Home Karnataka State Politics Updates ಬಾಳ ಸಂಗಾತಿಯ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ! ಹೇಗಿರಬೇಕಂತೆ ಗೊತ್ತ ಲೈಫ್ ಪಾರ್ಟ್ನರ್?

ಬಾಳ ಸಂಗಾತಿಯ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ! ಹೇಗಿರಬೇಕಂತೆ ಗೊತ್ತ ಲೈಫ್ ಪಾರ್ಟ್ನರ್?

Hindu neighbor gifts plot of land

Hindu neighbour gifts land to Muslim journalist

ರಾಷ್ಟ್ರ ರಾಜಕಾರಣದಲ್ಲಿ ತಮ್ಮನ್ನು ಗುರ್ತಿಸಿಕೊಂಡು, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಆಗಿದ್ದ ರಾಹುಲ್ ಗಾಂಧಿಅವರು ಯುವ ನಾಯಕ ಎಂದೇ ಖ್ಯಾತಿ ಪಡೆದವರು. ರಾಹುಲ್ ಗಾಂಧಿ ಇಂದಿಗೂ ಮದುವೆಯಾಗದೆ ಒಂಟಿಯಾಗೇ ಇದ್ದಾರೆ. ಆದರಿಂದು ರಾಹುಲ್ ಅವರು ಮದುವೆ ವಿಚಾರದಲ್ಲಿ ಸುದ್ಧಿಯಲ್ಲಿದ್ದಾರೆ. ತಮ್ಮ ಲೈಫ್ ಪಾರ್ಟ್ನರ್ ಬಗ್ಗೆ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ

ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯು ರಾಹುಲ್ ಗಾಂಧಿಯ ನೇತೃತ್ವದಲ್ಲಿ ನಡೆಯುತ್ತಿದೆ. ಸದ್ಯ ಪಾದಯಾತ್ರೆಯು ದೆಹಲಿಯನ್ನು ತಲುಪಿದೆ. ಈ ಸಮಯದಲ್ಲಿ ಸಂದರ್ಶನವೊಂದಕ್ಕೆ ಉತ್ತಲ ನೀಡುತ್ತಿರುವಾಗ ತಮ್ಮ ಬಾಳಸಂಗಾತಿಯ ಕುರಿತು ಕೇಳಿದ ಪ್ರಶ್ನೆಗೆ ಮುಕ್ತವಾಗಿ ಉತ್ತರಿಸಿದ್ದಾರೆ.

ನಿಮ್ಮ ಬಾಳ ಸಂಗಾತಿ ಹೇಗಿರಬೇಕೆಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ನನ್ನ ಬಾಳ ಸಂಗಾತಿಯಾಗುವವರಿಗೆ ನನ್ನ ತಾಯಿ ಸೋನಿಯಾ ಗಾಂಧಿ ಮತ್ತು ಅಜ್ಜಿ ಇಂದಿರಾ ಗಾಂಧಿ ಇವರಿಬ್ಬರ ಗುಣಗಳು ಇರಬೇಕು. ಅಂತಹ ಸಂಗಾತಿಯೊಂದಿಗೆ ಜೀವನ ನಡೆಸಲು ನಾನು ಬಯಸುತ್ತೇನೆ ಎಂದು ಸಂದರ್ಶನದಲ್ಲಿ ರಾಹುಲ್ ಹೇಳಿದ್ದಾರೆ. ಅಲ್ಲದೆ ನನ್ನ ಅಜ್ಜಿ ಇಂದಿರಾಗಾಂಧಿ ನನ್ನ ಜೀವನದ ಪ್ರೀತಿ ಮತ್ತು ನನ್ನ ಎರಡನೇ ತಾಯಿ ಇದ್ದಂತೆ ಎಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ಸ್ಮರಿಸಿದ್ದಾರೆ.

ಅನೇಕ ಹೆಸರುಗಳಿಂದ ನಿಮ್ಮನ್ನು ರಾಜಕೀಯ ನಾಯಕರು ಗಳು ತಮಾಷೆ ಮಾಡುತ್ತಾರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದಾಗ ನಿಂದಿಸುವವರ ಕುರಿತು ನಾನು ಮಾತನಾಡುವುದಿಲ್ಲ, ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ಏನು ಹೇಳಿದರೂ ಪರವಾಗಿಲ್ಲ. ನಾನು ಯಾರನ್ನೂ ದ್ವೇಷಿಸುವುದಿಲ್ಲ. ನನ್ನನ್ನು ನಿಂದಿಸಿದರೂ, ಹೊಡೆದರೂ ನಾನು ಯಾರನ್ನೂ ದ್ವೇಷಿಸುವುದಿಲ್ಲ. ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತೇನೆ ಎಂದು ಹೇಳಿದ್ದಾರೆ.