ದೇಶದೆಲ್ಲೆಡೆ ಭಾರೀ ವಿರೋಧ ವ್ಯಕ್ತವಾಗಿದ್ದ “ಅಗ್ನಿಪಥ್” ಗೆ ಮೂರೇ ದಿನದಲ್ಲಿ ಹರಿದುಬಂದ ಅರ್ಜಿಗಳು ಎಷ್ಟು ಗೊತ್ತಾ ?!!
ನವದೆಹಲಿ: ದೇಶದಲ್ಲಿ ಹೊಸದಾಗಿ ಜಾರಿಗೊಳಿಸಲಾಗಿರುವ ಅಗ್ನಿಪಥ್ ಯೋಜನೆಗೆ, ದೇಶಾದ್ಯಂತ ಭಾರೀ ವಿರೋಧಕ್ತವಾದ ಮೂರೇ ದಿನದಲ್ಲಿ ನಿರೀಕ್ಷೆಗೂ ಮೀರಿ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಭಾನುವಾರ ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಸೇನೆಗೆ ನಾಲ್ಕು ವರ್ಷದ ಅವಧಿಗೆ ಅಗ್ನಿವೀರರನ್ನು ನೇಮಕಾತಿ ಮಾಡುವುದನ್ನು ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇದೇ ಸಂದರ್ಭದಲ್ಲಿ ನೇಮಕಾತಿ ನೋಂದಣಿ ಆರಂಭವಾಗಿದ್ದು, ಅಗ್ನಿವೀರರ ನೇಮಕಾತಿಗೆ ಯುವಕರಿಂದ ಭಾರಿ ಸ್ಪಂದನೆ ದೊರಕಿದೆ. ಮೂರು ಸಾವಿರ ಹುದ್ದೆಗಳಿಗೆ ಮೂರೇ ದಿನದಲ್ಲಿ 569600 ಅರ್ಜಿ ಸಲ್ಲಿಕೆಯಾಗಿವೆ. ಜುಲೈ 5ರವರೆಗೆ ಅರ್ಜಿ ಸಲ್ಲಿಕೆಗೆ …