Home News ಮಾರುತಿಯ ಈ ಕಾರ್ ಖರೀದಿಸಿದರೆ ನಿಮಗೆ ಸಿಗುತ್ತೆ ಡಿಸ್ಕೌಂಟ್ ಮೇಲೆ ಡಿಸ್ಕೌಂಟ್!

ಮಾರುತಿಯ ಈ ಕಾರ್ ಖರೀದಿಸಿದರೆ ನಿಮಗೆ ಸಿಗುತ್ತೆ ಡಿಸ್ಕೌಂಟ್ ಮೇಲೆ ಡಿಸ್ಕೌಂಟ್!

Hindu neighbor gifts plot of land

Hindu neighbour gifts land to Muslim journalist

ನೀವು ಹೊಸ ಕಾರು ಕೊಳ್ಳುವ ಪ್ಲಾನ್’ನಲ್ಲಿದ್ದೀರಾ? ಹಾಗಾದರೆ ನಿಮಗೆ ಇದು ಸುವರ್ಣಾವಕಾಶ ಎಂದೇ ಹೇಳಬಹುದು. ಏಕೆಂದರೆ ಭಾರತದ ವಾಹನ ತಯಾರಕ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿಯು ಗ್ರಾಹಕರಿಗಾಗಿ ತನ್ನ ಕೆಲ ಕಾರುಗಳ ಮೇಲೆ ಸಖತ್ ಡಿಸ್ಕೌಂಟ್ ಆಫರ್ ಅನ್ನು ಘೋಷಿಸಿದೆ. ಭರ್ಜರಿ 50,000 ರೂ.ವರೆಗೆ ರಿಯಾಯಿತಿಯನ್ನು ನೀಡುತ್ತಿರುವ ಮಾರುತಿ ಸುಜುಕಿಯ ಈ ಆಫರ್ ಅನ್ನು ಖಂಡಿತ ಮಿಸ್ ಮಾಡ್ಲೇಬೇಡಿ. ಹಾಗಾದ್ರೆ, ಬನ್ನಿ ಈ ಡಿಸ್ಕೌಂಟ್ ಆಫರ್ ಯಾವ ಕಾರುಗಳ ಮೇಲೆ ಲಭ್ಯವಿದೆ? ಈ ಕಾರುಗಳ ವಿಶೇಷತೆ, ಲಭ್ಯತೆ ಹಾಗೂ ದರಗಳ ಕುರಿತು ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಮಾಹಿತಿ.

ಡಿಸ್ಕೌಂಟ್ ಕೊಡುಗೆಯ ಪಟ್ಟಿಯಲ್ಲಿ ಮಾರುತಿ ಸುಜುಕಿ ಕಂಪನಿಯ ಮಾರುತಿ ಸುಜುಕಿ ಇಗ್ನಿಸ್, ಮಾರುತಿ ಸುಜುಕಿ ಸಿಯಾಜ್ ಮತ್ತು ಮಾರುತಿ ಸುಜುಕಿ ಬಲೆನೊ ಮೇಲೆ 50,000 ರೂ.ವರೆಗೆ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಎಲ್ಲಾ ಮೂರು ಕಾರುಗಳನ್ನು ನೆಕ್ಸಾ ಡೀಲರ್‌ಶಿಪ್‌ಗಳಿಂದ ಮಾರಾಟ ಮಾಡಲಾಗಿದೆ. ಈ ರಿಯಾಯಿತಿಯು ನಗದು ರಿಯಾಯಿತಿ, ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಗಳನ್ನು ಒಳಗೊಂಡಿದೆ. ಈ ಆಕರ್ಷಕ ಡಿಸ್ಕೌಂಟ್ ಫೆಬ್ರವರಿ ತಿಂಗಳಿನಲ್ಲಿ ಅಂತ್ಯವಾಗಲಿದೆ.

