ಬಿಸಿಲಿನಲ್ಲಿ ಪಾಠ ಕೇಳುವ ಮಣಿಕ್ಕರ ಶಾಲಾ ಮಕ್ಕಳು : ಹೊಸ ಕೊಠಡಿ ನಿರ್ಮಿಸಲು ಮುಂದಾದ ಸದಾನಂದ ಗೌಡರ ‘ಸದಾಸ್ಮಿತ ಪ್ರತಿಷ್ಠಾನ
ಪುತ್ತೂರು: ಮಣಿಕ್ಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ನಾದುರಸ್ತಿಯಲ್ಲಿರುವ ಹಿನ್ನೆಲೆಯಲ್ಲಿ ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಪೋಷಿತ ‘ಸದಾಸ್ಥಿತ’ ಪ್ರತಿಷ್ಠಾನ ಹೊಸ ಕೊಠಡಿ ನಿರ್ಮಿಸಲು ಮುಂದಾಗಿದೆ. ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರು ಮಣಿಕ್ಕರ ಶಾಲೆಯ ದುಸ್ಥಿತಿ ಬಗ್ಗೆ ಮಾಹಿತಿ ಪಡೆದು ಕೇಂದ್ರದ ಮಾಜಿ ಸಚಿವರಾದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರವರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಸುಮಾರು 4ರಿಂದ 5 ಲಕ್ಷ ರೂ ವೆಚ್ಚದ ಕೊಠಡಿಯನ್ನು ಸದಾಸ್ಮಿತ ಪ್ರತಿಷ್ಠಾನದ ಮೂಲಕ ನಿರ್ಮಿಸಲು …