Home Karnataka State Politics Updates Political News: ಪಕ್ಷದ ಪ್ರಚಾರದಲ್ಲಿ ಕಾಂಡೋಮ್ ಬಳಕೆ : ವೈ ಎಸ್ ಆರ್ ಸಿ ಪಿ.,...

Political News: ಪಕ್ಷದ ಪ್ರಚಾರದಲ್ಲಿ ಕಾಂಡೋಮ್ ಬಳಕೆ : ವೈ ಎಸ್ ಆರ್ ಸಿ ಪಿ., ಟಿಡಿಪಿ ಪಕ್ಷಗಳ ನಡುವೆ ಮಾತಿನ ಚಕಮಕಿ

Political news

Hindu neighbor gifts plot of land

Hindu neighbour gifts land to Muslim journalist

ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಆಡಳಿತಾರೂಡ ವೈ. ಎಸ್. ಆರ್. ಕಾಂಗ್ರೆಸ್ ಪಕ್ಷ ಮತ್ತು ಎನ್. ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ ನಡುವೆ ಫೆಬ್ರವರಿ 21ರಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಮಾತಿನ ಚಕಮಕಿ ನಡೆದಿದೆ. ಎರಡೂ ಪಕ್ಷಗಳು ಕಾಂಡೋಮ್ಗಳನ್ನು ಪ್ರದರ್ಶಿಸುವ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗಳಲ್ಲಿ ಕಾಂಡೊಮ್ ಪ್ಯಾಕೆಟ್ಗಳಲ್ಲಿ ಪಕ್ಷದ ಹೆಸರುಗಳು ಮತ್ತು ಚಿಹ್ನೆಗಳನ್ನು ಮುದ್ರಿಸಿರುವುದು ಕಂಡು ಬಂದಿದೆ.

ಇದನ್ನೂ ಓದಿ: Bengaluru: ಬೀದಿ ನಾಯಿಗಳಿಗೆ ಮೈಕ್ರೋಚಿಪ್ಪಿಂಗ್ ಅಳವಡಿಸಲು ಮುಂದಾದ ಬಿಬಿಎಂಪಿ

ವೈ. ಎಸ್. ಆರ್. ಕಾಂಗ್ರೆಸ್ ಪಕ್ಷವು ಕಾಂಡೋಮ್ ಪ್ಯಾಕೆಟ್ಗಳ ಮೇಲೆ ತೆಲುಗಿನಲ್ಲಿ ಪಕ್ಷದ ಶೀರ್ಷಿಕೆ ಹೊಂದಿದ್ದು ಈ ಹಿನ್ನೆಲೆ ಟಿಡಿಪಿಯ ಬ್ರ್ಯಾಂಡಿಂಗ್ ಹೊಂದಿರುವ ವೀಡಿಯೊವನ್ನು ಉಲ್ಲೇಖಿಸಿದೆ.

ಈ ವಿಡಿಯೋದಲ್ಲಿ ಎನ್. ಚಂದ್ರಬಾಬು ನಾಯ್ಡು, ಲೋಕೇಶ್ ನಾರಾ ಮತ್ತು ಪವನ್ ಕಲ್ಯಾಣ್ ಅವರನ್ನು ಟ್ಯಾಗ್ ಮಾಡಿದೆ.