Home latest Dharmastala Sowjanya murder case: ಸಂತೋಷ್ ಆರೋಪಿಯಲ್ಲ ಎಂದು ಕೋರ್ಟ್ ಹೇಳೋದಲ್ಲ, ನಾವೇ 10 ವರ್ಷಗಳಿಂದ...

Dharmastala Sowjanya murder case: ಸಂತೋಷ್ ಆರೋಪಿಯಲ್ಲ ಎಂದು ಕೋರ್ಟ್ ಹೇಳೋದಲ್ಲ, ನಾವೇ 10 ವರ್ಷಗಳಿಂದ ಹೇಳುತ್ತಿದ್ದೇವೆ, ನಾವು ಕೊಟ್ಟ ಹೆಸರಿನವರನ್ನು ತನಿಖೆ ಮಾಡಿ- ಸೌಜನ್ಯ ತಾಯಿ!!

Dharmastala Sowjanya murder case
Image source- Tuluvaani, Kannadiga world

Hindu neighbor gifts plot of land

Hindu neighbour gifts land to Muslim journalist

Dharmastala Sowjanya murder case: ಸುಮಾರು 10ವರುಷಗಳ ರಾಷ್ಟ್ರ ಮಟ್ಟದಲ್ಲಿ ಬಹಳ ಸುದ್ದಿಮಾಡಿ ಇಡೀ ದೇಶವೇ ದಕ್ಷಿಣ ಕನ್ನಡ ಜಿಲ್ಲೆಯ(Dakshina kannada) ಕುಗ್ರಾಮದತ್ತ ತಿರುಗಿನೋಡುವಂತೆ ಮಾಡಿದ್ದ ಉಜಿರೆ ಎಸ್ ಡಿ ಎಂ ಕಾಲೇಜು(Ujire SDM collage) ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ(Sowjanya rape case) ಹಾಗೂ ಕೊಲೆ ಪ್ರಕರಣದ ತೀರ್ಪು ಇದೀಗ ಬರೋಬ್ಬರಿ 11 ವರ್ಷಗಳ ಬಳಿಕ ಹೊರಬಿದ್ದಿದ್ದು, ಕೊನೆಗೂ ಸೌಜನ್ಯಳ ಸಾವಿಗೆ ನ್ಯಾಯ ದೊರಕದಂತಾಗಿದೆ. ಈ ಬಗ್ಗೆ ಸೌಜನ್ಯಳ ತಾಯಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು, ಧರ್ಮಸ್ಥಳದ(Dharmastala) ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ (Dharmastala Sowjanya murder case) ಆರೋಪಿಯಾಗಿದ್ದ ಸಂತೋಷ್ ರಾವ್ ದೋಷಮುಕ್ತ ಎಂದು ಇವತ್ತು ತೀರ್ಪು ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸೌಜನ್ಯ ತಾಯಿ ನನ್ನ ಮಗಳ ಪ್ರಕರಣದಲ್ಲಿ ಸಂತೋಷ್ ರಾವ್ ಆರೋಪಿ ಅಲ್ಲ ಎಂದು ಕೋರ್ಟ್ ಹೇಳುವುದೇನು? ಆತ ಆರೋಪಿಯಲ್ಲ ಎಂದು ನಾವು ಹತ್ತು ವರ್ಷದಿಂದ ಹೇಳಿಕೊಂಡು ಬಂದಿದ್ದೇವೆ. ಅದರ ಜೊತೆಗೆ ಮೂರ್ನಾಲ್ಕು ಜನರ ಹೆಸರು ಕೊಟ್ಟಿದ್ದೆವು, ಅವರ ತನಿಖೆ ಆಗಬೇಕು ಎಂದು ಪ್ರಕರಣದ ಮರುತನಿಖೆಗೆ ಆಗ್ರಹಿಸಿದ್ದಾರೆ.

