ಮಂಗಳೂರು: ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ, ದೂರು ದಾಖಲು

ಮಂಗಳೂರು: ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆಯಾದ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಟಿಪಳ್ಳ ಗ್ರಾಮದ ಗಣೇಶ ಪುರದಲ್ಲಿ ವಾಸವಿದ್ದ ಭಾರತಿ ಮಾದರ (35) ಮಕ್ಕಳಾದ ಅಮೃತ (11) ಮತ್ತು ಗಣೇಶ್ (9) ಅವರೊಂದಿಗೆ ಮಾ.21ರ ರಾತ್ರಿ ಮನೆಯಿಂದ ತೆರಳಿದವರು ಇದೂವರೆಗೆ ವಾಪಸ್ ಬಂದಿಲ್ಲ. ಈ ತಾಯಿ ಮಕ್ಕಳು ಪತ್ತೆಯಾದಲ್ಲಿ ಸುರತ್ಕಲ್ ಪೊಲೀಸ್ ಠಾಣಾ ದೂ.ಸಂಖ್ಯೆ: 0824-2220540, ಮೊ.ಸಂಖ್ಯೆ:- 9480805360, 9480802345, ಕಂಟ್ರೋಲ್ ರೂಂ: 0824-2220800 ಮೂಲಕ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.