Congress Karnataka: ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತೆ-ಫೋಟೋಗ್ರಾಫರ್‌ ಮಧ್ಯೆ ಗಲಾಟೆ!!!

KPCC Office: ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಗಲಾಟೆ ನಡೆದಿದೆ. ಕೆಪಿಸಿಸಿ ಪೋಟೋಗ್ರಾಫರ್‌, ಕಾಂಗ್ರೆಸ್‌ ಕಾರ್ಯಕರ್ತೆ ನಡುವೆ ಗಲಾಟೆ ಮಾಡಿಕೊಂಡಿದ್ದು, ಕುರ್ಚಿಯ ವಿಚಾರಕ್ಕೆ ಪರಸ್ಪರ ಜಗಳ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

ಹುತಾತ್ಮರ ದಿನಾಚರಣೆಯನ್ನು ಕಾಂಗ್ರೆಸ್‌ ಕಚೇರಿಯಲ್ಲಿ ಆಯೋಜನೆ ಮಾಡಲಾಗಿತ್ತು. ಅಲ್ಲಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ (DCM DK Shivakumar) ಆಗಮಿಸಬೇಕಿತ್ತು. ಎಲ್ಲರೂ ಸಿಎಂ ಡಿಸಿಎಂ ಬರುವಿಕೆಗೆ ಕಾದು ನಿಂತಿದ್ದರು. ಖಾಲಿ ಇದ್ದ ಕುರ್ಚಿಗಳಲ್ಲಿ ಬಂದು ಕುಳಿತುಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಕಾರ್ಯಕರ್ತೆ ಮಂಜುಳಾ ನಾಗರಾಜ್‌ ಎಂಬುವವರು ಒಂದು ಕುರ್ಚಿಯಲ್ಲಿ ಕೂರಲು ಹೋದ ಸಂದರ್ಭದಲ್ಲಿ ಗಲಾಟೆ ನಡೆದಿದೆ.

ಮಂಜುಳಾ ಅವರು ಚೇರ್‌ ಹಾಕಿಕೊಂಡು ಕೂರಲು ಹೋಗುತ್ತಿದ್ದಾಗ ಕೆಪಿಸಿಸಿ ಫೋಟೋಗ್ರಾಫರ್‌ ಮಂಜುನಾಥ್‌ ಎಂಬುವವರು, ಇಲ್ಲಿ ಕುತ್ಕೋಬೇಡಿ ಎಂದು ಹೇಳಿದಾಗ, ಸಿಟ್ಟುಗೊಂಡ ಮಹಿಳೆ ನಾನು ಏಕೆ ಇಲ್ಲಿ ಕೂತ್ಕೋಬಾರದು? ಎಂದು ಪ್ರಶ್ನೆ ಮಾಡಿದ್ದು ನಂತರ ಜೋರಾಗಿ ಗಲಾಟೆ ಆಗಿದೆ. ನಂತರ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ.

ಇದನ್ನೂ ಓದಿ: Love Jihad: ವಿವಾಹಿತ ಮುಸ್ಲಿಂ ಯುವಕನ ಮೋಸದಾಟಕ್ಕೆ ಬಿದ್ದ ಹಿಂದೂ ಯುವತಿ; ಮಗಳು ಕಿಡ್ನಾಪ್‌, ಪೋಷಕರ ಕಣ್ಣೀರು!!

ಫೋಟೋಗ್ರಾಫರ್‌ ತನ್ನ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದು, ಫೋಟೋ ತೆಗೆಯಲು ಕಷ್ಟ ಆಗುತ್ತದೆ ಇಲ್ಲಿ ಕುತ್ಕೊಂಡರೆ ಎಂದು ನಾನು ಹೇಳಿದ್ದು ಎಂದು ಹೇಳಿದ್ದಾರೆ. ಆದರೆ ಮಂಜುಳಾ ಅವರು ಇದನ್ನು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಹಾಗಾಗಿ ಗಲಾಟೆ ನಡೆದಿದೆ.

Leave A Reply

Your email address will not be published.