Home Crime Vitla: ಅಡ್ಯನಡ್ಕ ಕರ್ನಾಟಕ ಬ್ಯಾಂಕ್‌ಗೆ ನುಗ್ಗಿದ ಕಳ್ಳರು; ನಗ-ನಗದು ಕಳವು

Vitla: ಅಡ್ಯನಡ್ಕ ಕರ್ನಾಟಕ ಬ್ಯಾಂಕ್‌ಗೆ ನುಗ್ಗಿದ ಕಳ್ಳರು; ನಗ-ನಗದು ಕಳವು

Vitla

Hindu neighbor gifts plot of land

Hindu neighbour gifts land to Muslim journalist

Vitla: ವಿಟ್ಲ ಸಮೀಪದ ಅಡ್ಯನಡ್ಕದಲ್ಲಿ ಬ್ಯಾಂಕೊಳಗೆ ನುಗ್ಗಿದ ಖದೀಮರು ಹಣ-ಒಡವೆ ದೋಚಿರುವ ಘಟನೆಯೊಂದು ನಡೆದಿದೆ ಎಂದು ವರದಿಯಾಗಿದೆ. ಕರ್ನಾಟಕ ಬ್ಯಾಂಕ್‌ ಅಡ್ಯನಡ್ಕ ಶಾಖೆಯಲ್ಲಿ ಈ ಕಳ್ಳತನ ನಡೆದಿದೆ. ಕಳ್ಳರು ಕಿಟಿಕಿಗಳನ್ನು ಮುರಿದಿಉ ಒಳನುಗ್ಗಿ, ನಗ, ನಗದು ದೋಚಿದ್ದಾರೆನ್ನಲಾಗಿದೆ.

ಇದನ್ನೂ ಓದಿ: Mangaluru-Ayodhya Special Train: ಮಂಗಳೂರಿನಿಂದ ಅಯೋಧ್ಯೆಗೆ ವಿಶೇಷ ರೈಲು

ಈ ಬ್ಯಾಂಕ್‌ 20 ವರ್ಷದ ಹಳೆಯ ಕಟ್ಟಡದಲ್ಲಿ ಇದ್ದುದರಿಂದ, ಪೊದೆಗಳು ಸುತ್ತಮುತ್ತ ಆವರಿಸಿಕೊಂಡಿದೆ. ಯಾವುದೇ ಮುಂಜಾಗ್ರತಾ ಕ್ರಮ ಈ ಕಟ್ಟಡದಲ್ಲಿ ಇಲ್ಲ ಎಂದು ವರದಿಯಾಗಿದೆ. ಅಜಾಗರೂಕತೆಯೇ ಈ ಕಳ್ಳತನಕ್ಕೆ ಕಾರಣ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದು, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ವರದಿಯಾಗಿದೆ.

ನಿನ್ನೆ ರಾತ್ರಿ ಈ ಕೃತ್ಯ ನಡೆದಿದೆ. ರಾತ್ರಿ 2.30 ರಿಂದ ಬೆಳಗ್ಗಿನ ಜಾವ 4 ಗಂಟೆಯ ಸುಮಾರಿಗೆ ಈ ಕಳ್ಳತನ ನಡೆದಿದೆ ಎನ್ನಲಾಗಿದೆ. ಕರ್ನಾಟಕ ಬ್ಯಾಂಕ್‌ ಅಡ್ಯನಡ್ಕ ಶಾಖೆಯು ಕಲ್ಲಡ್ಕ ಕಾಂಜ್ಞಾಗಾಡ್‌ ಅಂತರಾಜ್ಯ ಹೆದ್ದಾರಿಯ ಅಂಚಿನಲ್ಲಿದೆ.

ಕಳ್ಳರು ಬ್ಯಾಂಕಿನ ಹಿಂಬಾಗಿಲಿನ ಕಿಟಕಿ ಮುರಿದು ಒಳ ನುಗ್ಗಿದ್ದು, ಗ್ಯಾಸ್‌ ಕಟ್ಟರ್‌ ಬಳಸಿ ಸೇಫ್‌ ಲಾಕರ್‌ನ ಬಾಗಿಲು ತುಂಡರಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ ಬ್ಯಾಂಕಿನ ಸೆಕ್ಯೂರಿಟಿ ಅಲರಾಂ ಸೈರನ್‌ ಮಾಡದೇ ಇರುವುದು ನಿಜಕ್ಕೂ ಕೌತುಕದ ವಿಷಯ.

ಇಂದು ಬೆಳಗ್ಗಿನ ಜಾವ 9.30 ರ ಸುಮಾರಿಗೆ ಬ್ಯಾಂಕ್‌ ಸಿಬ್ಬಂದಿಗಳು ಬ್ಯಾಂಕ್‌ಗೆಂದು ಬಂದ ವೇಳೆ ಕಳ್ಳತನ ನಡೆದಿರುವುದ ತಿಳಿದಿದೆ. ವಿಟ್ಲ ಠಾಣಾ ಎಸೈ ಘಟನಾ ಸ್ಥಳಕ್ಕೆ ಬಂದಿದ್ದಾರೆ. ಇದಕ್ಕೂ ಮೊದಲು ಪೊಲೀಸ್‌ ಇನ್ಸ್‌ಪೆಕ್ಟರ್‌ ಹಾಗೂ ಸಿಬ್ಬಂದಿಗಳು ಬಂದು ಪರಿಶೀಲನೆ ನಡೆಸಿದ್ದರು. ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳ ಬರಬೇಕಿದೆ ಎಂದು ವರದಿಯಾಗಿದೆ.