Home Interesting ATM Biriyani: ಅಂದು ಬೆಂಗ್ಳೂರಲ್ಲಿ ಸಿಗ್ತಿತ್ತು ಎಟಿಎಂ ಇಡ್ಲಿ, ಇಂದು ಚೆನ್ನೈನಲ್ಲಿ ಸಿಗುತ್ತೆ ಎಟಿಎಂ ಬಿರಿಯಾನಿ!...

ATM Biriyani: ಅಂದು ಬೆಂಗ್ಳೂರಲ್ಲಿ ಸಿಗ್ತಿತ್ತು ಎಟಿಎಂ ಇಡ್ಲಿ, ಇಂದು ಚೆನ್ನೈನಲ್ಲಿ ಸಿಗುತ್ತೆ ಎಟಿಎಂ ಬಿರಿಯಾನಿ! ಹೇಗಿದೆ ಗೊತ್ತಾ ಈ ರೆಡಿಮೇಡ್ ಬಿರಿಯಾನಿ?

ATM Biriyani

Hindu neighbor gifts plot of land

Hindu neighbour gifts land to Muslim journalist

ATM Biriyani :ಅಯ್ಯೋ ತಡರಾತ್ರಿ ಆಯ್ತು ಬಿರಿಯಾನಿ(Biryani) ತಿನ್ಬೇಕು ಅನ್ನಿಸುತ್ತಿದೆ. ಹೋಟೆಲ್(Hotel), ಡಾಬಾ(Daba)ಗಳೆಲ್ಲಾ ಬಾಗಿಲು ಹಾಕಿರುತ್ತವೆ. ಏನ್ಮಾಡೋದು ಎಂದು ಇನ್ಮುಂದೆ ಬೇಜಾರಾಗಬೇಕಿಲ್ಲ. ಯಾಕೆಂದರೆ ಬಿರಿಯಾನಿ ಪ್ರಿಯರು ದಿನದ 24 ಗಂಟೆಯೂ ಬಿರಿಯಾನಿಯನ್ನು ನಿಮ್ಮದಾಸಿಕೊಳ್ಳಲು ಬಿರಿಯಾನಿ ಎಟಿಎಂ(ATM) ಒಂದು ತಮಿಳುನಾಡಿನ ಚೆನ್ನೈನಲ್ಲಿ ತಲೆ ಎತ್ತಿದೆ. ಈ ಎಟಿಎಂ ಬಿರಿಯಾನಿಯನ್ನು ತೋರಿಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರ ಗಮನ ಸೆಳೆದಿದೆ.

ಹೌದು, ಕಳೆದ ವರ್ಷ ಬೆಂಗಳೂರಿನಲ್ಲಿ (Bengaluru) ಇದೇ ಮಾದರಿಯಲ್ಲಿ ಇಡ್ಲಿ (ATM Idli) ಸಿಗುವ ಎಟಿಎಂ ಒಂದು ಭಾರೀ ಸದ್ಧುಮಾಡಿತ್ತು. ಅಲ್ಲದೆ ಅದು ಸಖತ್ ಹಿಟ್ ಆಗಿತ್ತು. ಇದೀಗ ಈ ಎಟಿಎಂ ಇಡ್ಲಿಗೆ ಠಕ್ಕರ್ ಕೊಡಲು ತಮಿಳುನಾಡಿನ ಚೆನ್ನೈನಲ್ಲಿ (Chennai) ಎಟಿಎಂ ಬಿರಿಯಾನಿ (ATM Biriyani) ಶುರು ಆಗಿದೆ. ಈ ಎಟಿಎಂ ಬಿರಿಯಾನಿಯನ್ನು ತೋರಿಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಹೊಸ ವೆರೈಟಿ ಬಿರಿಯಾನಿ ನೆಟ್ಟಿಗರ ಹುಬ್ಬೇರಿಸಿದೆ.

