

Pakistani Man : ಜೀವನದಲ್ಲಿ ಒಬ್ಬ ವ್ಯಕ್ತಿ ಒಂದು ಬಾರಿ ಮದುವೆಯಾಗುವುದು ಸಾಮಾನ್ಯ. ಆದರೆ ಕೆಲವೊಮ್ಮೆ ತನ್ನ ಬಾಳ ಸಂಗಾತಿ ಸಾವನ್ನಪ್ಪಿದರೆ ಅಥವಾ ವಿಚ್ಛೇದನ ಪಡೆದರೆ ಎರಡನೇ ಬಾರಿ ಮದುವೆಯಾಗುತ್ತಾರೆ. ಅಲ್ಲದೆ ಕೆಲವು ಧರ್ಮಗಳಲ್ಲಿ ಎಷ್ಟು ಹೆಂಡತಿಯರನ್ನಾದರೂ ಹೊಂದಬಹುದೆಂಬ ನಿಯಮವಿದ್ದರೂ ಹೆಚ್ಚೆಂದರೆ ಅವರು ಕೇವಲ 3-4 ಪತ್ನಿಯರನ್ನು ಹೊಂದಿರುತ್ತಾರೆ. ಆದರೆ ಇಲ್ಲೊಬ್ಬ 60 ವರ್ಷದ ವ್ಯಕ್ತಿ 26 ಬಾರಿ ಮದುವೆಯಾಗಿದ್ದಾನೆ. ಅದರಲ್ಲಿ ಈಗಾಗಲೇ 22 ಪತ್ನಿಯರಿಗೆ ವಿಚ್ಛೇದನವನ್ನೂ ನೀಡಿದ್ದಾನೆ. ತನ್ನ ಜೀವನದಲ್ಲಿ 100 ಬಾರಿ ಮದುವೆಯಾಗುವುದು ಈತನ ಕನಸಂತೆ! ಈತನ ಬಗ್ಗೆ ಇನ್ನೂ ಹಲವು ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ ನೋಡಿ.
ಹೌದು, ಈ ವಿಚಿತ್ರವಾದ ವ್ಯಕ್ತಿಯ ವಿಚಿತ್ರವಾದ ಆಸೆಗಳನ್ನು ಕೇಳೋಕೆ ಅಚ್ಚರಿ ಎನಿಸಿದರೂ ಇದು ನಿಜ. ಪಾಕಿಸ್ತಾನದಲ್ಲೊಬ್ಬ 60 ವರ್ಷದ ವ್ಯಕ್ತಿ (Pakistani Man) ಒಂದಲ್ಲ ಎರಡಲ್ಲ ಸುಮಾರು 26 ಬಾರಿ ಮದುವೆ (Marriage)ಯಾಗಿದ್ದಾನೆ. ಇದರಲ್ಲಿ 22 ಪತ್ನಿಯರಿಗೆ ಈಗಾಗಲೇ ವಿಚ್ಛೇದನ (Divorce) ನೀಡಿದ್ದಾನಂತೆ. ಮಾತ್ರವಲ್ಲ ಬರೋಬ್ಬರಿ 100 ಬಾರಿ ಮದುವೆಯಾಗಿ ಹ್ಯಾಟ್ರಿಕ್ ಭಾರಿಸುವ ಗುರಿಯನ್ನು ಇಟ್ಟುಕೊಂಡಿದ್ದಾನಂತೆ! ಇದೀಗ ಈ ವ್ಯಕ್ತಿ ತನ್ನ ಆಸೆಗಳನ್ನು, ಗುರಿಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ವಿಡಿಯೋ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ಆ ವಿಡಿಯೋದಲ್ಲಿ ‘ತಾನು ಜೀವನದಲ್ಲಿ 100 ಬಾರಿ ಮದುವೆಯಾಗುವ ಗುರಿಯನ್ನು ಇಟ್ಟುಕೊಂಡಿದ್ದೇನೆ. ಅಲ್ಲದೆ ತನ್ನ ಪ್ರತಿಯೊಬ್ಬ ಹೆಂಡತಿ (Wife)ಯಿಂದ ಮಗುವನ್ನು ಪಡೆಯಲು ಬಯಸುತ್ತೇನೆ. ಮದುವೆಯಾಗಿರುವ ಹೆಂಡತಿಗೆ ಮಗುವಾದ ತಕ್ಷಣ ಆಕೆಗೆ ವಿಚ್ಛೇದನ ಕೊಡುತ್ತೇನೆ. ತಾನು ಮಕ್ಕಳನ್ನು ಹೊಂದಲು ಮಾತ್ರ ಮಹಿಳೆ (Women)ಯರನ್ನು ಮದುವೆಯಾಗುತ್ತೇನೆ ಎಂದಿದ್ದಾನೆ. ಆಶ್ಚರ್ಯದ ಸಂಗತಿಯೆಂದರೆ ಅವನು ಮದುವೆಯಾಗುವ ಮಹಿಳೆಯರು ಸಹ ಮಕ್ಕಳಾದ ಬಳಿಕ ಈತ ವಿಚ್ಛೇದನ ನೀಡುತ್ತಾನೆ ಎಂಬುದನ್ನು ತಿಳಿದಿದ್ದರೂ ಇವನನ್ನು ವರಿಸಲು ಮುಂದಾಗುತ್ತಾರೆ. ಇನ್ನು ಈ ವಿಡಿಯೋದಲಲ್ಲಿ ಈ ಮಹಾನುಭಾವ ತನ್ನ ನಾಲ್ವರು ಪತ್ನಿಯರೊಂದಿಗೆ ಕುಳಿತಿರುವುದನ್ನು ಕಾಣಬಹುದು. ಅವರಲ್ಲಿ ಒಬ್ಬಳಿಗೆ ಕೇವಲ 19 ವರ್ಷ!
