ಕೊಕ್ಕೋ ಮಾತ್ರ ಖರೀದಿ – ಅಡಿಕೆ ಖರೀದಿ ದಿನಾಂಕ ಮುಂದೆ ತಿಳಿಸಲಾಗುತ್ತದೆ – ಕ್ಯಾಂಪ್ಕೋ ಸ್ಪಷ್ಟನೆ

ಮಂಗಳೂರು: ಕ್ಯಾಂಪ್ಕೋ ವತಿಯಿಂದ ಏ.9 ರಿಂದ ಕೊಕ್ಕೋ ಖರೀದಿ ಆರಂಭವಾಗಲಿದೆ ಆದರೆ ಅಡಿಕೆ ಖರೀದಿ ಬಗ್ಗೆ ಸಿದ್ಧತೆ ನಡೆಯುತ್ತಿದೆ. ಈ ಬಗ್ಗೆ ಬೆಳೆಗಾರರಿಗೆ ಮುಂದೆ ಖರೀದಿ ದಿನಾಂಕವನ್ನು ತಿಳಿಸಲಾಗುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ  ಸ್ಪಷ್ಟಪಡಿಸಿದ್ದಾರೆ.

ಕ್ಯಾಂಪ್ಕೋ ಮೂಲಕ ಅಡಿಕೆ ಖರೀದಿ ನಡೆಸಲು ಸಿದ್ಧತೆ ನಡೆದಿದೆ. ಆದರೆ ಪೂರಕ ವ್ಯವಸ್ಥೆಗಳೂ ನಡೆಯುತ್ತಿದೆ. ಖರೀದಿ ದಿನ ನಿಗದಿಯಾಗಿಲ್ಲ, ಈ ಬಗ್ಗೆ ಮುಂದೆ ತಿಳಿಸಲಾಗುವುದು, ಬೆಳೆಗಾರರಿಗೆ ಯಾವುದೇ ಗೊಂದಲ ಬೇಡ  ಎಂದು  ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ತಿಳಿಸಿದ್ದಾರೆ.ಕೊಕ್ಕೋ ಖರೀದಿ ಈ ಹಿಂದೆ ತಿಳಿಸಿದಂತೆ ನಿಗದಿಪಡಿಸಿದ ದಿನಗಳಲ್ಲಿ  ನಡೆಯುತ್ತದೆ.

ಏ.9 ರಿಂದ ಪ್ರತೀ ಗುರುವಾರ ಸುಳ್ಯ, ವಿಟ್ಲ, ಅಡ್ಯನಡ್ಕ, ಕಡಬ ದ ಕ್ಯಾಂಪ್ಕೋ ಶಾಖೆಗಳಲ್ಲಿ ಕೊಕ್ಕೋ ಖರೀದಿ. ಏ.10 ರಿಂದ ಪ್ರತೀ ಶುಕ್ರವಾರ ಪುತ್ತೂರು ಶಾಖೆಯಲ್ಲಿ  ಕೊಕ್ಕೋ ಖರೀದಿ , ಏ.13 ರಿಂದ ಪ್ರತೀ ಸೋಮವಾರ ಬೆಳ್ತಂಗಡಿ ಶಾಖೆಯಲ್ಲಿ ಕೊಕ್ಕೋ ಖರೀದಿ ಮಾಡಲಾಗುತ್ತದೆ. ಬೆಳಗ್ಗೆ 9 ರಿಂದ 12 ಗಂಟೆಯವರೆಗೆ ಕೊಕ್ಕೋ ಖರೀದಿ ನಡೆಯುತ್ತದೆ   ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ತಿಳಿಸಿದ್ದಾರೆ. 

 ಕೃಷಿ ವಸ್ತು ಮಾರಾಟಕ್ಕೆ ಬರುವ ಹಿನ್ನೆಲೆಯಲ್ಲಿ  ಕ್ಯಾಂಪ್ಕೋ ಐಡಿ ಕಾರ್ಡ್ ಅಥವಾ ಆರ್ ಟಿ ಸಿ ಜೊತೆ ಬರಬೇಕಾಗಿದೆ. ಮುಂದಿನ ದಿನಗಳಲ್ಲಿ  ಕೊಕ್ಕೋ ಖರೀದಿ ಅವಧಿ ವಿಸ್ತರಣೆ, ಇತರ ಕಡೆಗಳಲ್ಲೂ ಖರೀದಿ ನಡೆಸಬೇಕೇ ಎಂಬುದರ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ತಿಳಿಸಿದ್ದಾರೆ.

Leave A Reply

Your email address will not be published.