Home Karnataka State Politics Updates Basavanagouda Yatnal: ಯಡಿಯೂರಪ್ಪ ಲಿಂಗಾಯತನೇ ಅಲ್ಲ !! ಹೊಸ ಬಾಂಬ್ ಸಿಡಿಸಿದ ಯತ್ನಾಳ್

Basavanagouda Yatnal: ಯಡಿಯೂರಪ್ಪ ಲಿಂಗಾಯತನೇ ಅಲ್ಲ !! ಹೊಸ ಬಾಂಬ್ ಸಿಡಿಸಿದ ಯತ್ನಾಳ್

Basavanagouda Yatnal

Hindu neighbor gifts plot of land

Hindu neighbour gifts land to Muslim journalist

Basavanagouda Yatnal: ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವುದು ಮಾಜಿ ಸಿಎಂ ಯಡಿಯೂರಪ್ಪ (B.S Yediyurappa) ಹಾಗೂ ಅವರ ಮಗ ಬಿ.ವೈ ವಿಜಯೇಂದ್ರ (B.Y Vijayendra) ಅವರ ದಂಧೆಯಾಗಿದೆ. ಅಲ್ಲದೆ ಯಡಿಯೂರಪ್ಪ ಯಾವೊಬ್ಬ ಲಿಂಗಾಯತರನ್ನು ಉದ್ದಾರ ಮಾಡಿಲ್ಲ ಹಾಗೂ ಅವನು ಲಿಂಗಾಯತನೇ ಅಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: Ukraine – Russia: ಉಕ್ರೇನ್ ವಿರುದ್ಧ ಪರಮಾಣು ಯುದ್ಧಕ್ಕೆ ರಷ್ಯಾ ಸಿದ್ಧ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

ಇದನ್ನೂ ಓದಿ: Share Market: ಷೇರು ಮಾರುಕಟ್ಟೆಯ ಸಂಪತ್ತು ಕೊಳ್ಳೆ – ಒಂದೇ ದಿನ ಕರಗಿತು ಹೂಡಿಕೆದಾರರ 14 ಲಕ್ಷ ಕೋಟಿ ಮೌಲ್ಯ !

ಹೌದು, ನಿರಂತರವಾಗಿ ಯಡಿಯೂರಪ್ಪ(Yadiyurappa) ಹಾಗೂ ಅವರ ಕುಟುಂಬದವರ ಬಗ್ಗೆ ಕಿಡಿಕಾರುವ ಬಸವನಗೌಡ ಯತ್ನಾಳ್ ಅವರು ಇದೀಗ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಯಾವೊಬ್ಬ ಲಿಂಗಾಯತರನ್ನು ಉದ್ದಾರ ಮಾಡಿಲ್ಲ ಹಾಗೂ ಅವನು ಲಿಂಗಾಯತನೇ ಅಲ್ಲ ಎಂದು ಹೇಳಿದ್ದು, ಯಡಿಯೂರಪ್ಪ ಅವರ ಹಿಂದೆ ಕೆಲವು ಸ್ವಾಮಿಜಿಗಳಿದ್ದಾರೆ. ಹಣ ನೀಡುತ್ತಾನೆ ಅಂತಹ ಸ್ವಾಮೀಜಿಗಳು ಆತನಿಗೆ ತತಾಸ್ಥು ಅಂತಾರೆ. ಈ‌ ಲೋಕಸಭೆ ಚುನಾವಣೆ ಬಳಿಕ ಯಡಿಯೂರಪ್ಪ ಇನ್ನಷ್ಟು ಬಂಡವಾಳ ಬಯಲು ಮಾಡುತ್ತೆನೆ ಎಂದಿದ್ದಾರೆ.

ಇಷ್ಟೇ ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ (Lok Sabha Elections 2024) ಹಾಲಿ ಮೂವರು ಸಂಸದರಿಗೆ ಟಿಕೆಟ್ ಕೈ ತಪ್ಪುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಪೂಜ್ಯ ತಂದೆ –ಮಗ ಇಬ್ಬರೂ ಸೇರಿ ಬಿಜೆಪಿ (BJP) ಅಭ್ಯರ್ಥಿಗಳನ್ನು ಸೋಲಿಸುವುದು ಅವರ ಗುರಿಯಾಗಿದೆ. ಈ ಹಿಂದೆ ನನ್ನನ್ನು ಸೋಲಿಸಲು ಬಿ.ವೈ ವಿಜಯೇಂದ್ರ ಹಣ ಕಳುಹಿಸಿದ್ದ ಎಂದು ಕಿಡಿಕಾರಿದ್ದಾರೆ.