Home Karnataka State Politics Updates Ration Card: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್‌ನ್ಯೂಸ್‌, ಸಿರಿಧಾನ್ಯ ವಿತರಣೆಗೆ ಮುಂದಾದ ಸರಕಾರ!!!

Ration Card: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್‌ನ್ಯೂಸ್‌, ಸಿರಿಧಾನ್ಯ ವಿತರಣೆಗೆ ಮುಂದಾದ ಸರಕಾರ!!!

Ration Card

Hindu neighbor gifts plot of land

Hindu neighbour gifts land to Muslim journalist

Ration Card: ಕೇಂದ್ರ ಸರಕಾರವು ಶ್ರೀ ಅನ್ನ ಯೋಜನೆಯಡಿ ಮೋದಿ ಸರಕಾರ ಮತ್ತೊಂದು ಉಡುಗೊರೆ ನೀಡಲು ಮುಂದಾಗಿದೆ. ಪಡಿತರ ಚೀಟಿದಾರರಿಗೆ ಇನ್ನು ಮುಂದೆ ಫೆಬ್ರವರಿಯಿಂದ ಪಡಿತರದ ಜೊತೆಗೆ ಸಿರಿಧಾನ್ಯಗಳನ್ನು ವಿತರಣೆ ಮಾಡಲು ಮುಂದಾಗಿದೆ.

ಇದನ್ನೂ ಓದಿ: Gold Rate: ಚಿನ್ನ ಖರೀದಿಸಲು ಬಯಸುವವರಿಗೆ ಸೂಪರ್ ಆಫರ್! ಇಂದೇ ಪರ್ಚೇಸ್ ಮಾಡಿ

ಗೋಧಿ, ಅಕ್ಕಿಯ ಜೊತಗೆ ಸಿರಿ ಧಾನ್ಯಗಳನ್ನು ಉಚಿತವಾಗಿ ಕೇಂದ್ರ ಸರಕಾರ ನೀಡಲು ಮುಂದಾಗಿದೆ. ಯಾವ ಕಾರ್ಡ್‌ ಹೊಂದಿರುವವರಿಗೆ ಎಷ್ಟು ಧಾನ್ಯ ಉಚಿತವಾಗಿ ನೀಡಬೇಕು ಎಂಬುವುದನ್ನು ಇಲಾಖೆ ಇನ್ನಷ್ಟೇ ನಿರ್ಧಾರ ಮಾಡಬೇಕಿದೆ.

ಶ್ರೀ ಅನ್ನ ಯೋಜನೆಯಡಿಯಲ್ಲಿ ಬಡವರಿಗೆ ಕೇಂದ್ರ ಸರಕಾರವು ಗೋಧಿ, ಅಕ್ಕಿಯ ಜೊತೆಗೆ ಸಿರಿಧಾನ್ಯಗಳನ್ನು ವಿತರಿಸಲಿದೆ. ಅಂತ್ಯೋದಯ ಕಾರ್ಡ್‌ ಹೊಂದಿರುವವರಿಗೆ ಈ ಹಿಂದೆ 21 ಕೆಜಿ ಅಕ್ಕಿ ಮತ್ತು 14 ಕೆಜಿ ಗೋಧಿ ಸಿಗುತ್ತಿತ್ತು. ಇದರ ಬದಲು ಒಂಭತ್ತು ಕೆಜಿ ಗೋಧಿ, ಐದು ಕೆಜಿ ಸಿರಿಧಾನ್ಯಗಳನ್ನು ನೀಡಲು ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.

ಈ ಹೊಸ ವ್ಯವಸ್ಥೆಯಲ್ಲಿ ಪಡಿತರ ಮೇಲಿನ ಅಕ್ಕಿಯ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ ಮತ್ತು ಅದರ ಸ್ಥಾನದಲ್ಲಿ ಸಿರಿ ಧಾನ್ಯಗಳನ್ನು ಸೇರಿಸಲಾಗಿದೆ. ಆಹಾರದಲ್ಲಿ ಸಿರಿ ಧಾನ್ಯಗಳನ್ನು ಉತ್ತೇಜಿಸಲು ಸರಕಾರ ಒತ್ತು ನೀಡುವ ಕಾರಣ ಈ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ ಎನ್ನಲಾಗಿದೆ. ಸಿರಿಧಾನ್ಯಗಳ ಕುರಿತು ಜನರಿಗೆ ಅರಿವು ಮೂಡಿಸಲು ಸರಕಾರ ಈ ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ ಕಾರ್ಯಕ್ರಮಗಳನ್ನು ಕೂಡಾ ಆಯೋಜಿಸುತ್ತದೆ, ಜೊತೆಗೆ ಸಿರಿಧಾನ್ಯದ ಪ್ರಯೋಜನವನ್ನು ಜನರಿಗೆ ತಿಳಿಸುತ್ತದೆ.