Home Karnataka State Politics Updates Parliament Election: ಲೋಕಸಭಾ ಚುನಾವಣೆ ಹಿನ್ನೆಲೆ : ನಾಗ್ಪುರದಲ್ಲಿ 3 ದಿನಗಳ ಪ್ರಮುಖ ಸಭೆ ನಡೆಸಲಿರುವ...

Parliament Election: ಲೋಕಸಭಾ ಚುನಾವಣೆ ಹಿನ್ನೆಲೆ : ನಾಗ್ಪುರದಲ್ಲಿ 3 ದಿನಗಳ ಪ್ರಮುಖ ಸಭೆ ನಡೆಸಲಿರುವ ಆರ್ ಎಸ್ ಎಸ್

Parliament Election

Hindu neighbor gifts plot of land

Hindu neighbour gifts land to Muslim journalist

ಇನ್ನೇನು ಲೋಕಸಭಾ ಚುನಾವಣೆ ಘೋಷಣೆ ಆಗುವ ಸಾಧ್ಯತೆಯಿದ್ದು ಈ ಹಿನ್ನೆಲೆ ಆರ್. ಎಸ್. ಎಸ್.ನ ಅತ್ಯುನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಸ್ಥೆ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎ. ಬಿ. ಪಿ. ಎಸ್.) ಮಾರ್ಚ್ 15ರಿಂದ ನಾಗ್ಪುರದಲ್ಲಿ ಪ್ರಮುಖ ಮೂರು ದಿನಗಳ ಸಭೆಯನ್ನು ನಡೆಸಲು ಸಜ್ಜಾಗಿದೆ.

ಇದನ್ನೂ ಓದಿ: BOB: ಬ್ಯಾಂಕ್ ಆಫ್ ಬರೋಡಾದಲ್ಲಿ ಹಣ ಇಟ್ಟವರಿಗೆ ಮಹತ್ವದ ಮಾಹಿತಿ

ಈ ಸಭೆಯಲ್ಲಿ 350ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಬಿಜೆಪಿ ಗುರಿಯ ಕುರಿತು, ರಾಷ್ಟ್ರವ್ಯಾಪಿ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನ, ಮಣಿಪುರ ಸಂಘರ್ಷ, ರೈತರ ಪ್ರತಿಭಟನೆ ಮತ್ತು ಇತರ ಪ್ರಮುಖ ವಿಷಯದ ಬಗ್ಗೆ ಚರ್ಚಿಸಲಿದ್ದಾರೆ.

ಬಿಜೆಪಿಪಕ್ಷದ ಅಧ್ಯಕ್ಷ ಜೆ. ಪಿ. ನಡ್ಡಾ, ಪ್ರಧಾನ ಕಾರ್ಯದರ್ಶಿ ಸುನಿಲ್ ಬನ್ಸಾಲ್ ಮತ್ತು ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಸೇರಿದಂತೆ ಹಿರಿಯ ಬಿಜೆಪಿ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಲಿದ್ದು, ಇದು 2025ರಲ್ಲಿ ಸಂಘಟನೆಯು ತನ್ನ ಶತಮಾನೋತ್ಸವವನ್ನು ಆಚರಿಸುತ್ತಿರುವಾಗ ಅದಕ್ಕೆ ಶ್ರಮಿಸುವಂತೆ ತನ್ನ ಕಾರ್ಯಕರ್ತರಿಗೆ ನಿರ್ದೇಶನಗಳನ್ನು ನೀಡುವ ನಿರೀಕ್ಷೆಯಿದೆ.

ಮುಂಬರುವ ಚುನಾವಣೆಯಲ್ಲಿ ಬಿಜೆಪಿ 350ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸುವ ಕಾರ್ಯತಂತ್ರಗಳನ್ನು ಈ ಸಭೆಯು ರೂಪಿಸುವ ನಿರೀಕ್ಷೆಯಿದೆ.