ಪುತ್ತೂರು: ಚರಣ್ ರಾಜ್ ಹತ್ಯೆ ಪ್ರಕರಣ : ಪ್ರಮುಖ ಆರೋಪಿ ಕಿಶೋರ್, ರಾಕೇಶ್ ಪಂಚೋಡಿ,ರೇಮಂತ್ ಬಂಧನ

ಮಂಗಳೂರು : ಹಿಂ.ಜಾ.ವೇಪುತ್ತೂರು ತಾಲೂಕು ಕಾರ್ಯದರ್ಶಿ, ಸಂಪ್ಯ ಮೇರ್ಲ ನಿವಾಸಿ ಕಾರ್ತಿಕ್ ಸುವರ್ಣ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಂಪ್ಯ ನಿವಾಸಿ ಚರಣ್ ರಾಜ್ ರೈ(29ವ)ಅವರನ್ನು ಪೆರ್ಲಂಪಾಡಿಯ ರಸ್ತೆ ಬದಿಯಲ್ಲಿ ಕೊಚ್ಚಿ ಕೊಲೆ ಮಾಡಿದ ಘಟನೆಯಲ್ಲಿ ಪ್ರಮುಖ ಆರೋಪಿಯಾಗಿರುವ ರೌಡಿಶೀಟರ್ ಕಿಶೋರ್ ಪೂಜಾರಿ ಜತೆ ಈಶ್ವರ ಮಂಗಲದ ರಾಕೇಶ್ ಪಂಚೋಡಿ ಮತ್ತು ಬಲ್ನಾಡಿನ ರೆಮಂತ್ ಎಂಬವರನ್ನೂ ಪೊಲೀಸರು ಬಂದಿಸಿದ್ದಾರೆ.