Home Karnataka State Politics Updates Threat Letter to Rahul Gandhi: ರಾಹುಲ್‌ ಗಾಂಧಿಗೆ ಬೆದರಿಕೆ ಪತ್ರ! ಪತ್ರದಲ್ಲಿ ಬಾಂಬ್ ಸ್ಫೋಟಿಸಿ...

Threat Letter to Rahul Gandhi: ರಾಹುಲ್‌ ಗಾಂಧಿಗೆ ಬೆದರಿಕೆ ಪತ್ರ! ಪತ್ರದಲ್ಲಿ ಬಾಂಬ್ ಸ್ಫೋಟಿಸಿ ಕೊಲ್ಲುವ ಬೆದರಿಕೆ!

Hindu neighbor gifts plot of land

Hindu neighbour gifts land to Muslim journalist

ಮಧ್ಯಪ್ರದೇಶಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಭಾರತ್ ಜೋಡೋ ಯಾತ್ರೆಗೆ ತೆರಳುವ ಮುನ್ನವೆ ರಾಹುಲ್ ಗಾಂಧಿಗೆ ಸಂಕಷ್ಟ ಎದುರಾಗಿದ್ದು, ರಾಹುಲ್ ಗಾಂಧಿಗೆ ಜೀವ ಬೆದರಿಕೆಯೊಡ್ಡಲಾಗಿದೆ.

ಹೌದು!!!.ಮಧ್ಯಪ್ರದೇಶಕ್ಕೆ ಭಾರತ್ ಜೋಡೋ ಯಾತ್ರೆ ಪ್ರವೇಶಿಸುವುದಕ್ಕೂ ಮುನ್ನವೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಜೀವ ಬೆದರಿಕೆ ಹಾಕಲಾಗಿದ್ದು, ಮಧ್ಯಪ್ರದೇಶದ ಇಂದೋರ್‌ಗೆ ಆಗಮಿಸಿದ ತಕ್ಷಣ ಬಾಂಬ್ ಸ್ಫೋಟಿಸಿ ರಾಹುಲ್ ಗಾಂಧಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ.

ಜುನಿ ಪೊಲೀಸ್ ಠಾಣೆ ವ್ಯಾಪ್ತಿಯ ಇಂದೋರ್‌ನ ಸಿಹಿತಿಂಡಿ ಅಂಗಡಿಯೊಂದರ ಹೊರಗೆ ರಾಹುಲ್ ಗಾಂಧಿಯನ್ನು ಕೊಲ್ಲುವುದಾಗಿ ಬೆದರಿಕೆ ಪತ್ರದಲ್ಲಿ ತಿಳಿಸಲಾಗಿದ್ದು, ಹೀಗಾಗಿ ಪೊಲಿಸರು ಈಗಾಗಲೇ ಅಲ್ಲಿನ ಸಿಸಿಟಿವಿ ದೃಶ್ಯಗಳನ್ನು ಸ್ಕ್ಯಾನ್ ಮಾಡಲು ಪ್ರಾರಂಭಿಸಿದ್ದು, ಪತ್ರವನ್ನು ಹಾಗೂ ಸಿಹಿತಿಂಡಿ ಅಂಗಡಿಯ ಹೊರಗೆ ಬಿಟ್ಟುಹೋದ ವ್ಯಕ್ತಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಮಹಾರಾಷ್ಟ್ರದ ಅಕೋಲಾದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂದರ್ಭದಲ್ಲಿ ರಾಹುಲ್ ಗಾಂಧಿ, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರಿಗೆ ಕ್ಷಮೆಯಾಚಿಸುವ ಪತ್ರಕ್ಕೆ ಸಹಿ ಹಾಕುವ ಮೂಲಕ ಸಾವರ್ಕರ್ ಅವರು ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಸರ್ದಾರ್ ಪಟೇಲ್ ಅವರಂತಹ ನಾಯಕರಿಗೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದ ಬೆನ್ನಲ್ಲೇ, ಆರೋಪಿಸಿದ ಒಂದು ದಿನದ ಬಳಿಕ ಈ ಬೆದರಿಕೆ ಪತ್ರ ಕಂಡು ಬಂದಿದೆ.

ವೀರ ಸಾವರ್ಕರ್ ಅವರು ಬ್ರಿಟಿಷರಿಗೆ ಪತ್ರ ಬರೆದಿದ್ದು, ಅದರಲ್ಲಿ ಅವರು ಬ್ರಿಟಿಷರ ವಿಧೇಯ ಸೇವಕರಾಗಿ ಉಳಿಯುತ್ತೇನೆಂಬುದಾಗಿ ಬೇಡಿಕೊಂಡಿದ್ದರು . ಅಲ್ಲದೆ, ಬ್ರಿಟಿಷರಿಗೆ ಸಹಾಯವನ್ನೂ ಮಾಡಿರುವ ಜೊತೆಗೆ ಮಹಾತ್ಮ ಗಾಂಧಿಯಂತಹ ನಾಯಕರಿಗೆ ದ್ರೋಹ ಬಗೆದಿದ್ದಾರೆ ಎಂದು ರಾಹುಲ್ ಹೇಳಿಕೆ ನೀಡಿದ ಬಳಿಕ ಈ ಪತ್ರ ಕಂಡು ಬಂದಿದೆ.

ಇದೀಗ ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 507ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯನ್ನು ಪ್ರಾರಂಭಿಸಲಾಗಿದ್ದು, ಪೊಲೀಸ್ ಈ ಪ್ರಕರಣದ ಆರೋಪಿ ಮೇಲೆ ಎಫ್‍ಐಆರ್ ಕೂಡ ದಾಖಲಿಸಬಹುದು ಎನ್ನಲಾಗುತ್ತಿದೆ.