ಸಂತೋಷ್ ರಾವ್(Santosh rao) ದೋಷಮುಕ್ತ ಎಂದು ಇವತ್ತು ತೀರ್ಪು ಬಂದಿರೋದು, ‌ನಮಗೆ ಸಿಕ್ಕ ಒಂದು ಜಯ ಎಂದುಕೊಳ್ಳೋಣ. ಆದರೆ ಸಿಬಿಐ(CBI) ಮತ್ತೆ ಆರೋಪಿಗಳು ಯಾರು ಅಂತ ತನಿಖೆ ಮಾಡಿ ನ್ಯಾಯ ಕೊಡಲಿ. ಸಿಬಿಐ ತನಿಖೆಯಿಂದ ನಮಗೆ ನ್ಯಾಯ ಸಿಗುವ ಭರವಸೆ ಇದೆ. ನಾವು ಕೊಟ್ಟ ಹೆಸರಿನವರು ತನಿಖೆಗೆ ತಡೆ ತಂದಿದ್ದಾರೆ, ಈ ಪ್ರಕರಣದಲ್ಲಿ ಅವರು ಇಲ್ಲದಿದ್ರೆ ತಡೆಯಾಜ್ಞೆ ಯಾಕೆ ತಂದಿದ್ದು? ಅವರ ತನಿಖೆ ಆಗಬೇಕು, ನಮಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ಸೌಜನ್ಯ ಪ್ರಕರಣದಲ್ಲಿ ಸಂತೋಷ್ ರಾವ್ ಗೆ ಸಿಬಿಐ ಕೋರ್ಟ್ ಕ್ಲೀನ್ ಚಿಟ್ ವಿಚಾರಕ್ಕೆ ಸಂಬಂಧಿಸಿದಂತೆ ಸೌಜನ್ಯ ಪರ ಹೋರಾಟಗಾರ, ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ(Mahesh shetty timarodi) ಪ್ರತಿಕ್ರಿಯೆ ನೀಡಿದ್ದು, ಸೌಜನ್ಯ ಪ್ರಕರಣದಲ್ಲಿ ಈವರೆಗೆ ನಡೆದ ತನಿಖೆಗಳೆಲ್ಲವೂ ಬೋಗಸ್. ಧರ್ಮಸ್ಥಳ ಅಣ್ಣಪ್ಪ ಇಲ್ಲವಾದರೆ ಮಂಜುನಾಥನೇ ಈ ಕೇಸಿನಲ್ಲಿ ನ್ಯಾಯ ಕೊಡಿಸಬೇಕು.ಇದುವರೆಗಿನ ತನಿಖೆಗಳೆಲ್ಲ ಬೋಗಸ್, ಹತ್ತು ವರ್ಷ ಯಾರೋ ಹೇಳಿದ್ರು ಅಂತ ಆರೋಪಿಯನ್ನು ಜೈಲಿಗೆ ಹಾಕಿದ್ರು, 10 ವರ್ಷ ಅವನು ಜೈಲಲ್ಲಿದ್ದ, ಅವನ ಯೌವ್ವನ ಗತಿ ಏನಾಯಿತು? ಅವನಿಗೆ ಇನ್ನು ಯಾರು ದಿಕ್ಕು ಅಂತ ಕೇಳೋದು? ಧರ್ಮಸ್ಥಳದವರು ಇಂತವರು ಅಂತ ಹೇಳಿದ್ರೆ ಅವರೇ ಆರೋಪಿ. ಆದರೆ ಹುಡುಗಿಯ ಮನೆಯವರು ಹೇಳಿದ್ರೆ ಅವರು ಆರೋಪಿಗಳಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Sakshi shivanand: ಪ್ರೀತಿ ಬಲೆಗೆ ಬಿದ್ದು ಗಂಡನಿಂದಲೇ ಮೋಸ ಹೋದ ಸಾಕ್ಷಿ ಶಿವಾನಂದ್!! ಸಿನಿಮಾ ಬದುಕಿನಿಂದಲೇ ದೂರವಾದ ನಟಿ ಈಗ ಹೇಗಿದ್ದಾರೆ?