿಡ್‌ ಪ್ರಕರಣ; ಘಟನೆಗೆ ಮುನ್ನ ಸಂತ್ರಸ್ತೆಯನ್ನು ಭೇಟಿಯಾಗಿದ್ದ ಆರೋಪಿ

2024 ಆರಂಭದಿಂದ ಇಲ್ಲಿಯವರೆಗೂ ಇದು ಮೂರನೇ ಘಟನೆಯಾಗಿದೆ. ಜನವರಿಯಲ್ಲಿ ಕೆಆರ್ ಮಾರುಕಟ್ಟೆ ಬಳಿ ಪೊಂಗಮಿಯಾ ಮರಗಳನ್ನು ನಾಶಪಡಿಸುವ ಪ್ರಯತ್ನ ನಡೆದಿತ್ತು. ಎರಡು ತಿಂಗಳ ಅವಧಿಯಲ್ಲಿ ಇದು ಮೂರನೇ ಪ್ರಯತ್ನ ಎಂದು ಮರಗಳ ಸಂರಕ್ಷಣಾಧಿಕಾರಿ ವಿಜಯ್ ನಿಶಾಂತ್ ಅವರು ಹೇಳಿರುವುದಾಗಿ ವರದಿಯಾಗಿದೆ.