ಗ್ಲಾಮರಸ್ ಲೋಕದಲ್ಲಿ ಸಾವಿನ ಸರಮಾಲೆ | ಗೆಳತಿ ಸಾವಿನಿಂದ ಖಿನ್ನತೆಗೆ ಒಳಗಾಗಿ ಮತ್ತೊಬ್ಬ ಉದಯೋನ್ಮುಖ ಮಾಡೆಲ್ ನೇಣಿಗೆ ಶರಣು |
ಗ್ಲಾಮರಸ್ ಲೋಕದಲ್ಲಿ ಇತ್ತೀಚೆಗೆ ಏನಾಗುತ್ತಿದೆ ಎಂಬ ಊಹೆ ಕೂಡಾ ಮಾಡುವುದು ಕಷ್ಟವಾಗುತ್ತಿದೆ. ಸಾಲು ಸಾಲು ಮಾಡೆಲ್ ಗಳ ಆತ್ಮಹತ್ಯೆ ಪ್ರಕರಣ ನಡೆಯುತ್ತಿದೆ. ಕೆಲ ದಿನಗಳ ಹಿಂದಷ್ಟೇ ಬಂಗಾಳಿ ಯುವನಟಿ ಪಲ್ಲವಿ ದೇ ಮೃತದೇಹ ಕೋಲ್ಕತದ ಗರ್ಫಾದಲ್ಲಿರುವ ಆಕೆಯ ಫ್ಲ್ಯಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ನಟಿ, ರೂಪದರ್ಶಿ ಬಿದಿಶಾ ಡಿ. ಮಂಜುದಾರ್ ಶವ ಅವರ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿದೆ. ಅದರ ಬೆನ್ನಲ್ಲಿ ಇನ್ನೋರ್ವ ಮಾಡೆಲ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲೇ ಪತ್ತೆಯಾಗಿರುವುದು …