Home Karnataka State Politics Updates Chaitra kundapura: ಚೈತ್ರಾ ಕುಂದಾಪುರ ಪ್ರಕರಣ- ಬಿಜೆಪಿಗೆ ಕಾಂಗ್ರೆಸ್ ಹೇಳಿದ್ದೇನು ಗೊತ್ತಾ?

Chaitra kundapura: ಚೈತ್ರಾ ಕುಂದಾಪುರ ಪ್ರಕರಣ- ಬಿಜೆಪಿಗೆ ಕಾಂಗ್ರೆಸ್ ಹೇಳಿದ್ದೇನು ಗೊತ್ತಾ?

Chaitra kundapura case
Image source- public tv

Hindu neighbor gifts plot of land

Hindu neighbour gifts land to Muslim journalist

Chaitra kundapura case: ಸನಾತನ ಹಿಂದೂ ಧರ್ಮದ ಹೆಸರು ಹೇಳಿಕೊಂಡು ಭಾಷಣ ಹೋರಾಟದ ಮೂಲಕ ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರ (Chaithra Kundapura case)ಳ ಅಸಲಿ ಮುಖ ಬಯಲಾಗಿದ್ದು, ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಂದ ಬರೋಬ್ಬರಿ 5 ಕೋಟಿ ರೂ. ದೋಚಿದ್ದ ಪ್ರಕರಣದಲ್ಲಿ ಆಕೆ ಮತ್ತು ಆಕೆಯ ಗ್ಯಾಂಗ್ ಸಿಸಿಬಿ (CCB) ಬಲೆಗೆ ಬಿದ್ದಿದೆ. ಈ ಕುರಿತು ಇದೀಗ ಕಾಂಗ್ರೆಸ್ ಕೂಡ ಪ್ರತಿಕ್ರಿಯಿಸಿದೆ.

ಹೌದು, ಸಾಮಾಜಿಕ ಹೋರಾಟಗಾರ್ತಿ, ಹಿಂದೂ ನಾಯಕಿಯಾಗಿ ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರ (Chaitra Kundapura) ವಂಚನೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರ (CCB Police) ವಶದಲ್ಲಿದ್ದಾಳೆ. ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸೋದಾಗಿ ಹೇಳಿ ಏಳು ಕೋಟಿ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಚೈತ್ರಾ ಕುಂದಾಪುರ ಬಿಜೆಪಿ ನಾಯಕರ (BJP Leaders) ಜೊತೆ ಗುರುತಿಸಿಕೊಂಡಿದ್ದ ನಾಯಕಿ. ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ (Congress) ಬಿಜೆಪಿಗರ ಕಾಲೆಳೆದಿದೆ.

ಸದಾ ಬಿಜೆಪಿಯನ್ನು ಒಂದಲ್ಲಾ ಒಂದು ವಿಚಾರವಾಗಿ ಟೀಕಿಸೋ ಕಾಂಗ್ರೆಸ್ ಗೆ ಚೈತ್ರಾ ವಿಚಾರ ದೊಡ್ಡ ಅಸ್ತ್ರವಾಗಿ ಸಿಕ್ಕಿದೆ. ಹೀಗಾಗಿ ಇದನ್ನು ಇಟ್ಟುಕೊಂಡು ಮೊದಲಿಗೆ ಉಗ್ರ ಭಾಷಣಕಾರ್ತಿ ಬಿಜೆಪಿಯ ಎಂಎಲ್‍ಎ ಟಿಕೇಟ್ ಕೊಡಿಸೋದಾಗಿ 7 ಕೋಟಿ ಪಡೆದು ವಂಚಿಸಿದ್ದಾರೆ ಅಂತಾ ಕುಂದಾಪುರದ ಉದ್ಯಮಿಯೊಬ್ಬರು ದೂರಿ, ಈ ವಂಚನೆ ಪ್ರಕರಣ ಬೆಳಕಿಗೆ ಬಂದ್ರೂ ಬಿಜೆಪಿ ಪಕ್ಷ ದೂರು ಕೊಡದೇ ಸುಮ್ಮನಿರೋದ್ಯಾಕೆ..? ಈ 7 ಕೋಟಿ ವಂಚನೆಯಲ್ಲಿ ಬಿಜೆಪಿಗರ ಪಾಲೆಷ್ಟು? ಆರ್‍ಎಸ್‍ಎಸ್ ಪಾಲೆಷ್ಟು ಎಂದು ಪ್ರಶ್ನಿಸಿತ್ತು. ಇಷ್ಟೇ ಅಲ್ಲದೆ ಮತ್ತೆ ಬಿಜೆಪಿಯನ್ನು ಕೆಣಕಿ ಕಾಲೆಳೆದ ಕಾಂಗ್ರೆಸ್ ಬಿಜೆಪಿ ಪ್ರಬಲ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಜೊತೆ ಚೈತ್ರಾ ಕುಂದಾಪುರ ಇರುವ ಪೋಟೋ ಹಾಕಿ ಟ್ವೀಟ್ ಮಾಡಿದೆ. ಇದರೊಂದಿಗೆ ಬಿಜೆಪಿಯಲ್ಲಿ ಸಿಎಂ ಹುದ್ದೆ, ಮಂತ್ರಿಗಿರಿ ಮಾರಾಟವಾದಂತೆ ಟಿಕೆಟ್‍ಗಳು ಮಾರಾಟವಾಗಿದೆಯಾ? ಅಂತಾ ಕೆಣಕಿದೆ.

