

Food Menu : ಆಕರ್ಷಕ ಜಗತ್ತಿನಲ್ಲಿ ಗ್ರಾಹಕರನ್ನು ಸೆಳೆಯಲು ಹೋಟೆಲ್(Hotel) ಗಳು ವಿವಿಧ ನಮೂನೆಯ ಮಾರ್ಗಗಳನ್ನು ಅನುಸರಿಸುತ್ತಿವೆ. ಡಿಫ್ರೆಂಟ್(Different) ಆಗಿ, ಟೇಸ್ಟೀ(Tasty)ಆಗಿ ಫುಡ್ ಗಳನ್ನು ಮಾಡಿ ಹೆಚ್ಚು ಜನರು ಬರುವಂತೆ ಮಾಡುತ್ತಿವೆ. ಅದರಲ್ಲೂ ಕೂಡ ಅವರ ಮೆನುವನ್ನು (Food menu), ಅದರಲ್ಲಿರೋ ಖಾದ್ಯಗಳ ತರೆಹೆವಾರಿ ಹೆಸರನ್ನು ನೋಡಿದ್ರೆ ಎಲ್ಲವನ್ನೂ ತಿನ್ನಬೇಕು ಅನಿಸುತ್ತೆ. ಕೆಲವೊಮ್ಮೆ ಆ ಭಕ್ಷಗಳ ಹೆಸರು ನಮ್ಮನ್ನೇ ಕನ್ಫ್ಯೂಜ್ ಕೂಡ ಮಾಡಿ ಬಿಡುತ್ತವೆ. ಅಂತೆಯೇ ಇದೀಗ ರೆಸ್ಟೋರೆಂಟ್ ಒಂದರಲ್ಲಿನ, ಕನ್ಫ್ಯೂಜ್ ಆಹಾರದ ಹೆಸರುಗಳು ಇಂಟರ್ನೆಟ್ ನಲ್ಲಿ ವೈರಲ್ ಆಗಿ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಹೌದು, ಕೆಲವೊಮ್ಮೆ ಹೋಟೆಲ್ ಹೋದಾಗ ಅಲ್ಲಿನ ಮೆನುಗಳಲ್ಲಿರುವ ಫುಡ್ ಹೆಸರುಗಳನ್ನು ನೋಡಿದ್ರೆ ತಲೆನೇ ಕೆಟ್ಟೋಗುತ್ತೆ. ನಮಗೆ ಪರಿಚಯ ಇರುವ ಫುಡ್ ಅನ್ನು ಸಹ, ಮೆನುವಲ್ಲಿರುವ ಹೆಸರುಗಳು ಪರಿಚಯವಿಲ್ಲದಂತೆ ಮಾಡುತ್ತವೆ. ಜನರ ಆಕರ್ಷಣೆಗೆ ಹೋಟೆಲ್ ಗಳು ಮಾಡುವ ಕಸರತ್ತು ಇವು. ಕೆಲವರಿಗೆ ಚೌಚೌ ಬಾತ್(Chow Chow Bhat) ಅಂದ್ರೆ ಏನು ಅನ್ನೋದೇ ಗೊತ್ತಿರೋದಿಲ್ಲ. ಆರ್ಡರ್ ಮಾಡಿ ಪ್ಲೇಟ್ ಬಂದಾಗ, ಓ ಇದಾ ಅಂತಾ ಮುಖ ಸಣ್ಣಗೆ ಮಾಡ್ತಾರೆ. ಇದೇ ಕಾರಣಕ್ಕೆ ಹೋಟೆಲ್ ನಲ್ಲಿ ಮೆನು (Menu) ವನ್ನು ಆಕರ್ಷವಾಗಿ ಮಾಡಲಾಗುತ್ತದೆ. ಜನರಿಗೆ ತಿಳಿಯದ ಹೆಸರಿಟ್ಟು ಜನರ ಗಮನ ಸೆಳೆಯಲಾಗುತ್ತದೆ. ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಮೆನು ಕೂಡ ಇಂತದ್ದೇ!
