Home Breaking Entertainment News Kannada CM Siddaramaiah: ಲಾಯರ್ ಓದುವಾಗ ಸಿಎಂ ಸಿದ್ದರಾಮಯ್ಯಗೆ ಇದ್ರಾ ಲವರ್ ? ಹಾಗಿದ್ರೆ ಯಾರವರು? ನಾಚಿ...

CM Siddaramaiah: ಲಾಯರ್ ಓದುವಾಗ ಸಿಎಂ ಸಿದ್ದರಾಮಯ್ಯಗೆ ಇದ್ರಾ ಲವರ್ ? ಹಾಗಿದ್ರೆ ಯಾರವರು? ನಾಚಿ ನೀರಾದ ಸಿದ್ದು ಹೇಳಿದ್ದೇನು?

CM Siddaramaiah

Hindu neighbor gifts plot of land

Hindu neighbour gifts land to Muslim journalist

CM Siddaramaiah: ಬಹಳ ದೊಡ್ಡ ಮಟ್ಟದಲ್ಲಿ ಬೆಳೆದಿರುವ ಮಾಧ್ಯಮ ಲೋಕ ಇಂದು ಮನರಂಜನೆಗಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿವೆ. ಅದರಲ್ಲೂ ಖಾಸಗಿ ವಾಹಿನಿಗಳಂತೂ ಉತ್ತಮವಾದ ಕಾರ್ಯಕ್ರಮಗಳನ್ನು ಆಯೋಜಿಸಿ ಅದು ಮನೊರಂಜೆಯ ಜೊತೆಗೆ ಸಮಾಜಕ್ಕೆ ಅಷ್ಟೇ ಉತ್ತಮವಾದ ಸಂದೇಶಕೊಡುವಂತೆ ಮಾಡುತ್ತವೆ. ಇತ್ತೀಚಿನ ದಿನಗಳಲ್ಲಿ ರಾಜಕೀಯ ನಾಯಕರನ್ನೂ ಇಂತಹ ಕಾರ್ಯಕ್ರಮಗಳು ಸೆಳೆಯುತ್ತಿವೆ. ತಮ್ಮ ಬಿಡುವಿನ ವೇಳೆ ಸಿಎಂ(CM) ಯಿಂದ ಹಿಡಿದು ಮಂತ್ರಿ(Ministers) ಮಹಾಶಯರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವರ ನಿರಂತರ ಕಾರ್ಯಗಳ ನಡುವೆ ಇಂತ ಕಾರ್ಯಕ್ರಮ ತುಂಬಾ ನೆಮ್ಮದಿ ನೀಡುತ್ತವೆ. ಅಲ್ಲಿ ಎಲ್ಲಾ ನಟ-ನಟಿಯರು, ಕಲಾವಿದರೊಂದಿಗೆ ಬೆರೆತು ಒತ್ತಡಗಳನ್ನು ಮರೆಯುತ್ತಾರೆ.

