Home Interesting ವಾಟ್ಸಪ್ ಬಳಕೆದಾರರಿಗೆ ಸಿಗಲಿದೆ ಭರ್ಜರಿ ಆಫರ್| ವಾಟ್ಸಪ್ ಪೇ ಮೇಲೆ ಸಿಗಲಿದೆ ಕ್ಯಾಶ್​ಬ್ಯಾಕ್!

ವಾಟ್ಸಪ್ ಬಳಕೆದಾರರಿಗೆ ಸಿಗಲಿದೆ ಭರ್ಜರಿ ಆಫರ್| ವಾಟ್ಸಪ್ ಪೇ ಮೇಲೆ ಸಿಗಲಿದೆ ಕ್ಯಾಶ್​ಬ್ಯಾಕ್!

Hindu neighbor gifts plot of land

Hindu neighbour gifts land to Muslim journalist

ಪ್ರತಿಯೊಬ್ಬ ವ್ಯಕ್ತಿಯು ಇಂದು ಬಳಸುತ್ತಿರುವುದು ವಾಟ್ಸಪ್. ಯಾವುದೇ ಒಂದು ವಿಷಯ ನಡೆದರು ಅತಿವೇಗವಾಗಿ ನಮಗೆ ಈ ಮೀಡಿಯ ಮೂಲಕವೇ ತಲುಪುತ್ತದೆ. ಇಂತಹ ವಾಟ್ಸಪ್ ತನ್ನ ಗ್ರಾಹಕರನ್ನು ಸೆಳೆಯಲು ದಿನದಿಂದ ದಿನಕ್ಕೆ ಹೊಸ ಹೊಸ ವಿಚಾರಗಳನ್ನು ಅಪ್ಡೇಟ್ ಮಾಡುತ್ತಲೇ ಬಂದಿದ್ದು, ಇದೀಗ ಬಳಕೆದಾರರಿಗೆ ಮತ್ತೊಂದು ಸಿಹಿ ಸುದ್ದಿ ನೀಡುವ ಮೂಲಕ ಗ್ರಾಹಕರನ್ನು ತನ್ನತ್ತ ಆಕರ್ಷಿಸಲು ಮುಂದಾಗಿದೆ.

ಹೌದು. ಇದೀಗ ವಾಟ್ಸಪ್ ಕೇವಲ ಚಾಟಿಂಗ್ ಮಾತ್ರ ಸೀಮಿತವಾಗಿರದೆ, ಹಣದ ವಹಿವಾಟು ನಡೆಸಬಹುದಾದಂತಹ ಒಂದು ಯುಪಿಐ ಪೇಮೆಂಟ್ ಆಗಿದೆ. ಪ್ರಮುಖ ಮಾರುಕಟ್ಟೆ ಪಾಲನ್ನು ಹೊಂದಿರುವ ಗೂಗಲ್ ಮತ್ತು ಫೋನ್ ಪೇ ನಂತಹ ತನ್ನ ಪ್ರತಿಸ್ಪರ್ಧಿಗಳೊಂದಿಗೆ ಸ್ಪರ್ಧಿಸಲು ವಾಟ್ಸಪ್ ಸಿದ್ಧವಾಗಿದೆ. ವಾಟ್ಸಪ್ ತನ್ನ ಪ್ಲಾಟ್​ಫಾರ್ಮ್​ನಲ್ಲಿ ವಹಿವಾಟು ನಡೆಸಲು ಬಳಕೆದಾರರಿಗೆ 33 ರೂಪಾಯಿಗಳವರೆಗೆ ಕ್ಯಾಶ್​ಬ್ಯಾಕ್ ನೀಡಲು ಸಿದ್ಧವಾಗಿದ್ದು,ವಾಟ್ಸ್‌ಆಯಪ್ ಪೇ ಅನ್ನು ಬಳಸಿಕೊಂಡು, ಬಳಕೆದಾರರು ಚಾಟ್ ವಿಂಡೋದಿಂದ ನೇರವಾಗಿ ತಮ್ಮ ಸಂಪರ್ಕಗಳಿಗೆ ಹಣವನ್ನು ಕಳುಹಿಸಬಹುದಾಗಿದೆ.

ಇತ್ತೀಚೆಗೆ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ವಾಟ್ಸ್‌ಆಯಪ್ ಬಳಕೆದಾರರಿಗೆ ತನ್ನ ಪಾವತಿ ಸೇವೆಯ ಮಿತಿಯನ್ನು 100 ಮಿಲಿಯನ್ಗೆ ಹೆಚ್ಚಿಸಿದ್ದು,ಇದು ಸಕಾರಾತ್ಮಕ ಸಂಕೇತವಾಗಿದೆ. ಏಕೆಂದರೆ ಇದು ಈಗಾಗಲೇ ಭಾರತದಲ್ಲಿ 400 ಮಿಲಿಯನ್+ ಬಳಕೆದಾರರನ್ನು ಹೊಂದಿದ್ದು, ಅವರು ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಹೆಚ್ಚಿನವರಿಗೆ ಪ್ರತಿದಿನ ಅಪ್ಲಿಕೇಶನ್​ನ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

ವಾಟ್ಸ್‌ಆಯಪ್​ನಿಂದ ಈ ಕ್ಯಾಶ್​ಬ್ಯಾಕ್ ಪಡೆಯಲು ಬಳಕೆದಾರರು ಎಷ್ಟು ಹಣವನ್ನು ಕಳುಹಿಸಬೇಕು ಎಂಬುದಕ್ಕೆ ಯಾವುದೇ ಕನಿಷ್ಠ ಮಿತಿ ಇರುವುದಿಲ್ಲ. ಪ್ರೋತ್ಸಾಹಧನವು ಮೂರು ವಹಿವಾಟುಗಳಲ್ಲಿ ಹರಡುತ್ತದೆ. ಬಳಕೆದಾರರು ಇತರ ಬಳಕೆದಾರರಿಗೆ ವಾಟ್ಸಪ್ ಪೇ ಮೂಲಕ 1 ರೂಪಾಯಿಗಿಂತ ಕಡಿಮೆ ಹಣವನ್ನು ಕಳುಹಿಸುತ್ತಿದ್ದರೂ ಸಹ, ಅವರು ವಹಿವಾಟಿಗೆ ಅರ್ಹರಾಗಿರುತ್ತಾರೆ.

ವಾಟ್ಸಾಪ್ ನಲ್ಲಿ ಪಾವತಿಯ ಸಾಧ್ಯತೆಗಳನ್ನು ಅನ್ಲಾಕ್ ಮಾಡಲು ಹಂತ ಹಂತವಾಗಿ ಕ್ಯಾಶ್​ಬ್ಯಾಕ್ ಅಭಿಯಾನವನ್ನು ಹೊರತರುತ್ತಿದೆ ಎಂದು ಕಂಪನಿಯು ರಾಯಿಟರ್ಸ್​​ಗೆ ತಿಳಿಸಿದ್ದು, ಕ್ಯಾಶ್​ಬ್ಯಾಕ್ ನೀಡುತ್ತಿರುವುದು ಇದೇ ಮೊದಲಲ್ಲ ಎಂಬುದು ಗಮನಿಸಬೇಕಾದ ಸಂಗತಿ.