Home Breaking Entertainment News Kannada Urfi Javed : ‘ಉರ್ಫಿ ಮುಸ್ಲಿಮರು ರಂಜಾನ್ ಉಪವಾಸದಲ್ಲಿದ್ದಾರೆ, ಅತ್ತ ಸ್ವಲ್ಪ ಗಮನವಿರಲಿ’ ಎಂದ ನೆಟ್ಟಿಗರು....

Urfi Javed : ‘ಉರ್ಫಿ ಮುಸ್ಲಿಮರು ರಂಜಾನ್ ಉಪವಾಸದಲ್ಲಿದ್ದಾರೆ, ಅತ್ತ ಸ್ವಲ್ಪ ಗಮನವಿರಲಿ’ ಎಂದ ನೆಟ್ಟಿಗರು. ಹೀಗಂದಿದ್ಯಾಕೆ?

Urfi Javed

Hindu neighbor gifts plot of land

Hindu neighbour gifts land to Muslim journalist

Urfi Javed :ಸದಾ ತಾನು ಧರಿಸೋ ಬಟ್ಟೆ ವಿಚಾರವಾಗಿಯೇ ಸುದ್ದಿಯಾಗಿ, ಆಗಾಗ ಟ್ರೋಲ್ ಗೆ ಒಳಗಾಗೋ ಹಿಂದಿ ಕಿರುತೆರೆ ನಟಿ ಉರ್ಫಿ ಜಾವೇದ್(Urfi Javed) ಇದೀಗ ಮತ್ತೊಂದು ವಿಚಾರದಲ್ಲಿ ಟ್ರೋಲ್ ಆಗ್ತಿದ್ದಾರೆ. ದೇಶಾದ್ಯಂತ ಮುಸ್ಲಿಮರು ಪವಿತ್ರ ರಂಜಾನ್ ಆಚರಣೆ ಮಾಡುತ್ತಿದ್ದಾರೆ. ವಿಶೇಷ ಮಾಸದಲ್ಲಿ ಉಪವಾಸ ಕೈಗೊಂಡಿದ್ದಾರೆ. ಆದರೆ ನಟಿ ಉರ್ಫಿ ಜಾವೇದ್ ರಂಜಾನ್(Ramzan) ಮಾಸ ಆಚರಣೆ ಮಾಡಲ್ವಾ? ಎಂದು ನೆಟ್ಟಿಗರು ಆಕೆಯ ಕಾಲೆಳೆದಿದ್ದಾರೆ.

ಹೌದು, ರಂಜಾನ್ ಮಾಸವಾದ ಕಾರಣ ನೆಟ್ಟಿಗರು ಉರ್ಫಿಯನ್ನು ಎಚ್ಚರಿಸಿದ್ದಾರೆ. ದೇಶಾದ್ಯಂತ ಮುಸ್ಲಿಂ ಜನರು ಪವಿತ್ರ ರಂಜಾನ್ ಮಾಸವನ್ನು ಆಚರಿಸುತ್ತಿದ್ದಾರೆ. ಉಪವಾಸವನ್ನು ಪಾಲಿಸುತ್ತಿದ್ದಾರೆ. ಆದರೆ ಮುಸಲ್ಮಾನಳಾದ ಉರ್ಫಿ ಜಾವೇದ್ ಮಾತ್ರ ಫ್ಯಾಷನೆಬಲ್ ಆಗಿ ಡ್ರೆಸ್ ಮಾಡಿ ಕ್ಯಾಮೆರಾಗೆ ಪೋಸ್ ಕೊಡುತ್ತಿದ್ದಾರೆ. ಈ ಬಗ್ಗೆ ನಟಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು, ಟ್ರೋಲಿಗರ ಬಾಣಕ್ಕೆ ಗುರೆಯಾಗಿದ್ದಾರೆ.

