Home National IRCTC PNR On WhatsApp: ರೈಲ್ವೇ ಪ್ರಯಾಣಿಕರೆ, ವಾಟ್ಸಪ್’ನಲ್ಲಿ ಜಸ್ಟ್ ಹೀಗ್ ಮಾಡಿ- ಟಿಕೆಟ್ ಬುಕ್...

IRCTC PNR On WhatsApp: ರೈಲ್ವೇ ಪ್ರಯಾಣಿಕರೆ, ವಾಟ್ಸಪ್’ನಲ್ಲಿ ಜಸ್ಟ್ ಹೀಗ್ ಮಾಡಿ- ಟಿಕೆಟ್ ಬುಕ್ ಆಗಿದ್ಯೋ, ಇಲ್ವೋ ಎಂದು ಕೂತಲ್ಲೇ ತಿಳಿಯಿರಿ

IRCTC PNR On WhatsApp

Hindu neighbor gifts plot of land

Hindu neighbour gifts land to Muslim journalist

IRCTC PNR On WhatsApp: ಉತ್ತಮ ರೈಲು ಪ್ರಯಾಣಕ್ಕಾಗಿ ಮೊದಲೇ ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಟಿಕೆಟ್ ಬುಕ್ ಮಾಡಿದ ಕೂಡಲೇ ಬುಕ್ಕಿಂಗ್ ಕನ್ಫರ್ಮ್ ಆಗಿರುವುದಿಲ್ಲ. ಇನ್ನು ತುರ್ತು ಪರಿಸ್ಥಿತಿ ಎದುರಾಗಿ ಕಡೆ ಕ್ಷಣದಲ್ಲಿ ಟಿಕೆಟ್ ಬುಕ್ ಮಾಡುವುದಾದರೆ ಸೀಟ್ ಸಿಗುವುದು ತೀರಾ ವಿರಳ. ಹಾಗಾಗಿ, ನೀವು ನಿಮ್ಮ ಪ್ರಯಾಣಕ್ಕೂ ಮೊದಲು ಪಿ‌ಎನ್‌ಆರ್ ಸ್ಥಿತಿ ಹೇಗಿದೆ ಎಂದು ಪರಿಶೀಲಿಸಬೇಕಾಗುತ್ತದೆ. ಸದ್ಯ ಇದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಿಲ್ಲ. ಇದೀಗ ನೀವು ನಿಮ್ಮ ವಾಟ್ಸಾಪ್ ನಲ್ಲಿಯೂ ರೈಲ್ವೆ ಟಿಕೆಟ್ ಕನ್ಫರ್ಮ್ ಆಗಿದೆಯೇ? ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬಹುದು.

ಹೌದು, ನೀವು ನಿಮ್ಮ ಮೊಬೈಲ್ ಫೋನ್‌ನಲ್ಲಿ +91 9881198000 ಸಂಖ್ಯೆಯನ್ನು ಐ‌ಆರ್‌ಸಿ‌ಟಿ‌ಸಿ ಎಂದು ಸೇವ್ ಮಾಡುವ ಮೂಲಕ ಸುಲಭವಾಗಿ ವಾಟ್ಸಾಪ್ ಮೂಲಕ ಐ‌ಆರ್‌ಸಿ‌ಟಿ‌ಸಿ ಪಿ‌ಎನ್‌ಆರ್ ಸ್ಥಿತಿಯನ್ನು (IRCTC PNR On WhatsApp) ಪರಿಶೀಲಿಸಬಹುದು. ಪಿ‌ಎನ್‌ಆರ್ (ಪ್ಯಾಸೆಂಜರ್ ನೇಮ್ ರೆಕಾರ್ಡ್) ಸಂಖ್ಯೆಯು ನಿಮ್ಮ ರೈಲು ಟಿಕೆಟ್‌ನಲ್ಲಿ ಒದಗಿಸಲಾದ ಅನನ್ಯ 10-ಅಂಕಿಯ ಸಂಖ್ಯೆಯಾಗಿದೆ. ಇದು ನಿಮ್ಮ ಬುಕಿಂಗ್ ವಿವರಗಳನ್ನು ಗುರುತಿಸಲು ಮತ್ತು ಹಿಂಪಡೆಯಲು ಈ ಸಂಖ್ಯೆಯು ಸಿಸ್ಟಮ್‌ಗೆ ಸಹಾಯ ಮಾಡುತ್ತದೆ.