ನಮ್ಮ ನಾಡಲ್ಲಿ ಪ್ರಸಾರವಾಗೋ ಪ್ರಸಿದ್ಧ ವಾಹಿನಿಗಳಾದ ಜೀ ಕನ್ನಡ(Zee kannada) ಹಾಗೂ ಕಲರ್ಸ್ ಕನ್ನಡ(Colors kannada) ದವರು ಹಬ್ಬ ಹರಿದಿನಗಳಲ್ಲೋ ಇಲ್ಲ ವರ್ಷಕ್ಕೆ ಒಮ್ಮೆಯೋ ತಮ್ಮ ವಾಹಿನಿಯಲ್ಲಿ ಪ್ರಸಾರವಾಗೋ ಎಲ್ಲಾ ಕಾರ್ಯಕ್ರಮಗಳ ಕಲಾವಿದರನ್ನು ಒಂದೆಡೆ ಸೇರಿಸಿ ಕುಟುಂಬ ಅವಾರ್ಡ್ಸ್, ಅನುಬಂಧ ಅನ್ನೋ ಬಹಳ ವೈಭವೋಪೇತ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಇದರಲ್ಲಿ ತಮ್ಮ ಕಲಾವಿದರನ್ನು ಪ್ರೋತ್ಸಾಹಿಸುವುದಲ್ಲದೆ ಎಲೆ ಮರೆಯ ಕಾಯಿಯಂತಿರುವ ಕೆಲವು ಸಾಧಕರನ್ನೂ ಗೌರವಿಸುತ್ತಾರೆ. ಒಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸದ್ಯ ರಾಜ್ಯದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುವುದರೊಂದಿಗೆ ಜನರ ಅಚ್ಚುಮೆಚ್ಚಾಗಿವೆ. ಈ ಸಂಭ್ರಮದಲ್ಲಿ ಇತ್ತೀಚೆಗೆ ನಮ್ಮ ರಾಜಕೀಯ ನಾಯಕರು ಪಾಲ್ಗೊಂಡು ತಮ್ಮ ಸಂತೋಷ ಹಂಚಿಕೊಳ್ಳುತ್ತಾರೆ. ಇದು ಒಂದು ಒಳ್ಳೆಯ ಹವ್ಯಾಸ ಎಂದರೂ ತಪ್ಪಾಗಲಾರದು. ಅಂತೆಯೇ ಇದೀಗ ಕಲರ್ಸ್ ಕನ್ನಡದ ವಾಹಿನಿಯವರು ಆಯೋಜಿಸಿರುವ ಕಲರ್ಸ್ ಕನ್ನಡದ ‘ಅನುಬಂಧ ಅವಾರ್ಡ್ಸ್’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಅವರನ್ನು ಕರೆಸಲಾಗಿತ್ತು. ಈ ವೇಳೆ ನಮ್ಮ ನೆಚ್ಚಿನ ನಟಿ ಮಣಿಯರು ಜನಪ್ರಿಯ ಮುಖ್ಯಮಂತ್ರಿ ಸಿಎಂ ಸಿದ್ದುಗೆ ಕೆಲವು ಪ್ರಶ್ನೆಗಳನ್ನು ಕೇಳಿ ನಕ್ಕು ನಗುವಂತೆ ಮಾಡಿದ್ದಾರೆ.

ಹೌದು, ಕಲರ್ಸ್ ಕನ್ನಡದ ‘ಅನುಬಂಧ ಅವಾರ್ಡ್ಸ್’ ಕಾರ್ಯಕ್ರಮದಲ್ಲಿ ನಾಡನ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದರು. ಈ ವೇಳೆ ಸಿದ್ದರಾಮಯ್ಯನವರು ಅತಿಥಿ ಜಾಗದಲ್ಲಿದ್ದು, ಸುತ್ತಲೂ ಬಹಳಷ್ಟು ಸೆಲೆಬ್ರಿಟಿ ನಟಿಮಣಿಯರು ಕುಳಿತು ಸಿದ್ದುಗೆ ತಮಾಷೆಯ, ತರಲೆಯ ಪ್ರಶ್ನೆಗಳನ್ನು ಕೇಳಿ, ಅದಕ್ಕೆ ನಮ್ಮ ಮುಖ್ಯಮಂತ್ರಿ ಕೂಡ ಅಷ್ಟೇ ಜಾಣತನದ ತಮಾಷೆಯ ಉತ್ತರ ನೀಡಿ ಎಲ್ಲರೂ ನಗುವಂತೆ ಮಾಡುತ್ತಿದ್ದರು. ಹೀಗೆ ಒಬ್ಬರಾದ ಬಳಿಕ ಮತ್ತೊಬ್ಬರು ಪ್ರಶ್ನೆ ಕೇಳಿ ಕಾರ್ಯಕ್ರಮ ರಂಜಿಸುತ್ತಿದ್ದರು.

