ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಲಿಪ್‌ಲಾಕ್ ದೃಶ್ಯ ವೈರಲ್; ಸಖತ್ ಬೋಲ್ಡ್ ದೃಶ್ಯದಲ್ಲಿ ಮಿಂಚಿದ ತೆಲುಗು ಸ್ಟಾರ್

ಬಾಹುಬಲಿ ಖ್ಯಾತಿಯ ತೆಲುಗು ಸೂಪರ್ ಸ್ಟಾರ್ ರಾಣಾ ದಗ್ಗುಬಾಟಿ ಮತ್ತೆ ಮುನ್ನಲೆಗೆ ಬಂದಿದ್ದಾರೆ. ಇವರು ನಟಿಸಿದ ಕೊನೆಯ ಚಿತ್ರ ವಿರಾಟ ಪರ್ವಂ ಸಿನಿಮಾ ಹೇಳಿಕೊಳ್ಳುವಷ್ಟು ಖ್ಯಾತಿಗಳಿಸಿಲ್ಲ. ಇದೀಗ ರಾಣಾ ಆಕ್ಷನ್, ಥ್ರಿಲ್ಲಿಂಗ್ ವೆಬ್ ಸೀರಿಸ್ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿ ಬಂದಿದ್ದಾರೆ.

ಹೌದು, ರಾಣಾ ದಗ್ಗುಬಾಟಿ ನಟನೆಯ ರಾಣಾ ನಾಯ್ಡು ಹೊಸ ಸೀರಿಸ್‌ನ ಟೀಸರ್ ರಿಲೀಸ್ ಆಗಿದೆ. ಹಾಗೂ ಭಾರೀ ವೈರಲ್ ಆಗಿದೆ. ನಟ ರಾಣಾ ದಗ್ಗುಬಾಟಿಯ ಹೊಸ ಗೆಟಪ್ ನೋಡಿ ಅಭಿಮಾನಿಗಳು ನಿಜಕ್ಕೂ ಥ್ರಿಲ್ ಆಗಿದ್ದಾರೆ.

ರಾಣಾ ನಾಯ್ಡು ಸೀರಿಸ್‌ನಲ್ಲಿ ರಾಣಾ ದಗ್ಗುಬಾಟಿ ಮತ್ತು ವೆಂಕಟೇಶ್ ದಗ್ಗುಬಾಟಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಈ ಇಬ್ಬರು ಸ್ಟಾರ್ ತೆರೆಹಂಚಿಕೊಂಡಿದ್ದಾರೆ. ಇವರಿಬ್ಬರ ಈ ನಟನೆಯ ಮೋಡಿಯನ್ನು ನೋಡಲು ಅಭಿಮಾನಿಗಳು ಸಖತ್ ಕಾತುರರಾಗಿದ್ದಾರೆ. ಈ ಸೀರಿಸ್‌ನಲ್ಲಿ ರಾಣಾ ಮತ್ತು ವೆಂಕಟೇಶ್ ಇಬ್ಬರೂ ತಂದೆ ಮಗನ ಪಾತ್ರ ಮಾಡಿದ್ದಾರೆ.

ಈ ಸೀರಿಸ್ ನ ವಿಶೇಷತೆಯೆಂದರೆ, ಇದರಲ್ಲಿ ಆ್ಯಕ್ಷನ್, ಥ್ರಿಲ್ಲರ್, ಸಸ್ಪೆನ್ಸ್, ಹಿಂಸೆಯ ಜೊತೆಗೆ, ರಾಣಾ ದಗ್ಗುಬಾಟಿಯ ಲಿಪ್‌ಲಾಕ್ ಸೀನ್ ಇದ್ದು ಅಭಿಮಾನಿಗಳಿಗೆ ಒಂದು ಕ್ಷಣ ಶಾಕ್ ನೀಡಿದಂತೂ ನಿಜ. ಹೌದು ರಾಣಾ ಈ ಸೀರಿಸ್ ನಲ್ಲಿ ಯಾವುದೇ ಬಾಲಿವುಡ್ ಸ್ಟಾರ್ ಗೆ ಕಮ್ಮಿ ಇಲ್ಲದ ಹಾಗೇ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ರಾಣಾ ಅಂಕಲ್ ವೆಂಕಟೇಶ್ ದಗ್ಗುಬಾಟಿ ಜೊತೆ ನಟಿಸಿದ್ದಾರೆ. ಭಾರಿ ಕುತೂಹಲ ಮತ್ತು ನಿರೀಕ್ಷೆ ಮೂಡಿಸಿರುವ ರಾಣಾ ನಾಯ್ಡು ಟೀಸರ್ ಇದೀಗ ಮತ್ತಷ್ಟು ಕಾತರ ಹೆಚ್ಚಿಸಿದೆ.

ರಾಣಾ ದಗ್ಗುಬಾಟಿಯ ಲಿಪ್ ಲಾಕ್ ದೃಶ್ಯ ಅವರ ಫ್ಯಾನ್ಸ್ ಗೆ ಇಷ್ಟವಾಗಿದೆ. ಹಾಗೂ ಭಾರೀ ವೈರಲ್ ಕೂಡಾ ಆಗಿದೆ. ಇನ್ನು ಈ ಟೀಸರ್ ನಲ್ಲಿ ರಾಣಾ ಎಂಟ್ರಿಯಂತೂ ಇಂಟ್ರೆಸ್ಟಿಂಗ್ ಪಡೆದುಕೊಂಡಿದೆ. ಸುರ್ವಿನ್ ಚಾವ್ಲ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುರ್ವಿನ್ ಚಾವ್ಲಾ, ರಾಣಾ ಮತ್ತು ವೆಂಕಟೇಶ್ ದಗ್ಗುಬಾಟಿ ಅವರನ್ನು ಒಟ್ಟಿಗೆ ರಾಣಾ ನಾಯ್ಡುನಲ್ಲಿ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.

ಬಹುನಿರೀಕ್ಷೆಯ ಈ ಸೀರಿಸ್ ಒಟಿಟಿಗಳ ದಿಗ್ಗಜ ನೆಟ್‌ಫ್ಲಿಕ್ಸ್ ನಲ್ಲಿ ರಿಲೀಸ್ ಆಗಲಿದೆ. ಶನಿವಾರ ಅಂದರೆ ಇಂದು ( ಸೆ. 24) ನೆಟ್‌ಫ್ಲಿಕ್ಸ್ ಟೀಸರ್ ರಿಲೀಸ್ ಮಾಡಿದೆ. ಟೀಸರ್ ರಿಲೀಸ್ ಮಾಡಿ, ‘ದಗ್ಗುಬಾಟಿ ವರ್ಸಸ್ ದಗ್ಗುಬಾಟಿ. ಆದರೆ ಇದು ನಿಮ್ಮ ಪ್ರತಿದಿನದ ಫ್ಯಾಮಲಿ ಡ್ರಾಮ ಅಲ್ಲ. ಮಾವ ಅಳಿಯನ ಫೈಟ್ ನೋಡಿ, ರಾಣಾ ನಾಯ್ಡು ಶೀಘ್ರದಲ್ಲೇ ನಿರೀಕ್ಷಿಸಿ’. ಎಂದು ಬರೆಯಲಾಗಿದೆ. ಸದ್ಯ ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬಂದಿರುವ ರಾಣಾ ನಾಯ್ಡು, ಸಿರೀಸ್ ಒಟಿಟಿಗಳ ಮೂಲಕ ಅಭಿಮಾನಿಗಳನ್ನು ರಂಜಿಸಲು ಬರಲಿದ್ದಾರೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Leave A Reply

Your email address will not be published.