ಅಲ್ಲದೆ ತಾನು ವಿಚ್ಛೇದನ ಪಡೆದ ಮಹಿಳೆಯರೊಂದಿಗೆ ತನಗೆ ಈಗಾಗಲೇ 22 ಮಕ್ಕಳಿದ್ದಾರೆ ಎಂದು ವ್ಯಕ್ತಿ ಹೇಳಿದ್ದಾನೆ. ವಿಚ್ಛೇದನದ ನಂತರ ಮಾಜಿ ಪತ್ನಿಯರು ಮತ್ತು ಅವರ ಮಕ್ಕಳಿಗೆ ಜೀವನಾಂಶಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದ್ದೇನೆ ಎಂದು ವ್ಯಕ್ತಿ ಹೇಳಿದ್ದಾನೆ. ‘ಮತ್ತೆ ಮತ್ತೆ ಮದುವೆಯಾಗುವುದು ನನ್ನ ಹವ್ಯಾಸ, ನಾನು 100 ಬಾರಿ ಮದುವೆಯಾಗಲು ಬಯಸುತ್ತೇನೆ’ ಎಂದು ವ್ಯಕ್ತಿ ಹೇಳಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media)ವೈರಲ್ ಆಗಿದ್ದು, 13,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟಿಸುತ್ತಿದ್ದಾರೆ.
https://twitter.com/activistjyot/status/1626588275401199626?ref_src=twsrc%5Etfw%7Ctwcamp%5Etweetembed%7Ctwterm%5E1626588275401199626%7Ctwgr%5E8e6cd2846326da544feb156bb454113128fae012%7Ctwcon%5Es1_c10&ref_url=https%3A%2F%2Fd-39451395772787103661.ampproject.net%2F2302031721000%2Fframe.html
ಒಟ್ಟಿನಲ್ಲಿ 60 ವರ್ಷವಾದರೂ ಇಂತಹ ಆಸೆ ಹೊಂದಿರುವ ಈ ಮುದುಕನ ತಾಕತ್ತನ್ನು ಮೆಚ್ಚಲೇ ಬೇಕು ಬಿಡಿ. 60 ವರ್ಷಕ್ಕೆ 26 ಮದುವೆಯಾಗಿದ್ದಾನೆ. ಇನ್ನು ಉಳಿದಂತೆ ತನ್ನ ಆಸೆಯ ಪ್ರಕಾರ ಶತಕ ಬಾರಿಸಲು ಸ್ವಲ್ಪ ಬೇಗ ಬೇಗನೇ ಹೆಣ್ಣು ಹುಡುಕಬೇಕಾದೀತು. ಯಾಕಂದ್ರೆ ಇವನಿಗೆ ಈಗಾಗಲೇ 60 ವರ್ಷ ಪ್ರಾಯ ಅನ್ನೋದನ್ನ ಮರಿಬಾರದು. ಅಂತೂ ಹುಣಸೇ ಮರ ಮುಪ್ಪಾದರೂ ಹುಳಿಮುಪ್ಪಲ್ಲ ಅನ್ನೋದಕ್ಕೆ ಈತನೇ ಅನ್ವರ್ಥನಾಗಿದ್ದಾನೆ.
ಇದನ್ನೂ ಓದಿ : ಅಮಿತ್ ಶಾ ಅವರೇ ಎಚ್ಚರದಿಂದಿರಿ! ನಮ್ಮನ್ನು ತಡೆದರೆ ಇಂದಿರಾ ಗಾಂಧಿಗೆ ಆದ ಗತಿಯೇ ನಿಮಗೂ ಆಗಬಹುದು: ಅಮೃತ್‌ಪಾಲ್ ಸಿಂಗ್