ಈ ವೇಳೆ ನಿರೂಪಕಿ ಹಾಗೂ ಭಾಗ್ಯಲಕ್ಷ್ಮೀ ಧಾರಾವಾಹಿಯ ಭಾಗ್ಯ ‘ನಿಮಗೆ ಅಡುಗೆ ಮಾಡಲಿಕ್ಕೆ ಬರುತ್ತಾ?’ ಎಂಬ ಪ್ರಶ್ನೆ ಕೇಳಿದಾಗ ‘ಅನ್ನ ಮಾತ್ರ ಮಾಡಲು ಬರುತ್ತೆ’ ಎಂದರು ಸಿದ್ದರಾಮಯ್ಯ. ಓ ಅದಕ್ಕೆ ನೀವು ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದು ಎಂದು ಹೇಳಿದ ಭಾಗ್ಯ ಎಲ್ಲರೂ ನಗುವಂತೆ ಮಾಡಿದರು. ಬಳಿಕ ‘ನೀವು ಹೆಂಡತಿ ಯಾವತ್ತಾದರೂ ನಿಮ್ಮನ್ನ ಬೈಯ್ದಿದಾರಾ?’ ಎಂಬ ಪ್ರಶ್ನೆಗೆ ‘ನಗು’ವಿನ ಮೂಲಕ ‘ಮೌನ’ವನ್ನೇ ಉತ್ತರ ಕೊಟ್ಟರು ಸಿದ್ದರಾಮಯ್ಯ. ಆದರೆ ಆ ಬಳಿಕ ಒಲವಿನ ನಿಲ್ಡಾಣ’ ಧಾರಾವಾಹಿಯ ನಟಿ ‘ತಾರಿಣಿ’ ಕೇಳಿದ ಪ್ರಶ್ನೆಗೆ ಅಲ್ಲಿದ್ದವರೆಲ್ಲ ನಗೆಗಡಲಿನಲ್ಲಿ ತೇಲಿದರು. ಸ್ವತಃ ಸಿದ್ದರಾಮಯ್ಯನವರು ಹುಬ್ಬು ಮೇಲೇರಿಸಿಕೊಂಡು ವಿಶೇಷ ‘ಲುಕ್’ ಕೊಟ್ಟು ನಗಲಾರಂಭಿಸಿದರು.

ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ‘ನೀವು ಎಲ್‌ಎಲ್‌ಬಿ ಓದುವಾಗ ಯಾರನ್ನಾದರೂ ಲವ್ ಮಾಡಿದ್ರಾ?’ ಎಂದು ನಟಿ ತಾರಿಣಿ ಪ್ರಶ್ನೆ ಕೇಳಿದಾಗ ಸ್ವತಃ ತಾವೂ ನಗತೊಡಗಿದರು. ಬಳಿಕ ನಗುನಗುತ್ತಲೇ ಇದ್ದ ಸಿದ್ದರಾಮಯ್ಯ ಲವ್ ಮಾಡಿದ್ದೆ ಅಂತ ಅಥವಾ ಮಾಡಿಲ್ಲ ಅಂತಲೂ ಉತ್ತರ ಕೊಡದೇ ಎಲ್ಲರ ನಗೆಯೊಡನೆ ತಮ್ಮ ನಗೆಯನ್ನು ಸೇರಿಸಿ ಅಲ್ಲೊಂದು ನಗುವಿನ ಸಾಗರವನ್ನೇ ನಿರ್ಮಿಸಿಬಿಟ್ಟರು. ಒಟ್ಟಿನಲ್ಲಿ ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ ಕಾರ್ಯಕ್ರಮದ ಈ ಪ್ರೋಮೋ ಇಡೀ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ. ಸಿದ್ದರಾಮಯ್ಯನವರ ಪೂರ್ತಿ ಇಂಟರ್ವ್ಯೂವ್ ನೋಡಲು ಜನರೆಲ್ಲಾ ಕಾತರದಿಂದ ಕಾದಿದ್ದಾರೆ.

ಇದನ್ನೂ ಓದಿ: ABVP: ಸೌಜನ್ಯ ಹೋರಾಟಕ್ಕೆ ಧುಮುಕಿದ ABVP – ಹೋರಾಟ ಪರವೋ, ವಿರೋಧವೋ?