Home Karnataka State Politics Updates Mallikharjuna kharge: ದೇಶದಲ್ಲಿ ಇದೇ ಕೊನೆ ಚುನಾವಣೆ, ಇನ್ಮುಂದೆ ಯಾವ ಎಲೆಕ್ಷನ್ ಇರಲ್ಲ – ಮಲ್ಲಿಕಾರ್ಜುನ...

Mallikharjuna kharge: ದೇಶದಲ್ಲಿ ಇದೇ ಕೊನೆ ಚುನಾವಣೆ, ಇನ್ಮುಂದೆ ಯಾವ ಎಲೆಕ್ಷನ್ ಇರಲ್ಲ – ಮಲ್ಲಿಕಾರ್ಜುನ ಖರ್ಗೆ !!

Mallikharjuna kharge

Hindu neighbor gifts plot of land

Hindu neighbour gifts land to Muslim journalist

Mallikharjun kharge: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಚುನಾವಣೆಯೇ ಇರೋದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikharjun Kharge) ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Congress Karnataka: ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತೆ-ಫೋಟೋಗ್ರಾಫರ್‌ ಮಧ್ಯೆ ಗಲಾಟೆ!!!

ಹೌದು, ಭುವನೇಶ್ವರದಲ್ಲಿ ಬಿಜೆಪಿ(BJP) ಮತ್ತು ಆರ್‌ಎಸ್‌ಎಸ್‌(RSS) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಜಾಪ್ರಭುತ್ವವನ್ನ ಉಳಿಸಿಕೊಳ್ಳಲು 2024ರಲ್ಲಿ ನಡೆಯುವ ಚುನಾವಣೆಯೇ ದೇಶದ ಜನರಿಗಿರುವ ಕೊನೆಯ ಅವಕಾಶ. ಒಂದು ವೇಳೆ ಈ ಚುನಾವಣೆಯಲ್ಲೂ ಮೋದಿ ಜಯಗಳಿಸಿದರೆ ಮುಂದಿನ ದಿನಗಳಲ್ಲಿ ದೇಶದಲ್ಲಿ ಚುನಾವಣೆಯೇ ಇರುವುದಿಲ್ಲ, ಸರ್ವಾಧಿಕಾರ ಆರಂಭವಾಗುತ್ತದೆ. ದೇಶದಲ್ಲಿ ಸರ್ವಾಧಿಕಾರತ್ವ ಸ್ಥಾಪನೆ ಆಗುತ್ತದೆ. ರಷ್ಯಾದಲ್ಲಿ ಪುಟಿನ್‌ ಅವರಂತೆ ಬಿಜೆಪಿ ಭಾರತವನ್ನು ಆಳುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

 

ಅಲ್ಲದೆ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ವಿರೋಧ ಪಕ್ಷಗಳ ನಾಯಕರಿಗೆ ಬೆದರಿಕೆಗಳನ್ನು ಹಾಕಿಕೊಂಡು ಆಡಳಿತ ನಡೆಸುತ್ತಿದೆ. ರಾಜಕೀಯ ವಿರೋಧಿಗಳನ್ನು ಮಣಿಸಲು ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಯನ್ನು ಅಸ್ತ್ರವಾಗಿ ಬಳಸುತ್ತಿದೆ ಎಂದು ಅವರು ಆರೋಪಿಸಿದರು.