ಉರ್ಫಿ ನೀವು ಮುಸ್ಲಿಂ ಅಲ್ವೇ? ಇದು ರಂಜಾನ್ ಮಾಸ. ನೀವು ಉಪವಾಸ ಮಾಡದೆ ಈ ರೀತಿ ಫ್ಯಾಷನ್ ಮಾಡುತ್ತಾ ಕ್ಯಾಮೆರಾಗೆ ಪೋಸ್ ಕೊಡುತ್ತಿದ್ದೀರಲ್ಲ. ಇಸ್ಲಾಂಗೆ ಮತಾಂತರಗೊಂಡಿರುವ ನಟಿ ರಾಖಿ ಸಾವಂತ್ ಕೂಡಾ ಈ ಬಾರಿ ಉಪವಾಸ ಮಾಡಿದ್ದಾರೆ. ಆ ಕುರಿತು ಅಪ್ಡೇಟ್​ಗಳನ್ನು ಕೂಡಾ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡುತ್ತಲೇ ಇದ್ದಾರೆ. ಆದರೆ ಉರ್ಫಿ ಜಾವೇದ್ ಉಪವಾಸ ಮಾಡ್ತಿಲ್ವ ಎಂದು ನೆಟ್ಟಿಗರು ಪ್ರಶ್ನೆಗಳನ್ನು ಹರೆಬಿಟ್ಟಿದ್ದಾರೆ.

ಅಂದಹಾಗೆ ನಟಿ ಉರ್ಫಿ ಜಾವೇದ್ ಮುಸ್ಲಿಂ ಕುಟುಂಬದ ಹುಡುಗಿ. ಈ ಹಿಂದೆ ತಮ್ಮ ಔಟ್​ಫಿಟ್​ಗಾಗಿ ಬಹಳಷ್ಟು ಸಲ ಎಚ್ಚರಿಕೆ ಬಂದರೂ ಅದನ್ನು ಹಾಗೆಯೇ ಕಂಟಿನ್ಯೂ ಮಾಡಿದ್ದಾರೆ. ಅಂತೆಯೆ ಈಗಲೂ ಆದ ಟ್ರೋಲ್ ಬಗ್ಗೆಯಾಗಲಿ, ಪ್ರಶ್ನೆಗಳಬಗ್ಗೆಯಾಗಲಿ ಉರ್ಫಿ ತಲೆ ಕೆಡಿಸಿಕೊಂಡಿಲ್ಲ. ಇತ್ತೀಚಿನ ದಿನಗಳಲ್ಲಿ ಉರ್ಫಿ ಜಾವೇದ್ ಅವರು ಬಾಲಿವುಡ್ ಸೆಲೆಬ್ರಿಟಿಗಳ ಇವೆಂಟ್​ಗಳಲ್ಲಿಯೂ ಕಂಡು ಬರುತ್ತಿದ್ದಾರೆ.

ಹಿಂದಿ ಕಿರುತೆರೆಯ ಈ ನಟಿ ಕೆಲವೇ ಕೆಲವು ಸೀರಿಯಲ್ ಮಾಡಿದರೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಮಾಡರ್ನ್ ಡ್ರೆಸ್ ಧರಿಸಿ, ಚಿತ್ರ ವಿಚಿತ್ರ ಅವತಾರಗಳಲ್ಲಿ ಕಾಣಿಸಿಕೊಳ್ಳುವ ಉರ್ಫಿ ಜಾವೇದ್ ಇಂದು ಇನ್​ಸ್ಟಾಗ್ರಾಮ್​ನಲ್ಲಿ ತುಂಬಾ ಫೇಮಸ್. ಹೊಸ ವಿಡಿಯೋ ಹಾಗೂ ಫೋಟೋಸ್ ಶೇರ್ ಮಾಡುತ್ತಲೇ ಇರುತ್ತಾರೆ. ಉರ್ಫಿ ಜಾವೇದ್ ಅವರು ಕೆಲವೊಂದು ಮ್ಯೂಸಿಕ್ ಆಲ್ಬಂಗಳಲ್ಲಿಯೂ ನಟಿಸಿದ್ದಾರೆ. ಉರ್ಫಿ ಸದ್ಯ 4.1 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಈವರೆಗೆ ಸುಮಾರು 239 ಪೋಸ್ಟ್​ಗಳನ್ನು ಹಾಕಿದ್ದಾರೆ.

ಅಲ್ಲದೆ ಬಿಗ್​ಬಾಸ್ ಒಟಿಟಿಗೆ ಎಂಟ್ರಿ ಕೊಟ್ಟ ನಂತರ ಒಂದೇ ವಾರದಲ್ಲಿ ಉರ್ಫಿ ಜಾವೇದ್ ಅಲ್ಲಿಂದ ಹೊರ ಬರಬೇಕಾಯಿತು. ಎಲಿಮಿನೇಟ್ ಆಗಿ ಹೊರಬಂದಾಗಲೇ ಉರ್ಫಿಯವರನ್ನು ಎಲ್ಲರೂ ಗುರುತಿಸಿದ್ದರು.