ವಾಟ್ಸಾಪ್ ಮೂಲಕ ಐ‌ಆರ್‌ಸಿ‌ಟಿ‌ಸಿ ಪಿ‌ಎನ್‌ಆರ್ ಸ್ಥಿತಿಯನ್ನು ಪರಿಶೀಲಿಸಲು ಈ ವಿಧಾನ ಅನುಸರಿಸಿ:
ವಾಟ್ಸಾಪ್ ಮೂಲಕ ಐ‌ಆರ್‌ಸಿ‌ಟಿ‌ಸಿ ಪಿ‌ಎನ್‌ಆರ್ ಸ್ಥಿತಿಯನ್ನು ಪರಿಶೀಲಿಸಲು ಮೊದಲಿಗೆ ನಿಮ್ಮ ವಾಟ್ಸಾಪ್ ಚಾಟ್ ವಿಂಡೋದಲ್ಲಿ ನೀವು ಈಗಾಗಲೇ ಸೇವ್ ಮಾಡಿರುವ ಸಂಪರ್ಕಗಳನ್ನು ಹುಡುಕಿ, ಅಲ್ಲಿ ಐ‌ಆರ್‌ಸಿ‌ಟಿ‌ಸಿ ಎಂದು ಟೈಪ್ ಮಾಡಿ, ಚಾಟ್ ತೆರೆಯಲು ಐ‌ಆರ್‌ಸಿ‌ಟಿ‌ಸಿ ಸಂಪರ್ಕದ ಮೇಲೆ ಟ್ಯಾಪ್ ಮಾಡಿ.
ನಂತರ ಚಾಟ್‌ನಲ್ಲಿ, ನಿಮ್ಮ ಪಿ‌ಎನ್‌ಆರ್ ಸಂಖ್ಯೆಯನ್ನು ನಮೂದಿಸಿ ಸಂದೇಶ ಕಳುಹಿಸಿ.

ನಂತರ ಐ‌ಆರ್‌ಸಿ‌ಟಿ‌ಸಿ ಚಾಟ್ ನಲ್ಲಿ ಒಮ್ಮೆ ನೀವು ನಿಮ್ಮ ಪಿ‌ಎನ್‌ಆರ್ ಸಂಖ್ಯೆಯನ್ನು ಕಳುಹಿಸಿದರೆ ಐ‌ಆರ್‌ಸಿ‌ಟಿ‌ಸಿ ವತಿಯಿಂದ ಸ್ವಯಂಚಾಲಿತ ಪ್ರತಿಕ್ರಿಯೆಯನ್ನು ಸ್ವೀಕರಿಸುತ್ತೀರಿ. ಈ ಪ್ರತಿಕ್ರಿಯೆಯು ನಿಮ್ಮ ಪ್ರಸ್ತುತ ಪಿ‌ಎನ್‌ಆರ್ ಸ್ಥಿತಿ, ರೈಲಿನ ಆಗಮನ, ನಿರ್ಗಮನದ ಸಮಯ ಸೇರಿದಂತೆ ಎಲ್ಲಾ ಪ್ರಮುಖ ಮಾಹಿತಿಗಳನ್ನು ಒಳಗೊಂಡಿರುತ್ತದೆ.

ಒಂದುವೇಳೆ ನೀವು ಹೆಚ್ಚಿನ ನವೀಕರಣಗಳನ್ನು ಪಡೆಯಲು ಬಯಸಿದಲ್ಲಿ ಇದಕ್ಕಾಗಿ ನೀವು ಐ‌ಆರ್‌ಸಿ‌ಟಿ‌ಸಿಯೊಂದಿಗೆ ಸಂವಹನವನ್ನು ಮುಂದುವರೆಸಬಹುದು. ಅಗತ್ಯವಿರುವಂತೆ ಸ್ಥಿತಿ ನವೀಕರಣಗಳನ್ನು ಕೇಳಬಹುದು. ಇದಲ್ಲದೆ, ನಿಮ್ಮ ಫೋನ್‌ನಿಂದ 139 ಅನ್ನು ಡಯಲ್ ಮಾಡುವ ಮೂಲಕ ನೀವು ರೈಲಿನ ಸ್ಥಿತಿಯನ್ನು ಸಹ ಪರಿಶೀಲಿಸಬಹುದು.

ಇದನ್ನೂ ಓದಿ : ಉದ್ಯೋಗಾಕಾಂಕ್ಷಿಗಳೇ ಇತ್ತ ಗಮನಿಸಿ- ಬೆಂಗಳೂರು ವಿಮಾನ ನಿಲ್ದಾಣದಲ್ಲಿದೆ ಭರ್ಜರಿ 12 ಸಾವಿರ ಹೊಸ ಜಾಬ್ ಆಫರ್