https://x.com/INCKarnataka/status/1701945996727759004?t=74P2rY916l0m2jueT1qKfA&s=08

ಇನ್ನು ಈ ನಡುವೆ ಬಿಜೆಪಿ ನಾಯಕರೊಂದಿಗೆ ಚೈತ್ರಾ ಕುಂದಾಪುರ ಇರೋ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಚೈತ್ರಾ ತಪ್ಪು ಮಾಡಿದ್ರೆ ಕಾನೂನು ಕ್ರಮ ಕೈಗೊಳ್ಳಲಿ. ಅನಗತ್ಯವಾಗಿ ಹಿಂದುಪರ ಕಾರ್ಯಕರ್ತರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಮಾಜಿ ಮಂತ್ರಿ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.

ಕಾಂಗ್ರೆಸ್ ನಾಯಕಿ ಮನೆಯಲ್ಲಿ ಅವಿತಿದ್ದ ಚೈತ್ರಾ!:
ಚೈತ್ರಾ ಕುಂದಾಪುರ ಕೈ ನಾಯಕಿ (Congress Leaders) ಮನೆಯಲ್ಲಿಯೇ ಆಶ್ರಯ ಪಡೆದುಕೊಂಡಿದ್ದ Exclusive ಮಾಹಿತಿ ನ್ಯೂಸ್​ 18ಗೆ ಲಭ್ಯವಾಗಿದೆ. ಯುವ ಕಾಂಗ್ರೆಸ್ ಮಾಧ್ಯಮ ವಕ್ತಾರೆ ಸುರಯ್ಯ ಅಂಜುಮ್ ಅವರ ಉಡುಪಿಯಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ಚೈತ್ರಾ ಕುಂದಾಪುರ ಆಶ್ರಯ ಪಡೆದುಕೊಂಡಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.

ಉದ್ಯಮಿಗೆ ಜೀವ ಬೆದರಿಕೆ:
ಚೈತ್ರಾ ಕುಂದಾಪುರನಿಂದ ಮೋಸಕ್ಕೆ ಒಳಗಾಗಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿ ನೀಡಿರುವ ದೂರಿನಲ್ಲಿ ತಮಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ

Chaitra Kundapura Arrested: ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಬಂಧನ ಪ್ರಕರಣ; ಕಾಂಗ್ರೆಸ್‌ ಮಾಧ್ಯಮ ವಕ್ತಾರೆಗೆ ಸಿಸಿಬಿ ನೋಟಿಸ್‌!!

ಇದನ್ನೂ ಓದಿ: Sharan pampwell: ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಯಾಕೆ ? ಸ್ಪೋಟಕ ಸತ್ಯ ಹೊರ ಹಾಕಿದ ಹಿಂದೂ ಮುಖಂಡ ಶರಣ್ ಪಂಪ್‌ವೆಲ್