ಚೆನ್ನೈನ ಕೊಳತ್ತೂರಿನಲ್ಲಿ ಇರುವ ಈ ಅಪರೂಪದ ಬಿರಿಯಾನಿ ಎಟಿಎಂ ಕುರಿತ ವಿಡಿಯೋವೊಂದು ಇನ್‌ಸ್ಟಾಗ್ರಾಮ್‌(Instagram) ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ಫುಡ್ ವೆಟ್ಟೈ ಎಂಬುವವರು ತಾವು ಎಟಿಎಂ ಮೂಲಕ ರೆಡಿಮೆಡ್ ಬಿರಿಯಾನಿ ಪಡೆಯುವ ವಿಡಿಯೋವನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ನಾವು ‘ದಿ ಬಿವಿಕೆ ಬಿರಿಯಾನಿ’ ಎಂಬ ಹೆಸರಿನ ಔಟ್‌ಲೆಟ್ ಅನ್ನು ಕಾಡಬಹುದು. ಎಟಿಎಂನಲ್ಲಿ ಒಬ್ಬ ವ್ಯಕ್ತಿ ಕೆಲವು ಆಯ್ಕೆಗಳನ್ನು ಸೆಲೆಕ್ಟ್ ಮಾಡುವ ಮೂಲಕ ವಿಡಿಯೋ ಶುರುವಾಗುತ್ತದೆ. ಸ್ಕ್ರೀನ್ ಅಲ್ಲಿ ತೋರಿಸುವ ಮೊತ್ತವನ್ನು ಪಾವತಿಸಿದ ನಂತರ, ಆ ವ್ಯಕ್ತಿ ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸಿದ ಬಿರಿಯಾನಿ ಪ್ಯಾಕೆಟ್ ಅನ್ನು ಹೊರತೆಗೆಯುತ್ತಾನೆ. ಔಟ್ಲೆಟ್ನ ಸ್ಥಳವನ್ನು ವಿಡಿಯೋದ ಶೀರ್ಷಿಕೆಯಲ್ಲಿಯೂ ಉಲ್ಲೇಖಿಸಲಾಗಿದೆ.

ಇನ್‌ಸ್ಟಾದಲ್ಲಿ ಸಖತ್ ಸದ್ಧು ಮಾಡ್ತಿರೋ ಈ ವಿಡಿಯೋ, ಅಪ್ಲೋಡ್ ಆದ ಕೂಡಲೇ 60 ಸಾವಿರಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಜನರು ಇದಕ್ಕೆ ಬಗೆ ಬಗೆಯಾಗಿ ಕಮೆಂಟಿಸುತ್ತಿದ್ದಾರೆ. ಕೆಲವರು ಈ ಬಿರಿಯಾನಿಯನ್ನು ಸವಿಯಲು ಉತ್ಸುಕರಾಗಿದ್ದರೆ, ಇತರರು ಇದರ ಬೆಲೆ ಹೆಚ್ಚೆನಿಸುತ್ತಿದೆ ಎಂದು ಹೇಳಿದರು. ಇನ್ನು ಕೆಲವರು ಬಿರಿಯಾನಿಯ ರುಚಿಯ ಬಗ್ಗೆ ಕಮೆಂಟ್ ಮಾಡಿ, ಇದು ಮನೆಯಲ್ಲಿ ಅಥವಾ ಹೋಟೆಲ್ ನಲ್ಲಿ ಮಾಡಿದ ಬಿರಿಯಾನಿ ಹಾಗಿಲ್ಲ. ಅದರ ರುಚಿಯೇ ಬೇರೆ ಎಂದಿದ್ದಾರೆ. ಇನ್ನು ಕೆಲವರು ಬಿರಿಯಾನಿ ರುಚಿಕರವಾಗಬೇಕಾದರೆ ಅದು ಅಲ್ಲೇ ತಯಾರಿಸಬೇಕಾಗುತ್ತದೆ ಎಂದಿದ್ದಾರೆ.