Home latest ಫುಲ್‌ಟೈಟ್‌ ಆದ ಕುಡುಕನೋರ್ವ ಮೊಸಳೆ ಮುಂದೆ ಹೋಗಿ ನಿಂತಾಗ…. ಮುಂದೇನಾಯ್ತು?

ಫುಲ್‌ಟೈಟ್‌ ಆದ ಕುಡುಕನೋರ್ವ ಮೊಸಳೆ ಮುಂದೆ ಹೋಗಿ ನಿಂತಾಗ…. ಮುಂದೇನಾಯ್ತು?

Hindu neighbor gifts plot of land

Hindu neighbour gifts land to Muslim journalist

Drunkard Viral Video : ಕೆಲವೊಮ್ಮೆ ಅನಿವಾರ್ಯ ವಾಗಿ ಕೆಲವು ಕೆಲಸ ಮಾಡುವಾಗ ಭಂಡ ಧೈರ್ಯ ತೋರಿಸಬೇಕಾಗುತ್ತದೆ. ಆದರೆ ಅನಾವಶ್ಯಕವಾಗಿ ಭಂಡ ಧೈರ್ಯ ತೋರಿಸುವುವಾಗ ಗುಂಡಿಗೆ ಗಟ್ಟಿಯಾಗಿರಬೇಕು. ಅಂತೆಯೇ ಇಲ್ಲೊಬ್ಬನ ಪೋಸ್ ನೋಡಿದರೆ ನೀವು ಶಾಕ್ ಆಗೋದು ಖಂಡಿತಾ.

ಸದ್ಯ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಕೊಳದಲ್ಲಿ ಇರುವ ಮೊಸಳೆಗಳ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬರುತ್ತದೆ. ಆ ಕೊಳದ ದಡದಲ್ಲಿ ಮೊಸಳೆಗಳು ಮಲಗಿರುವುದು ಕೂಡ ಕಾಣಿಸುತ್ತಿದೆ. ಆತನ ಕಣ್ಣುಗಳಲ್ಲಿ ಸ್ವಲ್ಪವೂ ಭಯ ಕಾಣಿಸುತ್ತಿಲ್ಲ. ಅದರ ಬದಲಿಗೆ ಮೊಸಳೆಗಳು ಅವನನ್ನು ನೋಡಿದ ತಕ್ಷಣ, ಅವನ ಮೇಲೆ ದಾಳಿ ಮಾಡುವ ಬದಲು, ತಾವೇ ಹೆದರಿ ಅವಸರದಲ್ಲಿ ನೀರಿಗೆ ಹಾರುವುದು ಕೂಡ ಕಾಣಿಸುತ್ತದೆ.

ಆದರೆ ಫುಲ್ ಟೈಟ್ ಆಗಿರುವ ಆತನಿಗೆ ನಡೆಯೋದಕ್ಕೂ ಆಗುತ್ತಿಲ್ಲ ಎಂಬುದು ವಿಡಿಯೋದಲ್ಲಿ ತಿಳಿಯುತ್ತದೆ. ಸಾಮಾನ್ಯವಾಗಿ ಮೊಸಳೆಗಳು ಮನುಷ್ಯರನ್ನು ಕಂಡಾಕ್ಷಣ ದಾಳಿ ನಡೆಸುತ್ತವೆ. ಆದರೆ ಇಲ್ಲಿ ಮಾತ್ರ ಮೊಸಳೆಗಳು ಅವನನ್ನು ನೋಡಿ ಭಯದಿಂದ ನೀರಿಗೆ ಹಾರುತ್ತವೆ.

ಈ ವೀಡಿಯೊವನ್ನು(Drunkard Viral Video) ಟ್ವಿಟರ್ (Twitter ) ಬಳಕೆದಾರ ಅಂಕಿತ್ ಯಾದವ್ ಬೋಜಾ (@Ankitydv92) ಮಾರ್ಚ್ 8 ರಂದು ಪೋಸ್ಟ್ ಮಾಡಿದ್ದು, “ಹಳ್ಳಿಗಾಡಿನ ಮದ್ಯದ ಶಕ್ತಿ” ಎಂದು ಪೋಸ್ಟ್ ಹಾಕಿದ್ದಾರೆ. ಅನೇಕ ಬಳಕೆದಾರರು ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಕೇವಲ 29 ಸೆಕೆಂಡುಗಳು ಈ ವಿಡಿಯೋ ಎಂಥವರನ್ನೂ ಸಹ ಭಯಗೊಳಿಸುತ್ತದೆ. ಇನ್ನು ಈ ವಿಡಿಯೋ ನೋಡಿದ ಜನರು ‘ಪವರ್ ಆಫ್ ದೇಸಿ ದಾರು’ ಎಂದು ಪ್ರಶ್ನಿಸುತ್ತಿದ್ದಾರೆ.