Home latest ಕಡಬದಲ್ಲಿ ‘ಹನಿಟ್ರ್ಯಾಪ್’!! ಮರ್ದಾಳದ ಯುವಕರಿಂದ ಮಂಗಳೂರಿನ ಯುವಕನ ದರೋಡೆ ಶಂಕೆ-ಓರ್ವ ವಶಕ್ಕೆ!?

ಕಡಬದಲ್ಲಿ ‘ಹನಿಟ್ರ್ಯಾಪ್’!! ಮರ್ದಾಳದ ಯುವಕರಿಂದ ಮಂಗಳೂರಿನ ಯುವಕನ ದರೋಡೆ ಶಂಕೆ-ಓರ್ವ ವಶಕ್ಕೆ!?

Hindu neighbor gifts plot of land

Hindu neighbour gifts land to Muslim journalist

ಕಡಬ: ಮಂಗಳೂರಿನ ಯುವಕನೋರ್ವನನ್ನು ಕಡಬ ಮರ್ದಾಳದ ಯುವಕರ ತಂಡವೊಂದು ಹನಿಟ್ರ್ಯಾಪ್ ಬಲೆಗೆ ಕೆಡವಿದ ಶಂಕೆಯೊಂದು ವ್ಯಕ್ತವಾಗಿದ್ದು, ಹಲ್ಲೆ ನಡೆಸಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ಬೆಳಕಿಗೆ ಬಂದಿದೆ.

ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಕಡಬ ಪೊಲೀಸರು ಓರ್ವ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದ್ದು, ಅಧಿಕೃತ ಮಾಹಿತಿ ಹೊರಬರಬೇಕಿದೆ.

ಮಂಗಳೂರು ನಿವಾಸಿ ಯುವಕನೊಬ್ಬನನ್ನು ಕಡಬ ಮರ್ದಾಳದ ಯುವಕರ ತಂಡವೊಂದು ಫೇಸ್ಬುಕ್ ನಲ್ಲಿ ಯುವತಿಯೆಂದು ನಂಬಿಸಿ ಪರಿಚಯಿಸಿಕೊಂಡಿದ್ದು, ಬಳಿಕ ಮರ್ದಾಳಕ್ಕೆ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ. ಮದನಾರಿಯ ಮರ್ಧನ ಸುಖದ ಕನಸು ಕಾಣುತ್ತಾ ಆ ಯುವಕ ಜೊಲ್ಲು ಸುರಿಸುತ್ತ ಕಡಬ ತಾಲೂಕಿನ ಮರ್ದಾಳ ತಲುಪಿದ್ದಾನೆ.

ಮರ್ದಾಳಕ್ಕೆ ಬಂದ ಯುವಕನನ್ನು ಅಲ್ಲಿ ಕಾದು ಕೂತಿದ್ದ ತಂಡವು ಅಲ್ಲೇ ಸಮೀಪದ ಕರ್ಮಾಯಿ-ಕೊರಿಯಾರ್ ಎಂಬ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದು, ಹಲ್ಲೆ ನಡೆಸಿ ಬಳಿಕ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಯುವಕ ಒಪ್ಪದೇ ಇದ್ದಾಗ ‘ಹೆಣ್ಣಿನ ಮೇಲೆ ದೌರ್ಜನ್ಯ’ಪ್ರಕರಣ ದಾಖಲಿಸುವ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡುವ ಬೆದರಿಕೆ ನೀಡಿದ್ದು, ಈ ವೇಳೆ ಯುವಕ ತಬ್ಬಿಬ್ಬು ಆಗಿದ್ದಾನೆ ಹನಿಯನ್ನು ಅರಸುತ್ತಾ ಬಂದವನ ಬಳಿ ಮನಿ ಕೇಳಿ ದೋಚಲು ಹೊರಟಿದೆ ಗ್ಯಾಂಗ್ ಎಂದು ದೂರಲಾಗಿದೆ.

ಬಳಿಕ ಪ್ರಕರಣ ಠಾಣೆಯ ಮೆಟ್ಟಿಲೇರಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸಂತ್ರಸ್ತ ಯುವಕನ ಮೂಲಕವೇ ಗ್ಯಾಂಗ್ ಗೆ ಕರೆ ಮಾಡಿಸಿ ಕಡಬಕ್ಕೆ ಬರುವಂತೆ ಕರೆಸಿಕೊಂಡಿದ್ದು, ಕೂಡಲೇ ತಂಡವು ಎರಡು ವಾಹನದಲ್ಲಿ ದುಡ್ಡು ಗೊರಿಕೊಳ್ಳುವ ಖುಷಿಯಲ್ಲಿ ಕಡಬಕ್ಕೆ ಬಂದಿದೆ ಎನ್ನಲಾಗಿದೆ. ಈ ವೇಳೆ ಓರ್ವ ಆರೋಪಿ ಪೊಲೀಸರು ಬರುವ ಮಾಹಿತಿ ಅರಿತು ಅರ್ಧದಿಂದಲೇ ಹಿಂದಕ್ಕೆ ತೆರಳಿದ್ದು, ಈ ವೇಳೆ ಬೆನ್ನಟ್ಟಿದ ಪೊಲೀಸರು ನೂಜಿಬಾಳ್ತಿಲ ಸಮೀಪದ ಪೇರಡ್ಕ ಎಂಬಲ್ಲಿ ಓರ್ವನನ್ನು ವಶಕ್ಕೆ ತೆಗೆದುಕೊಂಡಿದ್ದು, ಇಬ್ಬರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.