Officialtis ಎಂಬ ಹೆಸರಿನ ಇನ್ಸ್ಟಾಗ್ರಾಮ್(Instagram) ಖಾತೆಯಲ್ಲಿ ರೆಸ್ಟೋರೆಂಟ್ ನ ಹೆಸರು ಹೇಳದೆ, ಅಲ್ಲಿನ ಮೆನುವನ್ನು ಹಂಚಿಕೊಳ್ಳಲಾಗಿದೆ. ಅದಕ್ಕೆ ಪರ್ಫೆಕ್ಟ್ ಮೆನು ಅವಶ್ಯಕವಲ್ಲ ಎಂಬ ಶೀರ್ಷಿಕೆಯನ್ನೂ ಹಾಕಲಾಗಿದೆ. ಈ ಮೆನುವಿನಲ್ಲಿ ‘Mps ಕಿಚನ್ ಸ್ಪೆಷಲ್’ ಎಂಬ ವಿಶೇಷ ವಿಭಾಗವನ್ನು ತೋರಿಸಲಾಗಿದೆ. ಇದ್ರಲ್ಲಿರುವ ಆಹಾರದ ಹೆಸರು ಓದಿ ನೆಟ್ಟಿಗರು ದಿಗ್ಭ್ರಮೆಗೊಂಡಿದ್ದಾರೆ.
ಅಷ್ಟಕ್ಕೂ ಆ ಮೆನುವಿನಲ್ಲಿ ಏನಿದೆ ಅಂತಾ ನೀವು ಕೇಳ್ಬಹುದು. ಮೆನುವಿನಲ್ಲಿ ‘ಕುಚ್ ನಹಿ’ ಎಂಬ ಹೆಸರಿನ ಆಹಾರವಿದ್ದು ಅದ್ರ ಬೆಲೆ 220 ರೂಪಾಯಿಯಂತೆ. ಇನ್ನು ‘ಕುಚ್ ಬಿ’ ಅಂತಾ ಇನ್ನೊಂದು ಹೆಸರಿದೆ. ಆ ಖಾದ್ಯಕ್ಕೆ 240 ರೂ, ‘ಎಸ್ ಯು ವಿಶ್’ ಹೆಸರಿನ ಖಾದ್ಯದ ಬೆಲೆ 260 ರೂ. ‘ನಹಿ ತುಂಬ್ ಬೋಲೋ’ ಹೆಸರಿನ ಆಹಾರ ಕೂಡ ಇದೆ. ಅದರ ಬೆಲೆ 280 ರೂ. ಇನ್ನೊಂದು ಖಾದ್ಯದ ಹೆಸರು, ನಹಿ ನಹಿ ತುಮ್ ಬೋಲೋ ಅಂತಾ. ಅದ್ರೆ ಬೆಲೆ 300 ರೂಪಾಯಿ ಅಂತಾ ಮೆನುವಿನಲ್ಲಿ ಹೇಳಲಾಗಿದೆ. ಮೆನುವಿನ ಕೆಳಗೆ, ನಿಮ್ಮ ಆಹಾರವು ಬ್ಯಾಂಕ್ ಖಾತೆಯಾಗಿದೆ, ಉತ್ತಮ ಆಹಾರದ ಆಯ್ಕೆಗಳು ಉತ್ತಮ ಹೂಡಿಕೆಗಳಾಗಿವೆ ಎಂದು ಬರೆಯಲಾಗಿದೆ.
ಅಂತೆಯೇ ಈ ಪೋಸ್ಟ್ ಗೆ ಬಗೆ ಬಗೆಯಾಗಿ ಕಮೆಂಟ್ಗಳು ಬಂದಿದ್ದು, ಇದರ ಮೂಲಕ ಆ ರೆಸ್ಟೋರೆಂಟ್ ಯಾವ್ದು ಅನ್ನೋದು ಗೊತ್ತಾಗಿದೆ. ಇದು ನಮ್ಮ ರಾಯಪುರ ಎಂಪಿ(Rayapura MP Dhaba) ಢಾಬಾ ಎಂದು ಬಳಕೆದಾರನೊಬ್ಬ ಬರೆದಿದ್ದು ಎಲ್ಲರ ಕುತೂಹಲ ತಣಿಸಿದೆ. ಇನ್ಸ್ಟಾಗ್ರಾಮ್ ಬಳಕೆದಾರರು ಈ ವಿಡಿಯೋಕ್ಕೆ ಭರ್ಜರಿ ಕಮೆಂಟ್ ನೀಡಿದ್ದಾರೆ. ಕಮೆಂಟ್ ಸೆಕ್ಷನ್ ನಲ್ಲಿ ಎಮೋಜಿಗಳು ತುಂಬಿವೆ. ಇನ್ನೂ ಕೆಲವರು ಈ ರೆಸ್ಟೋರೆಂಟ್ ಯಾವುದೆಂದು ಪತ್ತೆ ಮಾಡೋ ಪ್ರಯತ್ನದಲ್ಲಿದ್ದಾರೆ.
https://www.instagram.com/reel/CpDWEpsIMib/?igshid=YmMyMTA2M2Y=