ಮಾರುತಿ ಸುಜುಕಿ ಇಗ್ನಿಸ್:- ಫೆಬ್ರವರಿ 2023 ರಲ್ಲಿ ಮಾರುತಿ ಸುಜುಕಿ ಇಗ್ನಿಸ್‌ ಕಾರಿನ ಮೇಲೆ ಭರ್ಜರಿ ರಿಯಾಯಿತಿ ನೀಡಲಾಗುತ್ತಿದೆ.
ಮಾರುತಿಯ ನೆಕ್ಸಾ ಪ್ರವೇಶ ಹಂತದ ಕೊಡುಗೆಯ ಮೇಲೆ 25,000 ರೂಪಾಯಿಗಳ ನಗದು ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದಲ್ಲದೆ, ಇದರಲ್ಲಿ 25,000 ರೂ. (ಮ್ಯಾನುವಲ್ ಗೇರ್ ಬಾಕ್ಸ್ ಮಾದರಿ) ಹೆಚ್ಚುವರಿ ವಿನಿಮಯ ಬೋನಸ್ ಕೂಡ ಲಭ್ಯವಾಗಲಿದೆ. ಮಾರುತಿ ಸುಜುಕಿ ಇಗ್ನಿಸ್‌ನ ಸ್ವಯಂಚಾಲಿತ ಮಾದರಿಯ ಮೇಲೆ 19,000 ರೂಪಾಯಿಗಳ ರಿಯಾಯಿತಿ ಹಾಗೂ 4,000 ರೂಪಾಯಿಗಳ ಕಾರ್ಪೊರೇಟ್ ಬೋನಸ್ ಅನ್ನು ಪಡೆಯಬಹುದು. 5ಈ ಕೊಡುಗೆಯು 2022 ಮತ್ತು 2023 ಎರಡೂ ಮಾಡೆಲ್ ಕಾರುಗಳಿಗೆ ಅನ್ವಯಿಸುತ್ತದೆ.

ಮಾರುತಿ ಸುಜುಕಿ ಸಿಯಾಜ್:- ಮಾರುತಿ ಸುಜುಕಿಯ ಮಧ್ಯಮ ಗಾತ್ರದ ಸೆಡಾನ್ ಸಿಯಾಜ್ ಒಟ್ಟು 40,000 ರೂಪಾಯಿಗಳ ಡಿಸ್ಕೌಂಟ್ ಕೊಡುಗೆಯನ್ನು ನೀಡಿದೆ. 2022ರ ಮಾದರಿಯಲ್ಲಿ ಗ್ರಾಹಕರು 10,000 ರೂ. ನಗದು ರಿಯಾಯಿತಿ, 25,000 ರೂ. ವಿನಿಮಯ ಬೋನಸ್ ಮತ್ತು 5,000 ರೂ.ಗಳವರೆಗೆ ಕಾರ್ಪೊರೇಟ್ ರಿಯಾಯಿತಿಯನ್ನು ಪಡೆಯಬಹುದು. ಮಾರುತಿ ಸುಜುಕಿ ಸಿಯಾಜ್ 2023 ರ ಮಾದರಿಯಲ್ಲಿ, 25,000 ರೂಪಾಯಿಗಳ ವಿನಿಮಯ ಬೋನಸ್ ಮತ್ತು 5,000 ರೂಪಾಯಿಗಳ ಕಾರ್ಪೊರೇಟ್ ರಿಯಾಯಿತಿಯನ್ನು ಒಳಗೊಂಡಿದ್ದು, ಒಟ್ಟು 30,000 ರೂ ಗಳ ಕೊಡುಗೆಯಿದೆ.

ಮಾರುತಿ ಸುಜುಕಿ ಬಲೆನೋ: ಮಾರುತಿ ಸುಜುಕಿ ಬಲೆನೋ ಕಾರಿನ ಮ್ಯಾನುಯಲ್ ಆವೃತ್ತಿ (2022 ಮತ್ತು 2023 ಮಾದರಿಗಳು) 15,000 ರೂಪಾಯಿಗಳ ನಗದು ರಿಯಾಯಿತಿಯಲ್ಲಿ ಖರೀದಿಸಬಹುದು. ಆದರೆ, ಮಾರುತಿ ಸುಜುಕಿ ಬಲೆನೋ ಅಟೋಮ್ಯಾಟಿಕ್ ಕಾರಿನ ಮೇಲೆ ಯಾವುದೇ ಡಿಸ್ಕೌಂಟ್ ಲಭ್ಯವಾಗುತ್ತಿಲ್ಲ.