Home Karnataka State Politics Updates Siddaramaiah: ಪ್ರತಿಯೊಬ್ಬರಿಗೂ 500ರೂ. ಕೊಟ್ಟು ಕಾರ್ಯಕ್ರಮಕ್ಕೆ ಕರೆತನ್ನಿ! ಸಿದ್ದು ಮಾತಾಡಿದ ವಿಡಿಯೋ ಈಗ ಎಲ್ಲೆಡೆ ವೈರಲ್!

Siddaramaiah: ಪ್ರತಿಯೊಬ್ಬರಿಗೂ 500ರೂ. ಕೊಟ್ಟು ಕಾರ್ಯಕ್ರಮಕ್ಕೆ ಕರೆತನ್ನಿ! ಸಿದ್ದು ಮಾತಾಡಿದ ವಿಡಿಯೋ ಈಗ ಎಲ್ಲೆಡೆ ವೈರಲ್!

Hindu neighbor gifts plot of land

Hindu neighbour gifts land to Muslim journalist

Siddaramaiah viral video :ರಾಜ್ಯದಲ್ಲಿ ಚುನಾವಣೆ(Assembly Election) ಕಾವು ರಂಗೇರುತ್ತಿದ್ದಂತೆ ಎಲ್ಲಾ ಪಕ್ಷಗಳು ಕೂಡ ಅಬ್ಬರದ ಪ್ರಚಾರವನ್ನು ಕೈಗೊಂಡಿವೆ. ತಮ್ಮ ತಮ್ಮ ಯಾತ್ರೆಗಳ ಮೂಲಕ ಬೇರೆ ಬೇರೆ ಸ್ಥಳಗಳಿಗೆ ಹೋಗಿ, ಲಕ್ಷಾಂತರ ಜನರನ್ನು ಸೇರಿಸಿ ದೊಡ್ಡ ದೊಡ್ಡ ಸಮಾವೇಶಗಳನ್ನು ಮಾಡಿ ಮತ ಭೇಟೆ ಶುರು ಮಾಡಿವೆ. ಇಷ್ಟೊಂದು ಜನರು ಇಂತಹ ಕಾರ್ಯಕ್ರಮಗಳಿಗೆ ಹೇಗೆ ಬರುತ್ತಾರೆಂಬುದು ನಮಗೆಲ್ಲ ತಿಳಿದ ವಿಚಾರ ಬಿಡಿ. ಆದರೆ ಗೌಪ್ಯವಾದ ಈ ವಿಚಾರವನ್ನು ಇದೀಗ ಸ್ವತಃ ಸಿದ್ದರಾಮಯ್ಯನವರೇ ಬಹಿರಂಗಪಡಿಸಿರೋ ವಿಡಿಯೋ (Siddaramaiah viral video) ಒಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದೆ.

ಹೌದು, ಪ್ರತಿಯೊಬ್ಬರಿಗೂ 500 ರೂ. ಕೊಟ್ಟು ಪ್ರಚಾರಕ್ಕೆ ಕರೆದುಕೊಂಡು ಬನ್ನಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಇದೀಗ ವೈರಲ್(Viral) ಆಗಿದೆ. ಈ ವಿಚಾರಕ್ಕೆ ಸಂಬಂಧಿಸಿ ಟ್ವಿಟರ್‌ನಲ್ಲಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ(BJP) ಆಕ್ರೋಶ ವ್ಯಕ್ತಪಡಿಸಿದೆ. ದುಡ್ಡು ಕೊಟ್ಟು ಜನರನ್ನು ಕರೆದು ತರುವುದು, ಅವರಿಗೆಲ್ಲ ಬಿಟ್ಟಿ ಬಿಟ್ಟಿ ಭಾಗ್ಯ ಘೋಷಣೆ ಮಾಡುವುದು, ಆ ಕಡೆ ಅದೂ ಇಲ್ಲ, ಈ ಕಡೆ ಇದೂ ಇಲ್ಲ. ಕಾಂಗ್ರೆಸ್ ಕಥೆ ಈಗ ಮುಂಡಾಸು ಇಲ್ಲದಿರುವ ಮದುಮಗನ ಥರ ಆಗಿದೆ ಎಂದು ಟಾಂಗ್ ಕೊಟ್ಟಿದೆ.

ಮಾರ್ಚ್ 1ರಂದು ಬೆಳಗಾವಿ(Belagavi) ಜಿಲ್ಲೆಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಜಾಧ್ವನಿ(Praja dhwani) ಯಾತ್ರೆಗೆ ಚಾಲನೆ ನೀಡಲಾಯಿತು. ಈ ವೇಳೆ ತಮ್ಮ ಯಾತ್ರೆಗಾಗಿ ತಯಾರಿಸಿದ ಬಸ್ಸಿನಲ್ಲಿ ಸಿದ್ದು ತಮ್ಮ ಸಂಗಡಿಗರೊಂದಿಗೆ ಪ್ರಯಾಣ ಬೆಳೆಸಿದ್ದರು. ಆಗ ಕಾರ್ಯಕ್ರಮಕ್ಕೆ ಜನರನ್ನು ಕರೆದುಕೊಂಡು ಬರುವ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದು, ಈ ಹೇಳಿಕೆ ನೀಡಿದ್ದಾರೆ. ಬಿಜೆಪಿ ಟ್ವೀಟ್ ಮಾಡಿದ ವಿಡಿಯೋದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar), ಸತೀಶ್ ಜಾರಕಿಹೊಳಿ(Sateesh Jarakiholi) ಸೇರಿದಂತೆ ಇತರರಿದ್ದಾರೆ.

ಈ ಬಾರಿ ಕಾಂಗ್ರೆಸ್(Congress) ಅಧಿಕಾರಕ್ಕೆ ತರಬೇಕು ಅಂದುಕೊಂಡು ಅಖಾಡಕ್ಕಿಳಿದಿರುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿಧಾನಸಭಾ ಕ್ಷೇತ್ರವಾರು ಬಸ್ ಯಾತ್ರೆ ಮಾಡುತ್ತಿದ್ದಾರೆ. ‌ಬೆಳಗಾವಿಯಿಂದಲೇ ಈ ಪ್ರಜಾಧ್ವನಿ ಯಾತ್ರೆ ಅಂತಾ ಹೆಸರಿಟ್ಟು ಚಾಲನೆ ನೀಡಿದ್ದ ಯಾತ್ರೆ ಇದೀಗ ಎರಡನೇ ಸುತ್ತು ಬೆಳಗಾವಿ ಪ್ರವೇಶ ಮಾಡಿದೆ.‌ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದು ಮತದಾರರ ಸೆಳೆಯಲು ಅಬ್ಬರ ಭಾಷಣ ಮಾಡುತ್ತಿದ್ದಾರೆ.